Ad Widget

ಮುತ್ತಕ್ಕ ಕುಕ್ಕೇಟಿ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ ದಿ. ಸುಬ್ಬಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಮುತ್ತಕ್ಕರವರು ಮೇ.22 ರಂದು ಮುಂಜಾನೆ ನಿಧನರಾದರು.ಮೃತರು ಪುತ್ರರಾದ ಯಶವಂತ ಗೌಡ ಕುಕ್ಕೇಟಿ, ಗಂಗಾಧರ ಗೌಡ ನೆಟ್ಟಣ, ದಯಾನಂದ ಗೌಡ ನಾವೂರು, ಪುರೂಷೋತ್ತಮ ಗೌಡ ಕೊಲ್ಯ, ಶಿವರಾಮ ಗೌಡ ಕುಕ್ಕೇಟಿ, ಪುತ್ರಿಯರಾದ ಶ್ರೀಮತಿ ಶೇಷಮ್ಮ ಉತ್ತಯ್ಯ ಗೌಡ ಬೊಳುಗಲ್ಲು, ಶ್ರೀಮತಿ ಲಲಿತಾ ಚಂದ್ರಶೇಖರ್ ಗೌಡ,...

ಮತ್ತೆ 14 ದಿನ ಲಾಕ್‌ಡೌನ್ : ಜೂನ್ 7 ರವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೋಲೀಸರಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್‌ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....
Ad Widget

ಕೊಲ್ಲಮೊಗ್ರ : ಬೈಕ್ ಸವಾರ ಬಿದ್ದು ಗಾಯ – ಅಕ್ರಮ ಮದ್ಯ ಸಾಗಾಟ ಶಂಕೆ

ಲಾಕ್ ಡೌನ್ ವೇಳೆಯಲ್ಲಿ ಕೊಲ್ಲಮೊಗ್ರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ರೇಟ್ ಆಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಲೋಕನಾಥ ರೈ ಶಿವಾಲ ಅವರ ಬೈಕ್ ಬಾಕ್ಸ್ ನ ತುಂಬ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಅಬಕಾರಿ ಇಲಾಖೆಗೆ ದೂರು...

ಕೊಲ್ಲಮೊಗ್ರ : ರಸ್ತೆಗೆ ಬಿದ್ದ ಮರ ಸ್ಥಳೀಯರಿಂದ ತೆರವು

ಕೊಲ್ಲಮೊಗ್ರ ಹರಿಹರ ರಸ್ತೆಯ ನಿಲ್ಕೂರು ಬಳಿ ರಸ್ತೆಗೆ ಇಂದು ಮುಂಜಾನೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಪಂದಿಸಿದ ಲವಿತ್ ಪಡ್ಪು, ಚಂದ್ರ ನಂಗಾರು, ಶಶಿ ತೋಟದಮಜಲು ಸ್ಥಳಿಯರ ಸಹಕಾರದಿಂದ ತೆರವುಗೊಳಿಸಿದರು.

ಕಂದ್ರಪ್ಪಾಡಿ : ಕೊರೊನಾ ವಾರಿಯರ್ಸ್ ಹಾಗೂ ಗ್ರಾ.ಪಂ.ಸದಸ್ಯರ ನೇತೃತ್ವದಲ್ಲಿ ಪಡಿತರ ವಿತರಣೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪಡಿತರ ವಿತರಣಾ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್ ಗಳಾದ ಶಶಿಧರ್ ಬಾಳೆಗುಡ್ಡೆ,ಮುಖೇಶ್ ಪಡ್ಪು, ಚಂದ್ರಶೇಖರ್ ಕಡೋಡಿ, ರಾಜೇಶ್ ಅಂಬೆಕಲ್ಲು, ಪುನೀತ್ ಮುಂಡೋಡಿ, ಶಿವಪ್ರಕಾಶ್ ಕಡಪಳ, ಪಂಚಾಯತ್ ಸದಸ್ಯ ರಮೇಶ್ ಪಡ್ಪು, ಶೈಲೇಶ್ ಅಂಬೆಕಲ್ಲು ಹಾಗೂ ಸಹಕಾರ ಸಂಘದ ಸಿಬ್ಬಂದಿ ಪಡಿತರ ವಿತರಣೆಗೆ ಸಹಕಾರ ನೀಡಿದರು.

