Ad Widget

ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಸಚಿವ ಎಸ್.ಅಂಗಾರರಿಗೆ ಮನವಿ

ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರಿಗೆ ಜು.3 ರಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಭಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಭಡ್ತಿ ಎದುರಿಸುತ್ತಿರುವ ಶಿಕ್ಷಕರು ಹಾಜರಿದ್ದರು.

ಗುತ್ತಿಗಾರು : ಚರ್ಚ್ ವತಿಯಿಂದ ರಿಕ್ಷಾ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರ ವಿತರಣೆ

ಗುತ್ತಿಗಾರು ಚರ್ಚ್ ವತಿಯಿಂದ ರಿಕ್ಷಾ ಚಾಲಕರಿಗೆ ವೈದ್ಯಕೀಯ ಪರಿಕರಗಳಾದ ಸ್ಯಾನಿಟೈಸರ್, ಸ್ಪ್ರೇ ಸ್ಯಾನಿಟೈಸರ್,25 ಫೇಸ್ ಮಾಸ್ಕ್, ಮತ್ತು ಆರೋಗ್ಯ ವರ್ಧಕ ಗುಳಿಗೆ ಒಳಗೊಂಡ ಕಿಟ್ಟನ್ನು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್ ವಿತರಣೆ ಮಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗುತ್ತಿಗಾರು ಸರಕಾರಿ ಆಸ್ಪತ್ರೆಯ ಡಾ. ಚೈತ್ರ ಬಾನು, ಸಿರಿಯಾಕ್ ಮ್ಯಾಥ್ಯೂ, ಲಿಜೋ ಜೋಸ್, ಜಾರ್ಜ್. ಕೆ. ಎಂ.,...
Ad Widget

ನಾಲ್ಕೂರು : ಶ್ರಮದಾನ – ರಸ್ತೆ ದುರಸ್ತಿ

ನಾಲ್ಕೂರು ಶಿರಾಡಿ ದೈವಸ್ಥಾನದ ರಸ್ತೆ , ಕಲ್ಲಾಜೆ, ಅಂಬೆಕಲ್ಲು, ಹಲ್ಗುಜಿ ರಸ್ತೆ ಶ್ರಮದಾನ ಜು‌.2 ರಂದು ನಡೆಯಿತು. ಈ ಸಂದರ್ಭದಲ್ಲಿ ಮೇಘನ್ ಕಲ್ಲಾಜೆ, ಸುಬ್ರಹ್ಮಣ್ಯ ಪಾಲ್ತಾಡು, ಸತೀಶ್ ಹಲ್ಗುಜಿ ಶಿವಪ್ರಸಾದ್ ಹಲ್ಗುಜಿ, ರಾಮಚಂದ್ರ ಕಲ್ಲಾಜೆ, ಪುರುಷೋತ್ತಮ ಪುನೇರಿ, ನಾಗೇಶ್ ಮಣಿಯಾನ ಮನೆ, ಪ್ರಶಾಂತ್ ಅಂಬೆಕಲ್ಲು, ಷಣ್ಮುಖ ಅಂಬೆಕಲ್ಲು, ಮನೋಜ್ ದೇರಪಜ್ಜನ ಮನೆ, ಕುಶಾಲಪ್ಪ ಗೌಡ ಅಂಬೆಕಲ್ಲು,...

ಸುಳ್ಯ: ಪ್ರೆಸ್ ಕ್ಲಬ್ ಕಟ್ಟಡ, ಪತ್ರಕರ್ತರ ಸಮುದಾಯಭವನಕ್ಕೆ ಸಚಿವ ಅಂಗಾರರಿಂದ ಶಿಲಾನ್ಯಾಸ

ಸುಳ್ಯ ತಾಲೂಕು ಪಂಚಾಯಿತ್ ವತಿಯಿಂದ ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಅಂಬೆಟಡ್ಕದಲ್ಲಿ ನೀಡಿರುವ ನಿವೇಶನದಲ್ಲಿ ಜು.3 ರಂದು ನೂತನ ಪ್ರೆಸ್ ಕ್ಲಬ್ ಕಟ್ಟಡ ಮತ್ತು ಪತ್ರಕರ್ತರ ಸಮುದಾಯ ಭವನಕ್ಕೆ ಶಿಲಾನ್ಯಾಸ ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ನಿವೇಶನ...

