- Monday
- March 3rd, 2025

ನಾರ್ಣಕಜೆ ಬಸ್ ನಿಲ್ದಾಣದ ಸಮೀಪ ಇಂದು ಮುಖ್ಯ ರಸ್ತೆಗೆ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ತಡೆಯುಂಟಾಗಿತ್ತು. ವಿದ್ಯುತ್ ಲೈನ್ ನ ಎರಡು ಕಂಬಗಳು ಮುರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು.

ಸುಳ್ಯದ ಎಲ್ಲಾ ವರ್ತಕರು ಕಳೆದ ಎರಡು ತಿಂಗಳಿಂದ ವ್ಯವಹಾರ ಸ್ಥಗಿತ ಗೊಳಿಸಿ ಸಂಕಷ್ಟದಲ್ಲಿರುವಾಗ ಸರಕಾರದ ಆದೇಶದ ಹೆಸರಿನಲ್ಲಿ ವಿಪರೀತ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ವಸೂಲು ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ನಗರ ಬಿಜೆಪಿ ಅಭಿಪ್ರಾಯ ಪಟ್ಟಿದೆ.ಈ ಬಾರಿಯ ಅಂಗಡಿ ಲೈಸೆನ್ಸ್ ನವೀಕರಣಕ್ಕೆ ವರ್ತಕರು ನೀಡಿದ ಸಂದರ್ಭದಲ್ಲಿ ವಿವಿಧ ರೀತಿಯ ವ್ಯವಹಾರಗಳಿಗೆ 600ರೂ ನಿಂದ...

ಸುಳ್ಯ ತಾಲೂಕಿನ ಹಲವು ವರ್ಷಗಳ ಕನಸಾಗಿರುವ 110 ಕೆವಿ ವಿದ್ಯುತ್ ವಿತರಣಾ ಸಬ್ ಸ್ಟೆಷನ್ ಕಾಮಗಾರಿಯ ಬಗ್ಗೆ ಕೊರೋನ ವೈರಸ್ ಸಮಸ್ಯೆ ಮುಗಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವುದಾಗಿ ಶಾಸಕ ಅಂಗಾರ ಹೇಳಿದರು.ಮೇ 17ರಂದು ಸುಳ್ಯ ಐ ಬಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಕಾಮಗಾರಿಗೆ ಅರಣ್ಯ ಭೂಮಿ ಮಂಜೂರಾತಿ...

ಕನಕಮಜಲ ಗ್ರಾಮದ ಪಂಜಿಗುಂಡಿ ಕಾಲನಿ ಬಳಿ ಮೇ ೧೬ ರಂದು ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ ವಾಗಿತ್ತು. ಸ್ಥಳೀಯ ನಿವಾಸಿಗಳು ಉರಗ ಪ್ರೇಮಿ ಜಾಲ್ಸೂರಿನ ಶ್ಯಾಮ್ ಭಟ್ ಅವರಿಗೆ ತಿಳಿಸಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ಶ್ಯಾಮ್ ಭಟ್ ಕಾಳಿಂಗ ಸರ್ಪವನ್ನು ಮೇ.೧೭ ರಂದು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಮೇ ೧೭ ನಡೆದಿದೆ. ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ...

ಸುಳ್ಯ (ದಕ್ಷಿಣ ಕನ್ನಡ): ಲಾಕ್ಡೌನ್ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿಯಿಂದ ಹೊರಬಂದು ಬಡ ವ್ಯಕ್ತಿಯ ಮನೆ ಛಾವಣಿ ಏರಿ, ಮನೆ ರಿಪೇರಿ ಮಾಡಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ ಗುತ್ತಿಗಾರು ನೇತೃತ್ವದ ಕೋವಿಡ್ ಕಾರ್ಯಪಡೆ ಮಾನವೀಯತೆಯ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದೆ. ವಾಸಯೋಗ್ಯ ಮನೆ ಇಲ್ಲದೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಯ ನಡುವ ಮಳೆಗಾಲದ...