Ad Widget

ದೇವಚಳ್ಳ : ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮರವರ ಏಕೈಕ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಇಂದು ನಡೆದಿದೆ.ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಇಂದು ನಿಧನರಾದರೆಂದು ತಿಳಿದುಬಂದಿದೆ.ಇವರು ಸುಬ್ರಹ್ಮಣ್ಯ...

ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡ ಸರ್ಕಾರ, ಗ್ರಾಮ ಪಂಚಾಯತ್ ಅನುದಾನಕ್ಕೆ ಕೈ ಹಾಕಿರುವುದು ಖಂಡನೀಯ

ಕೋವಿಡ್-19 ಎರಡನೇ ಅಲೆಯು ಆರಂಭವಾಗುವುದಕ್ಕಿಂತ ಮೊದಲು ಅದನ್ನು ತಡೆಗಟ್ಟಲು ಬೇಕಾದಂತಹ ಯೋಜನೆಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಬಿಜೆಪಿ ಸರಕಾರ ಎಲ್ಲದರಲ್ಲೂ ಕೂಡ ವೈಫಲ್ಯವನ್ನು ಕಂಡು ಕೋವಿಡ್ ನಿರ್ವಹಣೆ ಮಾಡಲು ಸಾಧ್ಯವಾಗದೇ ಕೈ ತೊಳೆದು ಕೊಂಡಿದೆ.ಸರ್ಕಾರವು ತನ್ನ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗದ ನಿಟ್ಟಿನಲ್ಲಿ ಆಕ್ಸಿಜನ್ ಕೊರತೆಯಿಂದ,ಬೆಡ್ ಗಳ ಸೌಲಭ್ಯಗಳ ಕೊರತೆಯಿಂದ, ವ್ಯಾಕ್ಸಿನ್ ಅಲಭ್ಯತೆಯಿಂದ ಹಲವು ಜೀವಗಳು...
Ad Widget

ಗುತ್ತಿಗಾರು : ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಣೆ

ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕೃಷ್ಣನಗರ ಗುತ್ತಿಗಾರು ಇದರ ವತಿಯಿಂದ ಜೂ.13 ರಂದು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ 15 ಕುಟುಂಬಗಳಿಗೆ ದಿನಬಳಕೆಯ ಅಗತ್ಯ ದಿನಸಿ ಸಾಮಾಗ್ರಿಗಳನ್ನು ದಾನಿಗಳ ನೆರವಿನಿಂದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಭಕ್ತರು ಉಪಸ್ಥಿತರಿದ್ದರು. ✍ಉಲ್ಲಾಸ್ ಕಜ್ಜೋಡಿ

ಸುಳ್ಯದಲ್ಲಿ ಇಂದು 46 ಕೋವಿಡ್ ಪಾಸಿಟಿವ್ – 456 ಸಕ್ರೀಯ ಪ್ರಕರಣ

ಸುಳ್ಯ ತಾಲೂಕಿನಲ್ಲಿ ಇಂದು 46 ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 456 ಸಕ್ರೀಯ ಪ್ರಕರಣಗಳಿವೆ.

ಬೆಳ್ಳಾರೆ : ಝಕರಿಯಾ ಜುಮಾ ಮಸೀದಿ ಹಿತರಕ್ಷಣಾ ಸಮಿತಿ ವತಿಯಿಂದ ಕೋವಿಡ್ ಕಿಟ್ ವಿತರಣೆ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಹಿತರಕ್ಷಣಾ ಸಮಿತಿ ವತಿಯಿಂದ ಬೆಳ್ಳಾರೆಯ ಅರ್ಹ ಬಡಕುಟುಂಬಗಳಿಗೆ ಕೋವಿಡ್ ಕಿಟ್ ವಿತರಣೆಗೆ ಜೂನ್ 12 ರಂದು ಚಾಲನೆ ನೀಡಲಾಯಿತು.ಹಿತರಕ್ಷಣಾ ಸಮಿತಿಯ ಗೌರವ ಸಲಹೆಗಾರರಾದ ಯು ಹೆಚ್ ಅಬೂಬಕ್ಕರ್ , ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ,ಸಮಿತಿಯ ಅಧ್ಯಕ್ಷ ಮೊಯ್ದು ಕುಂಞ ಪನ್ನೆ , ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಕೆ ಎಸ್,...

