Ad Widget

ಯೇನೆಕಲ್ಲು : ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

ಲಾಭಾಂಶ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಯೇನೆಕಲ್ಲು ಒಕ್ಕೂಟದ 41 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೇನೆಕಲ್ಲು ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾಗಿರುವ ಶಿವಪ್ರಸಾದ್...

ಎಲಿಮಲೆ : ಶಿವಾನಿ ಗಾರ್ಮೆಂಟ್ಸ್ ಮತ್ತು ಬ್ಯೂಟಿಪಾರ್ಲರ್ ಶುಭಾರಂಭ

ಎಲಿಮಲೆಯಲ್ಲಿ ಶಿವಾನಿ ಗಾರ್ಮೆಂಟ್ಸ್ ಮತ್ತು ಬ್ಯೂಟಿಪಾರ್ಲರ್ ಜು .14 ರಂದು ಶುಭಾರಂಭಗೊಂಡಿತು.ಚಂದ್ರಶೇಖರ ಭಟ್ ತಳೂರು ದೀಪ ಬೆಳಗಿಸಿ ಉದ್ಘಾಟಿಸಿ,ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಕೆನರಾ ಬ್ಯಾಂಕ್ ಮ್ಯಾನೇಜರ್ ನಿಖಿಲ್, ಪ್ರಸನ್ನ ಕಾಂಪ್ಲೆಕ್ಸ್ ಮಾಲಕ ಸತ್ಯನಾರಾಯಣ ಬಲ್ಯಾಯ, ಎಲಿಮಲೆ ಉತ್ಸವ ಸ್ಟೋರ್ ಮಾಲಕ ಕೇಶವ ಕಾಯರ, ರಾಧಾಕೃಷ್ಣ ಶ್ರೀ ಕಟೀಲ್ಮಾವಿನಕಟ್ಟೆ ಉಪಸ್ಥಿತರಿದ್ದರು. ಶಿವಾನಿ ಗಾರ್ಮೆಂಟ್ಸ್ ನಮಾಲಕರಾದ...
Ad Widget

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದಿಂದ ಶ್ರಮದಾನ

ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಬಾಳಿಲ- ಮುಪ್ಪೇರಿಯ ಇದರ ಅಧ್ಯಕ್ಷರಾದ ವೆಂಕಪ್ಪ ನಾಯ್ಕ ಪೊಸೋಡು ಇವರ ಮುಂದಾಳತ್ವದಲ್ಲಿ ಒಕ್ಕೂಟದ ಸದಸ್ಯರಿಂದ ಶಾಲಾ ಸ್ವಚ್ಛತಾ ಕಾರ್ಯವನ್ನು ಜು.14 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಎಸೆಸೆಲ್ಸಿ ಪರೀಕ್ಷಾ ಕೇಂದ್ರವಾದ ಶಾಲೆಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಸುಬ್ರಹ್ಮಣ್ಯ : ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಸುಬ್ರಹ್ಮಣ್ಯ ಒಕ್ಕೂಟದ 47 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಅದ್ಯಕ್ಷರು ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಇದರ ಹಾಲಿ ಸದಸ್ಯರಾದ ವಿಮಲಾ ರಂಗಯ್ಯ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸವಿತಾ...

ಕಜ್ಜೋಡಿ :- ಬರೆ ಕುಸಿದು ಮನೆಯ ಮೇಲೆ ಮರ ಬಿದ್ದು ಹಾನಿ

ಹರಿಹರ ಪಲ್ಲತ್ತಡ್ಕ ಗ್ರಾಮದ ತೇಜಕುಮಾರ್ ಕಜ್ಜೋಡಿ ಎಂಬುವವರ ಮನೆಯ ಸಮೀಪದ ಬರೆ ಜು.13ರಂದು ರಾತ್ರಿ ಕುಸಿದು ಬಿದ್ದಿದೆ. ಬರೆಯ ಮೇಲಿದ್ದ ಮರ ಮನೆಯ ಮೇಲೆ ಬಿದ್ದು ಮನೆಯ ಮಾಡು ಜಖಂಗೊಂಡಿದೆ. ಜು.14 ರಂದು ಸ್ಥಳೀಯರು ದುರಸ್ತಿ ಕಾರ್ಯಕ್ಕೆ ಸಹಕರಿಸಿದರು. *✍ವರದಿ :- ಉಲ್ಲಾಸ್ ಕಜ್ಜೋಡಿ*

