Ad Widget

ನಾಗತೀರ್ಥ : ಯುಗಾದಿ ಪ್ರಯುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಎಂ.ಎಂ.ಸಿ ನಾಗತೀರ್ಥ ಇದರ ಆಶ್ರಯದಲ್ಲಿಯುಗಾದಿ ಹಬ್ಬದ ಪ್ರಯುಕ್ತ 4 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುಗಾದಿ ಕಪ್ 2021 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗ ಮೈದಾನದಲ್ಲಿ ನಡೆಯಿತು. ಹಿರಿಯ ಆಟಗಾರ ಪುರುಷೋತ್ತಮ ನಾಗತೀರ್ಥ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ಕುದ್ವ ,ಪಂಚಶ್ರೀ ಪಂಜ...

ಕಮಿಲ : ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ನೇಮ

ಕಮಿಲದ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದಲ್ಲಿ  ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ಸೋಮವಾರ ನಡೆಯಿತು. ಬೆಳಗ್ಗೆ  ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ನಡೆಯಿತು. ಈ ಸಂದರ್ಭ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದ ಆಡಳಿತ ಮೊಕ್ತೇಸರ ಗುರುರಾಜ ಭಟ್‌ ಪುಚ್ಚಪ್ಪಾಡಿ, ಆಡಳಿತ ಸಮಿತಿ ಅಧ್ಯಕ್ಷ ಕೆ ಎಸ್‌ ಶೂರಪ್ಪ...
Ad Widget

ಶ್ರೀ ಧೂಮಾವತೀ ದೈವಸ್ಥಾನ ಕಿಲಂಗೋಡಿಯಲ್ಲಿ ವಾರ್ಷಿಕ ಜಾತ್ರೆ

ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ವಾರ್ಷಿಕ ಜಾತ್ರೋತ್ಸವ ಎ.12 ಹಾಗೂ 13ರಂದು ನಡೆಯಿತು. ಎ.12 ಸೋಮವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಹರಕೆಯ ಶ್ರೀ ಧೂಮಾವತೀ ನೇಮೋತ್ಸವ ಜರುಗಿತು. ರಾತ್ರಿ ಗಂಟೆ 8.00ರಿಂದ ಶ್ರೀ ಮುಕಾಂಬಿ (ಅಗ್ನಿ) ಗುಳಿಗ ಮತ್ತು ಪರಿವಾರ...

ಬೆಳ್ಳಾರೆ ಸ್ಟಾಂಡರ್ಡ್ ಮೈಕ್ & ಲೈಟಿಂಗ್ಸ್ ನಲ್ಲಿ ಯುಗಾದಿ ಪ್ರಯುಕ್ತ ಗಣಹೋಮ

ಬೆಳ್ಳಾರೆ ಸ್ಟಾಂಡರ್ಡ್ ಮೈಕ್ & ಲೈಟಿಂಗ್ಸ್ ನಲ್ಲಿ ಯುಗಾದಿ ಪ್ರಯುಕ್ತ ಗಣಹೋಮ ಎ.13 ರಂದು ನಡೆಯಿತು. ಸಂಸ್ಥೆಯ ಮಾಲಕರಾದ ಸುಬ್ರಾಯ ಭಾರದ್ವಾಜ್, ವಿಶ್ವನಾಥ ಭಾರದ್ವಾಜ್, ಮನೆಯವರು ಹಾಗೂ ಇತರರು ಉಪಸ್ಥಿತರಿದ್ದರು.

ಸುಳ್ಯ : ಬಡವರ ರಸ್ತೆ ಅಭಿವೃದ್ಧಿ ಮಾಡದೇ ತಾರತಮ್ಯ ಎಸಗಿದ ಆಡಳಿತ – ರಸ್ತೆ ಅಭಿವೃದ್ಧಿ ಮಾಡುತ್ತೇವೆ : ವಿನಯಕುಮಾರ್ ಕಂದಡ್ಕ

ಸುಳ್ಯ ನಗರದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಹಾಗೂ ಸೀತಮ್ಮ ಅವರ ಮನೆಗೆ ತೆರಳುವ ದಾರಿ ಅಭಿವೃದ್ಧಿ ಕಾಣದೇ ಹಳ್ಳಹಿಡಿದಿದೆ. ಕತ್ತಲೆಯಲ್ಲಿದ್ದ ನಾರಾಯಣ ಅವರ ಮನೆಗೆ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಬೆಳಕು ಕಾಣುವಂತಾಗಿದೆ. ಆದರೇ ಇವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಡವರಾದರೇ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಈ...