ದೇವಚಳ್ಳ : ಸೇವಾ ಭಾರತಿ ಮತ್ತು ಸಚಿವ ಎಸ್. ಅಂಗಾರ ರವರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ

ದೇವಚಳ್ಳ ಗ್ರಾಮದ ದೇವ ಕಾಲೋನಿ ಮತ್ತು ಅಡ್ಡನಪಾರೆಯಲ್ಲಿ ಕೋವಿಡ್ ಸಂತ್ರಸ್ತರಿಗೆ ಸೇವಾ ಭಾರತಿ ಮತ್ತು ಸಚಿವರಾದ ಎಸ್. ಅಂಗಾರ ರವರ ನೇತೃತ್ವದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಎಪಿಎಂಸಿ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು,...

ಜೂ 14 – 21 ಸುಳ್ಯ ತಾಲೂಕಿನ 5 ಗ್ರಾ.ಪಂ. ಲಾಕ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50 ಕ್ಕಿಂತ ಹೆಚ್ಚು ಸಕ್ರೀಯ ಪ್ರಕರಣಗಳಿರುವ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡನ್ನು ಜೂ 14 ರಿಂದ 21 ರವರೆಗೆ ಲಾಕ್ ಡೌನ್ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜೂ. 14 ಬೆಳಿಗ್ಗೆ 9 ರಿಂದ ಜೂ 21 ಬೆಳಿಗ್ಗೆ 9 ರವರೆಗೆ ಲಾಕ್ ಡೌನ್ ಆಗಲಿದೆ....

ಚಂದ್ರಕಲಾ‌ ಮೋಂಟಡ್ಕ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ, ನಿವೃತ್ತ ಹೆಲ್ತ್ ಇನ್ಸ್ ಪೆಕ್ಟರ್ ದಿ. ಬಾಲಕೃಷ್ಣ ಗೌಡರವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ (78.ವ) ರವರು ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು‌ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಪ್ರಶಾಂತ್ ಮೋಂಟಡ್ಕ, ಪ್ರಸನ್ನ ಮೋಂಟಡ್ಕ, ಪುತ್ರಿ ಪ್ರಮೀಳಾ ಶಶಿಧರ ಕೊಲ್ಯ, ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಕಳಂಜ : ವೈದ್ಯರ ನಡಿಗೆ ಹಳ್ಳಿಯ ಕಡೆಗೆ

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನ ತಡೆಗಟ್ಟುವ ಹಿನ್ನೆಲೆಯಲ್ಲಿ ವೈದ್ಯರ ತಂಡ ಮನೆ ಮನೆಗೆ ಭೇಟಿ ಮಾಡಿ ಸಾರ್ವಜನಿಕರ ಆರೋಗ್ಯದ ವಿಚಾರಣೆ ಮತ್ತು ತಪಾಸಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ವೈದ್ಯರ ತಂಡ, ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಸುಧ ವಾರಣಾಶಿ, ಕಮಲ, ಪಿ.ಡಿ.ಒ ಶ್ರೀಧರ , ಆರೋಗ್ಯ ಸಹಾಯಕಿ...

ಅಲ್ಪ ಪ್ರಮಾಣದ ಅನುದಾನ ಕಡಿತ ಗ್ರಾಮದ ಅಭಿವೃದ್ಧಿಗೆ ಪರಿಣಾಮ ಬೀರದು: ಪದ್ಮನಾಭ ಶೆಟ್ಟಿ ಪೆರುವಾಜೆ

ಕೋವಿಡ್-19 ಹೊಡೆತಕ್ಕೆ ಇಡೀ ವಿಶ್ವವೇ ಪರಿತಪಿಸುತ್ತಿರುವಾಗ ರಾಜ್ಯದಲ್ಲಿ ಪಂಚಾಯತ್ ಅನುದಾನವನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಹಿಂದೆಂದೂ ಕಾಣದ ಭೀಕರ ಸಾಂಕ್ರಾಮಿಕ ರೋಗದಿಂದ ಉಂಟಾದ ಸಂಕಷ್ಟದ ನಿರ್ವಹಣೆಗೆ ರಾಜ್ಯ ಸರಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಮಾಜದ ಶ್ರಮಿಕ ವರ್ಗದ ಕಣ್ಣೀರೊರೆಸಲು ಸಾವಿರಾರು ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಬಡತನ ರೇಖೆಗಿಂತ...
Loading posts...

All posts loaded

No more posts

error: Content is protected !!