ನಾಲ್ಕೂರು : ಅಕ್ರಮ ಮದ್ಯ ಸಾಗಾಟ – ಇನ್ನೋವಾ ವಾಹನ ಸಹಿತ ನಾಲ್ವರ ಬಂಧನ

ಅಕ್ರಮ ಮದ್ಯ ಸಾಗಾಟ ಜಾಲ ಭೇದಿಸಿದ ಸುಬ್ರಹ್ಮಣ್ಯ ಪೋಲಿಸರು ಇನ್ನೋವಾ ವಾಹನದಲ್ಲಿದ್ದ ಅಕ್ರಮ ಮದ್ಯ ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಜು.2 ರಂದು ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸುಬ್ರಹ್ಮಣ್ಯ ಪೋಲಿಸರು ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ಇನ್ನೋವಾ ಕಾರ್ ನಲ್ಲಿ ಸಾಗಿಸುತ್ತಿದ್ದ 9 ಬಾಕ್ಸ್ ಮದ್ಯ ವಶಕ್ಕೆ ಪಡೆದಿದ್ದು, ವಾಹನ ಸಹಿತ...

ಗುತ್ತಿಗಾರು : ಅಕ್ರಮ ನಾಡಕೋವಿ ಮಾರಾಟ ಪ್ರಕರಣ – ಒಂದನೇ ಆರೋಪಿ ದಿವಾಕರ ಆಚಾರಿಗೆ ಜಾಮೀನು

ಅಕ್ರಮ ನಾಡಕೋವಿ ಮಾರಾಟ ಪ್ರಕರಣದಲ್ಲಿ ಬಂಧಿತರಾದ ಒಂದನೇ ಆರೋಪಿ ದಿವಾಕರ ಆಚಾರಿಗೆ ಪುತ್ತೂರು ಸೆಶನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಇವರಿಗೆ ದೊರೆತ ಮಾಹಿತಿ ಪ್ರಕಾರ ಆರೋಪಿ ದಿವಾಕರ ಆಚಾರಿ ತನ್ನ ಕಬ್ಬಿಣದ ಕೆಲಸ ಮಾಡುವ ಕೊಟ್ಟಿಗೆಯಲ್ಲಿ ಅಕ್ರಮ ನಾಡಕೋವಿ ತಯಾರಿಸಿ ಮಾರಾಟ ಮಾಡುತ್ತಿದ್ದನೆಂದು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ರೆನ್ನಲಾದ ಆರೋಪದಡಿ ಬಂಧಿಸಿ...

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕೊರೊನಾ ಲಸಿಕಾ ಕಾರ್ಯಕ್ರಮ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ,ಸುಬ್ರಹ್ಮಣ್ಯ ಇಲ್ಲಿ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಜೂ.30 ಹಾಗೂ ಜುಲೈ 2 ರಂದು ಕೊರೊನಾ ಲಸಿಕೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ನೋಡಲ್ ಅಧಿಕಾರಿ ವಿಶ್ವನಾಥ ನಡುತೋಟ, ಉಪನ್ಯಾಸಕರುಗಳಾದ ಶ್ರೀಧರ್, ಪ್ರವೀಣ್ , ಸೌಮ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಹೇಮಲತಾ, ಕವಿತಾ ಮತ್ತು...

ಕೊಲ್ಲಮೊಗ್ರ : ಗಿಡ ನಾಟಿ ಕಾರ್ಯಕ್ರಮ

ಪರಿಸರ ಕಾರ್ಯಕ್ರಮದ ಗಿಡ ನಾಟಿ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಬ್ರಹ್ಮಣ್ಯ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಹಾಗೂ ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯ ಇವರ ಜಂಟಿ ಆಶ್ರಯದಲ್ಲಿ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಜೂ.29 ರಂದು ಕೊಲ್ಲಮೊಗ್ರ ಅರಣ್ಯ ವಿಶ್ರಾಂತಿ ಗೃಹದ ವಠಾರದಲ್ಲಿ ಗಿಡ ನಾಟಿ...

ರಂಗಮನೆ ಸಾರಥ್ಯದ “ಸ್ಥಿತಿ” ಕಿರುಚಿತ್ರ ಬಿಡುಗಡೆ

https://youtu.be/kUf9O8EPokA ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಕಿರುಚಿತ್ರ ಸ್ಥಿತಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್...

ಕರಂಗಲ್ಲು : ಊರವರಿಂದ ರಸ್ತೆ ಬದಿ ಸ್ವಚ್ಛತೆ ಹಾಗೂ ರಸ್ತೆ ದುರಸ್ತಿ

ಜೂ.27 ರಂದು ಕಜ್ಜೋಡಿ, ಮುಳ್ಳುಬಾಗಿಲು, ಕರಂಗಲ್ಲು ಹಾಗೂ ದೊಡ್ಡಕಜೆ ಊರಿನ ಜನರು ಹರಿಹರದಿಂದ ಕರಂಗಲ್ಲು ವರೆಗೆ ವಿದ್ಯುತ್ ಲೈನ್ ಗಳಿಗೆ ಮುಟ್ಟುವ ಮರದ ಕೊಂಬೆಗಳನ್ನು ಕಡಿದು, ರಸ್ತೆ ಬದಿಯಲ್ಲಿನ ಕಾಡು(ಕಳೆ) ಕಡಿದು, ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಿಸಿ ಮುಂತಾದ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದರು. ✍ವರದಿ :- ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!