ಸುಳ್ಯ : ನಿರ್ಲಕ್ಷ್ಯಕ್ಕೆ ಒಳಗಾಗಿ ಕತ್ತಲಲ್ಲಿದ್ದ ಮನೆಗೆ ಬೆಳಕು ನೀಡಿದ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್

ಸುಳ್ಯ ನಗರ ಮಧ್ಯಭಾಗದಲ್ಲಿರುವ ಕೆರೆಮೂಲೆಯಲ್ಲಿ ಹಲವಾರು ವರ್ಷಗಳಿಂದ ಕತ್ತಲಲ್ಲಿದ್ದ ಮನೆಗೆ ಯುಗಾದಿ ದಿನದಂದು ಬೆಳಕು ಕಂಡಿದೆ.ಸೇವಾ ಭಾರತಿ ಸುಳ್ಯ ವತಿಯಿಂದ ಸೆಲ್ಕೋ ಸೋಲಾರ್ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದ್ದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಎಂಬ ಬಡ ಕುಟುಂಬಕ್ಕೆ ಸೋಲಾರ್ ದೀಪ ಅಳವಡಿಸಲಾಯಿತು. ಇವರಿಗೆ ಒಬ್ಬಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೇರಿದಂತೆ ಮೂವರು...

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದಿಂದ ಸೇತುವೆಗೆ ಅಡ್ಡಲಾಗಿದ್ದ ಮರಗಳ ತೆರವು

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಎ.𝟏𝟎ರಂದು ಹರಿಹರ-ಐನೆಕಿದು ರಸ್ತೆಯ ಗುಂಡಡ್ಕ ಸೇತುವೆಗೆ ಸಿಲುಕಿದ್ದ ಕಸ-ಕಡ್ಡಿ ಹಾಗೂ ಮರಗಳನ್ನು ತೆರವುಗೊಳಿಸಲಾಯಿತು.ನಂತರ ಹರಿಹರ ಪಲ್ಲತ್ತಡ್ಕ ಮುಖ್ಯ ಪೇಟೆಯಲ್ಲಿರುವ ಸೇತುವೆಗೆ ಅಡ್ಡಲಾಗಿ ಸಿಲುಕಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ- ಸತೀಶ್.ಟಿ.ಎನ್., ಮಣಿಕಂಠ ಹಾಗೂ ಸ್ವಯಂಸೇವಕರಾದ ಜಯಪ್ರಕಾಶ್, ಲಕ್ಷ್ಮಣ, ಚಂದ್ರಶೇಖರ ಕೋನಡ್ಕ,...

ಸುಳ್ಯ : ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ

ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ೩ ಕೋಟಿ ರೂಗಳ ವಿವಿಧ ರಸ್ತೆಗಳ ಕಾಮಗಾರಿಗಳ ಗುದ್ದಲಿಪೂಜೆಯನ್ನು ಸಚಿವ ಅಂಗಾರ ನೆರವೇರಿಸಿದರು. ಕೇರ್ಪಳ- ಬೂಡು ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನ ತರಲು ನಾವು ಬದ್ಧರಾಗಿದ್ದೇವೆ. ಆದರೆ ಕೆಲವು ಕಡೆ ಜನರು ಭೂ ಒತ್ತುವರಿ ಮಾಡಿಕೊಂಡು ಅಥವಾ ಸ್ಥಳ ಬಿಟ್ಟುಕೊಡದೇ ರಸ್ತೆ ನಿರ್ಮಾಣಕ್ಕೆ...

ಸುಳ್ಯ : ಎನ್.ಎಸ್.ಯು.ಐ. 50 ನೇ ವರ್ಷಾಚರಣೆಯ ಅಂಗವಾಗಿ ಧ್ವಜಾರೋಹಣ

ಎನ್ ಎಸ್ ಯು ಐ 50 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಧ್ವಜಾರೋಹಣವನು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘದಲ್ಲಿ ಕಾರ್ಯನಿರ್ವಹಿಸಿದರು ಹಲವು...

ಮಂಗಳೂರಿನಲ್ಲಿ ಅಕ್ಷತಾ ಪ್ರಸಾದ್ ತೊಡಿಕಾನ ಮಾಲಕತ್ವದ ಹೋಟೆಲ್ ಆರಾಧ್ ಶುಭಾರಂಭ

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿ ತೊಡಿಕಾನದ ಅಕ್ಷತಾ ಪ್ರಸಾದ್ ಉಳುವಾರು ಮಾಲಕತ್ವದ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಆರಾಧ್ ಮಾ. 31 ರಂದು ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಮಹಾಬಲ ಕರ್ಕೆರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಹಾಬಲೇಶ್ವರ ಚೊಕ್ಕಾಡಿ, ಯಶೋಧ ಉಳುವಾರು, ಶುಭ ಚೊಕ್ಕಾಡಿ, ಶ್ರೀಧರ ಶೇಟ್, ಗಜಾನನ ಶೇಟ್, ಮಮತಾ ಶ್ರೀಕಾಂತ್,...
Loading posts...

All posts loaded

No more posts

error: Content is protected !!