ಸಂಪಾಜೆ : ಸ್ವದೇಶಿ ಉತ್ಪನ್ನ ಮೋದಿಕೇರ್ ಮಳಿಗೆ ಶುಭಾರಂಭ

ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವದೇಶಿ ಉತ್ಪನ್ನ ಮೋದಿಕೇರ್ ಮಳಿಗೆ ಜು.13 ರಂದು ಶುಭಾರಂಭಗೊಂಡಿತು. ಸಂಘದ ಅದ್ಯಕ್ಷ ಯನ್.ಸಿ ಅನಂತ್ ಊರುಬೈಲು ರವರು ದೀಪ ಬೆಳಗಿಸಿ ,ಸ್ವದೇಶಿ ಉತ್ನನ್ನಗಳ ಬಳಕೆಯ ಮಹತ್ವದ ಬಗ್ಗೆ ಮಾತನಾಡಿ, ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಾರಾಮ ಕಳಗಿ ,ಸಿಇಓ ಆನಂದ. ಬಿ.ಕೆ...

ಸುಳ್ಯ : ಶ್ರೀ ಮೂಕಾಂಬಿಕಾ ಮಿನಿ ಸೂಪರ್ ಮಾರ್ಕೆಟ್ ಶುಭಾರಂಭ

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಸದರ್ನ್ ರೆಸಿಡೆನ್ಸಿ ಕಟ್ಟಡದಲ್ಲಿ ಶ್ರೀಮತಿ ಮತ್ತು ಶ್ರೀ ಹೇಮನಾಥ್ ಕಲ್ಮಡ್ಕರವರ ಮಾಲಕತ್ವದ ಶ್ರೀ ಮೂಕಾಂಬಿಕಾ ಮಿನಿ ಸೂಪರ್ ಮಾರ್ಕೆಟ್ ಜು.11 ರಂದು ಶುಭಾರಂಭಗೊಂಡಿತು. ಶ್ರೀ ಹರಿ ಎಲಚ್ಚಿತ್ತಾಯರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹವನ ನಡೆಯಿತು. ಶ್ರೀ ಗೋವಿಂದ ನಾಯ್ಕ ಕಲ್ಮಡ್ಕ, ವಾಲಿಬಾಲ್ ಅಸೋಸಿಯೇಷನ್ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜಯಪ್ರಕಾಶ್...

ಕುಕ್ಕೆಯನ್ನು ಮತ್ತಷ್ಟು ಹಸಿರಾಗಿಸುವ ಬೃಹತ್ ವನ ಸಂವರ್ಧನಾ ಕಾರ್ಯಕ್ರಮ – 2000 ಗಿಡ ನೆಡುವ ಮೂಲಕ ಹಸಿರು ಕುಕ್ಕೆ ಯೋಜನೆಗೆ ಚಾಲನೆ

ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ ೧೪ ಕಡೆ ವಿವಿಧ ಜಾತಿಯ ಸಸ್ಯಗಳನ್ನು ೧೪ ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-೧೯ ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ...

ಕುಕ್ಕೆ ಕ್ಷೇತ್ರದಲ್ಲಿ ರೂ.3೦೦ ಕೋಟಿ ವೆಚ್ಚದಲ್ಲಿ 3ನೇ ಹಂತದ ಅಭಿವೃದ್ಧಿ ಕಾಮಗಾರಿ – ಮಾಸ್ಟರ್ ಪ್ಲಾನ್ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಮಾರು ರೂ ೩೦೦ ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆಗಳ ಬಗ್ಗೆ ಸಭೆಯಲ್ಲಿ ವರದಿ ಸಿದ್ಧಪಡಿಸಿ ಚರ್ಚಿಸಲಾಯಿತು. ಅಭಿವೃದ್ಧಿ ಕೆಲಸಗಳು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ...

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷರಂಗದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಸಂಪಾಜೆ : ಖ್ಯಾತ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ (78 ) ಅವರು ವಯೋ ಸಹಜ ಅಸೌಖ್ಯದಿಂದ ಜು.13 ರಂದು ನಿಧನರಾದರು. ಕೊಡಗು ಜಿಲ್ಲೆಯ ಸಂಪಾಜೆಯ ರಾಮಣ‍್ಣ ರೈ ಹಾಗೂ ತಾಯಿ ಕಾವೇರಿ ರೈ ಯವರ ಪುತ್ರ. ಇವರ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಶೀನಪ್ಪ ರೈ ಸಂಪಾಜೆಯವರಿಗೆ ಮಾರ್ಗದರ್ಶಕರಾಗಿದ್ದರು. ಇವರು ನಾಲ್ಕನೇ...
Loading posts...

All posts loaded

No more posts

error: Content is protected !!