Ad Widget

ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆಯನ್ನು ಸುಳ್ಯದಲ್ಲಿ ನಡೆಸುವಂತೆ ತಹಶೀಲ್ದಾರರಿಗೆ ಬ್ಲಾಕ್ ಕಾಂಗ್ರೆಸ್ ಮನವಿ

ಗ್ರಾಮ ಪಂಚಾಯತ್ ಚುನಾವಣೆ 2020 ರ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಜ.23 ರಂದು ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ. ಈ ಮೀಸಲಾತಿ ಪ್ರಕ್ರಿಯೆಯನ್ನು ಆಯಾಯ ತಾಲೂಕು ಹಾಗೂ ಸುಳ್ಯ ತಾಲೂಕಿನ ಮೀಸಲಾತಿ ಪ್ರಕ್ರಿಯೆಯನ್ನು ಸುಳ್ಯದಲ್ಲಿ ನಡೆಸುವಂತೆ ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರ...

ನೂತನ ಸಚಿವ ಅಂಗಾರರಿಗೆ ಐನೆಕಿದು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅಭಿನಂದನೆ

ಐನೆಕಿದು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ನೂತನ ಸಚಿವರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಶಾಸಕ ಎಸ್ ಅಂಗಾರ ಅವರನ್ನು ಸುಬ್ರಹ್ಮಣ್ಯದಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಐನೆಕಿದು ಗ್ರಾಮ ಸಮಿತಿ ಅಧ್ಯಕ್ಷ ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ , ಐನೆಕಿದು- ಸುಬ್ರಹ್ಮಣ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಅಜಿತ್...
Ad Widget

ಶ್ರೀರಾಮ ಮಂದಿರ ನಿರ್ಮಾಣದ ಪ್ರಯುಕ್ತ ಐನೆಕಿದು ವ್ಯಾಪ್ತಿಯಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಪ್ರಯುಕ್ತ ಐನೆಕಿದು ವ್ಯಾಪ್ತಿಯಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ನಿನ್ನೆ ಕೋಟೆ ಅಶ್ವಥ್ ಕಟ್ಟೆಯಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಶಾರೀರಿಕ್ ಪ್ರಮುಖ್ ಭುಕ್ಷೀತ್ ನೀರ್ಪಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ ಹಿರಿಯ ಸ್ವಯಂ ಸೇವಕರಾದ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಸಿ.ಎ ಬ್ಯಾಂಕ್...

ಕೋಲ್ಚಾರು ಭಜನಾ ಮಂದಿರದಿಂದ ರಾಮ ಮಂದಿರ ನಿಧಿ ಸಂಗ್ರಹಕ್ಕೆ ಚಾಲನೆ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಂಗ್ರಹದ ಅಭಿಯಾನಕ್ಕೆ ಜ.16 ರಂದು ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಲಾಯಿತು.ಬಳಿಕ ಈ ಭಾಗದ ಹಿಂದೂ ಬಾಂಧವರ ಮನೆ ಮನೆಗೆ ತೆರಳಿ ಕೂಪನ್ ನೀಡಿ ನಿಧಿ ಸಂಗ್ರಹಕ್ಕೆ ತೆರಳಲಾಯಿತು . ಈ ಸಂದರ್ಭದಲ್ಲಿ ಶ್ರೀ ಶಾರದಾಂಬಾ ಭಜನ ಮಂದಿರದ ಅದ್ಯಕ್ಷ ಸೀತಾರಾಮ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವ ಅಂಗಾರ

ಸಚಿವರಾದ ಬಳಿಕ ಸಚಿವ ಅಂಗಾರರು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಲಾಸ್ಯ ಕಲಾ ಶಾಲೆಯ ಭಜನಾ ತಂಡ ಉದ್ಘಾಟನೆ

ಗುತ್ತಿಗಾರು ಲಾಸ್ಯ ಕಲಾ ಶಾಲೆಯ ವಿದ್ಯಾರ್ಥಿಗಳ ಭಜನಾ ತಂಡ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಥಮ ಭಜನಾ ಕಾರ್ಯಕ್ರಮ ನಡೆಸುವುದರ ಮುಖಾಂತರ ಜ. 15 ರಂದು ಉದ್ಘಾಟನೆಗೊಂಡಿತು.

