Ad Widget

ಗ್ರಾ.ಪಂ.ಗಳಿಗೆ ನಾಮನಿರ್ದೇಶನ ಬದಲು ಚುನಾವಣೆ ನಡೆಸಲು ಒತ್ತಾಯ

ಸರಕಾರ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಮಾಡುವ ಪ್ರಕ್ರಿಯೆ ಸರಿಯಲ್ಲ. ಕೂಡಲೇ ಸರ್ಕಾರದಿಂದ ಆಡಳಿತ ಅಧಿಕಾರಿ ನೇಮಕ ಮಾಡಬೇಕು ಅಥವಾ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಅರಂತೋಡು ಗ್ರಾ.ಪಂ.ಸದಸ್ಯ ರವೀಂದ್ರ ಪಂಜಿಕೋಡಿ ಒತ್ತಾಯಿಸಿದ್ದಾರೆ.

ವಿಮಾನಯಾನ ಸೇವೆ ಇಂದಿನಿಂದ ಆರಂಭ- ಶಾಂತವಾಗಿದ್ದ ಆಕಾಶದಲ್ಲಿ ಮತ್ತೆ ಆರ್ಭಟಿಸಲಿವೇ

ಸುಮಾರು ಎರಡು ತಿಂಗಳಿಂದ ಬಂದ್ ಆಗಿರುವ ದೇಶೀಯ ವಿಮಾನಯಾನ ಸೇವೆ ಮೇ 25 ಸೋಮವಾರದಿಂದ ಆರಂಭವಾಗಲಿದೆ. ವಿಮಾನ ರೈಲು ಮತ್ತು ಅಂತರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಎರಡು ಗಂಟೆ ಮೊದಲು ತಲುಪಿ ತಪಾಸಣೆಗೆ ಒಳಪಡಬೇಕು. ಕಡ್ಡಾಯ ಮಾಸ್ಕ್ ಧರಿಸಬೇಕು. ಕಡಿಮೆ ಲಗೇಜ್ ತೆಗೆದುಕೊಂಡು ಹೋಗಬೇಕು....
Ad Widget

ಕಾಸರಗೋಡು ಐದು ಸೋಂಕಿತರ ಪತ್ತೆ

ಕಾಸರಗೋಡು ಜಿಲ್ಲೆಯಲ್ಲಿ ಆದಿತ್ಯವಾರ ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.ಇವರೆಲ್ಲರೂ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ

ವಿನೋದ್ ಕುಮಾರ್ – ಸೌಮ್ಯ

ಕಾಸರಗೋಡು ತಾಲೂಕು ಬಂದಡ್ಕ ಗ್ರಾಮದ ಇಳಂದಿಲ ದಿ. ದೇವಪ್ಪ ಗೌಡರ ಪುತ್ರ, ಕೆ.ಎಸ್.ಆರ್.ಟಿ.ಸಿ ಚಾಲಕ ವಿನೋದ್ ಕುಮಾರ್ ರ ವಿವಾಹವು ಚೆಂಬು ಗ್ರಾಮದ ದಬ್ಬಡ್ಕ ಅಡ್ಪಂಗಾಯ ಸೋಮನಾಥ ಗೌಡರ ಪುತ್ರಿ ಸೌಮ್ಯ ರೊಂದಿಗೆ ಮೇ. 24 ರಂದು ನಡೆಯಿತು.

ಇಂದಿನಿಂದ ದೇಶಿಯ ವಿಮಾನಯಾನ ಸೇವೆ ಆರಂಭ

ಲಾಕ್ ಡೌನ್ ಸಡಿಲಿಕೆ ಬಳಿಕ ಇಂದಿನಿಂದ ದೇಶಿಯ ವಿಮಾನಯಾನ ಸೇವೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ.