ವಾಲ್ತಾಜೆ : ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಸ್ಥಳೀಯಾಡಳಿತ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ತಾಜೆ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಗ್ರಾ.ಪಂ.ಸದಸ್ಯರು ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದರು. ಈ ವೇಳೆ ಗ್ರಾ.ಪಂ‌. ಸದಸ್ಯ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ಪಿಡಿಓ ಗುರುಪ್ರಸಾದ್ ಉಪಸ್ಥಿತರಿದ್ದರು.

ಅರೆಬಾಸೆ ಪದ್ಯ ಕವನಗಳ ಗಮ್ಮತ್ – ಆನ್ಲೈನ್ ಸ್ಪರ್ಧಾ ಕಾರ್ಯಕ್ರಮ

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು...

ಬೇಸಿಗೆಯಲ್ಲಿ ಧೂಳುಮಯ – ಮಳೆಗೆ ಜನಪ್ರತಿನಿಧಿಗಳಿಂದ ಕೆಸರೆರೆಚಾಟ – ಇದು ಸೇವಾಜೆ ಮಡಪ್ಪಾಡಿ ರಸ್ತೆಯ ಅವ್ಯವಸ್ಥೆ

ಪ್ರತಿಷ್ಠಿತ ಗ್ರಾಮ ಮಡಪ್ಪಾಡಿ ಆದರೇ ರಸ್ತೆ ಬಗ್ಗೆ ಮಾತ್ರ ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸೇವಾಜೆಯಿಂದ ಮಡಪ್ಪಾಡಿಗೆ ಸಾಗುವ ರಸ್ತೆ ಕೆಲವೆ ವರ್ಷಗಳ ಹಿಂದೆ ಮರುಡಾಮರೀಕರಣ ನಡೆದಿದ್ದರೂ ಡಾಮರು ಕಿತ್ತು ಹೋಗಿ ರಸ್ತೆ ಮತ್ತೆ ಅಸ್ತವ್ಯಸ್ತವಾಗಿದೆ ಸೇವಾಜೆಯಿಂದ ಕಜೆವರೆಗಿನ ರಸ್ತೆ ಗುಂಡಿಗಳಿಗೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಈ ಮಣ್ಣು ಬೇಸಿಗೆ ಕಾಲವಿಡೀ...

ಹರಿಹರ ಪಲ್ಲತ್ತಡ್ಕ :- ತುರ್ತು ಸೇವೆಗಳಿಗೆ ತನ್ನ ವಾಹನವನ್ನು ಮೀಸಲಿಟ್ಟ ಸ್ವಯಂಸೇವಕ

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ತುರ್ತು ಸೇವೆಗಳಿಗಾಗಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮುತ್ತಪ್ಪ ಅವರು ತಮ್ಮ ಸ್ವಂತ ವಾಹನವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ. ಮೇ.17 ರಂದು ಬಳ್ಪ ಗ್ರಾಮದ ಕ್ಯಾನ್ಸರ್ ರೋಗಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಅವರನ್ನು ಮಂಗಳೂರಿನ ಎ.ಜೆ ಅಸ್ಪತ್ರೆಗೆ ಅಡ್ಮಿಟ್ ಮಾಡಲು ಕರೆದುಕೊಂಡು ಹೋಗಲು ಹಾಗೂ...

ಕೋಡಿಬೈಲ್ ಏಜೆನ್ಸೀಸ್ ಮಾಲಕ ಸತ್ಯನಾರಾಯಣ ರಸ್ತೆ ಅಪಘಾತಕ್ಕೆ ಬಲಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪುತ್ತೂರಿನ ತೆಂಕಿಲದಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರರಾಗಿದ್ದ ಉದ್ಯಮಿ ಬೆಳ್ಳಾರೆಯ ಕೋಡಿಬೈಲು ಸತ್ಯನಾರಾಯಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.ಅವರು ಬೆಳ್ಳಾರೆಯಿಂದ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ....
Loading posts...

All posts loaded

No more posts

error: Content is protected !!