ಕಳಂಜ : ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ಶ್ರೀ ರಘುನಾಥ ರೈ ಕಳಂಜ ಮತ್ತು ಊರ ಹತ್ತು ಸಮಸ್ತರಿಂದ ನಡೆಸಲ್ಪಡುವ 30ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಜ.15 ರಂದು ಕಳಂಜದ ವಿಷ್ಣುನಗರದಲ್ಲಿ ನಡೆಯಿತು. ಯಕ್ಷಗಾನ ಬಯಲಾಟವನ್ನು ಕಲಾಸಕ್ತರು, ಯಕ್ಷಾಭಿಮಾನಿಗಳು, ಊರವರು ವೀಕ್ಷಿಸಿ ಯಕ್ಷಗಾನದ ಸವಿಯುಂಡರು.

ಸಚಿವ ಅಂಗಾರರ ಯಶೋಗಾಥೆ – ಒಬ್ಬ ಸಂಘದ ಸಾಮಾನ್ಯ ಸ್ವಯಂ ಸೇವಕನಿಂದ ಶಾಸಕನವರೆಗೆ – ಒಬ್ಬ ಕೂಲಿ ಕಾರ್ಮಿಕನಿಂದ ರಾಜ್ಯ ಸಂಪುಟ ದರ್ಜೆಯ ಸಚಿವನವರೆಗೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಯಾವುದೋ ಒಂದು ಮೂಲೆಯಲ್ಲಿ ಅತ್ಯಂತ ನಿಷ್ಠೆಯಿಂದ ಸಂಘದ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ, ಹೊಟ್ಟೆ ಪಾಡಿಗಾಗಿ ಮನೆ ನಿರ್ವಹಣೆಗೆ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿನಗೂಲಿ ಕಾರ್ಮಿಕನಾಗಿ ದುಡಿದು ಇಂದು ತನ್ನ ನಿಸ್ವಾರ್ಥ ಸೇವೆಯಿಂದ ಆರು ಬಾರಿ ಸುಳ್ಯ ಕ್ಷೇತ್ರದ ಶಾಸಕನಾಗಿ , ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ...

ಸುಳ್ಯದಲ್ಲಿ ಸಚಿವರಿಗೆ ಅದ್ದೂರಿ ಸ್ವಾಗತ – ಮೆರವಣಿಗೆ – ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷೋದ್ಘಾರ

https://youtu.be/7AvJ43aHK94 ಸುಳ್ಯಕ್ಕೆ ಆಗಮಿಸಿದ ಸಚಿವ ಅಂಗಾರರಿಗೆ ಮುಖಂಡರು ಹಾಗೂ ಕಾರ್ಯಕರ್ತರ ಭವ್ಯ ಸ್ವಾಗತ ದೊರೆಯಿತು. ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಸಾಗಿ ಬಂದ ಸಚಿವರಿಗೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪಕ್ಷಭೇದ ಮರೆತು ಅಭಿನಂದಿಸಿದರು. ಸಚಿವ ಅಂಗಾರರು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಮರ್ಪಿಸಿದರು.

ಜಾಲ್ಸೂರು ತಲುಪಿದ ಸಚಿವ ಅಂಗಾರರಿಗೆ ಭವ್ಯ ಸ್ವಾಗತ

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸ್ವಕ್ಷೇತ್ರಕ್ಕೆ ಮೊದಲ ಭೇಟಿ ಮಾಡುತ್ತಿರುವ ಸಚಿವ ಅಂಗಾರರಿಗೆ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ನೀಡಲಾಯಿತು. ಜಾಲ್ಸೂರು ನಿಂದ ಸುಳ್ಯದವರೆಗೆ ವಾಹನ ಜಾಥಾ ಹಾಗೂ ಜ್ಯೋತಿ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಭವ್ಯವಾದ ಮೆರವಣಿಗೆ ಮುಖಾಂತರ ನೂತನ ಸಚಿವರಿಗೆ ಅದ್ದೂರಿ ಸ್ವಾಗತ ನಡೆಯಲಿದೆ.
Loading posts...

All posts loaded

No more posts

error: Content is protected !!