ವಿಟ್ಲ: ಪೋಲೀಸ್ ಪೇದೆಗೆ ಕೊರೊನ ದೃಢ

ದಕ್ಷಿಣ ಕನ್ನಡದಲ್ಲಿ ಇವತ್ತು ಒಂದು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ. ವಿಟ್ಲದ ಪೊಲೀಸ್ ಪೇದೆ ಯೊಬ್ಬರಿಗೆ ಕೋರೋನಾ ಇರುವುದು ದೃಢವಾಗಿದೆ. ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ಕ್ವಾರಂಟೈನ್‌ಗೆ ಒಳಗಾಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ಕೊರೋನಾ ಪರೀಕ್ಷೆ ನಡೆಸಿದ ವೇಳೆ ಒರ್ವ...

ಸುಬ್ರಹ್ಮಣ್ಯ ಲಾಕ್ ಡೌನ್ ತುರ್ತು ಅಗತ್ಯತೆ ಮಾತ್ರ ಲಭ್ಯ

ಸುಬ್ರಹ್ಮಣ್ಯ ದೇವಸ್ಥಾನ ತೆರೆಯದೇ ಇರುವುದರಿಂದ ಭಕ್ತಾದಿಗಳು ಇಲ್ಲ. ಅದು ಅಲ್ಲದೇ ಇಂದು ಸಂಡೇ ಲಾಕ್ ಡೌನ್ ನಿಯಮ ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ.ಪೋಲಿಸರು ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು...

ಪೆರುವಾಜೆ : ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಾಟ್ಸಾಪ್ ಸ್ಪರ್ಧೆಗಳ ಫಲಿತಾಂಶ

ಸುಳ್ಯ ತಾಲೂಕಿನ ಗ್ರಾಮದ ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ ವಿವಿಧ ಸ್ಪರ್ದೆಗಳಿಗೆ ಮುನ್ನೂರಕ್ಕೂ ಅಧಿಕ ಮಂದಿ ಪ್ರವೇಶ ಪತ್ರ ಕಳುಹಿಸಿದ್ದು, ಇದರ ವಿವಿಧ ವಿಭಾಗವಾರು ಫಲಿತಾಂಶ ಹೀಗಿದೆ ವಿಭಾಗವಾರು ಸ್ಪರ್ಧೆಗಳ ಫಲಿತಾಂಶ ಕಿರಿಯ...

ಅರಂತೋಡು ಸಂಪೂರ್ಣ ಲಾಕ್

ಅರಂತೋಡು, ಕಲ್ಲುಗುಂಡಿ ,ಸಂಪಾಜೆ ಪೇಟೆಯಲ್ಲಿ ಕೆಲವೇ ತುರ್ತು ಸೇವೆಗಳ ಅಂಗಡಿಗಳು ಹೊರತುಪಡಿಸಿದರೆ ಸಂಪೂರ್ಣ ಸಂಡೆ ಲಾಕ್ ಡೌನ್ ವ್ಯಾಪಾರ ಸ್ಥರು ಹಾಗೂ ಜನತೆ ಸಹಕಾರ ನೀಡಿರುವುದು ಕಂಡುಬರುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಇಲ್ಲಿದೇ ಅವಕಾಶ

ಮಳೆಗಾಲ ಪ್ರಾರಂಭವಾಗುತ್ತಿದ್ದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ತಮ್ಮ ಜಮೀನುಗಳಲ್ಲಿ ಅಡಿಕೆ ,ಏಡೆ ಅಡಿಕೆ ಸಸಿ ತೆಂಗು ಕೃಷಿ ,ಗೇರು ಕೃಷಿ, ಕೋಕೋ ಗಿಡನೆಡುವುದು, ಕಾಳುಮೆಣಸು ಕೃಷಿ, ವೀಳ್ಯದೆಲೆ ಕೃಷಿ, ಅಂಗಾಂಶ ಬಾಳೆ ಕೃಷಿ ಮಾಡುವ ಬಗ್ಗೆ ಮಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಲಭ್ಯವಿದೆ. ಈ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವವರು...
Loading posts...

All posts loaded

No more posts

error: Content is protected !!