- Sunday
- March 15th, 2026
ನೀನು ನನ್ನವನಲ್ಲ, ನಾನು ನಿನ್ನವನಲ್ಲ…ಎಲ್ಲರೂ ಒಬ್ಬಂಟಿಗಳೇ ಈ ಜಗದಲ್ಲಿ…ಹುಟ್ಟಿನಲ್ಲೂ ಒಬ್ಬಂಟಿ, ಸಾವಿನಲ್ಲೂ ಒಬ್ಬಂಟಿ…ನೀನು ನೋವಿನಲ್ಲೂ ಒಬ್ಬಂಟಿ,ಕಷ್ಟದಲ್ಲೂ ಒಬ್ಬಂಟಿ…ಹೇಗಿದ್ದರೂ ಬದುಕಲೆಬೇಕು ಈ ಬದುಕಿನಲಿ…ನೀನು ಎದ್ದು ನಿಲ್ಲಲೆಬೇಕು ಈ ಬದುಕಿನಲಿ… ಗೆದ್ದಾಗ ಬರುವರು ನೀನು ನಮ್ಮವನು ಎಂದು…ಸೋತಾಗ ಹೋಗುವರು ತಿರುಗಿಯು ನೋಡದೇ…ನಿನ್ನ ಕನಸಿಗೆ ಕೊಳ್ಳಿ ಇಟ್ಟು, ಮನಸ್ಸಿಗೆ ಬೆಂಕಿ ಇಟ್ಟು ನೋಡುವರು ಇಲ್ಲಿ ಹಲವರು,ನಿಂತು ನೋಡುವರು ಇಲ್ಲಿ ಹಲವರು…ಯೋಚಿಸು...
ವಳಲಂಬೆ - ಅಡ್ಡನಪಾರೆ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಚರಂಡಿಗೆ ಉರುಳಿದ ಘಟನೆ ಇಂದು ನಡೆದಿದೆ. ಪಿಕಪ್ ನಲ್ಲಿ ಬೀಡಿ ಹಾಗೂ ಎಲೆ ಸಾಗಿಸಲಾಗುತ್ತಿತ್ತು. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಸಹಾಯದಿಂದ ಪಿಕಪ್ ಮೇಲಕ್ಕೆತ್ತಲಾಯಿತು.
ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 40 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮರ್ಕಂಜದಲ್ಲಿ 1, ಅಮರಮುಡ್ನೂರುನಲ್ಲಿ 1, ಬೆಳ್ಳಾರೆಯಲ್ಲಿ 2, ಸುಳ್ಯದಲ್ಲಿ 15, ಉಬರಡ್ಕ ಮಿತ್ತೂರುನಲ್ಲಿ 2, ಕನಕಮಜಲಿನಲ್ಲಿ 2, ಆಲೆಟ್ಟಿನಲ್ಲಿ 1, ಪಂಜದಲ್ಲಿ 1, ಎಡಮಂಗಲದಲ್ಲಿ 2, ಮಂಡೆಕೋಲಿನಲ್ಲಿ 1, ದುಗ್ಗಲಡ್ಕದಲ್ಲಿ 1, ಜಾಲ್ಸೂರಿನಲ್ಲಿ 2, ಅಜ್ಜಾವರದಲ್ಲಿ 2, ಗುತ್ತಿಗಾರಿನಲ್ಲಿ 1,...
ಸುಳ್ಯ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳ ಮನೆಯವರಿಗೆ ಮಧ್ಯಾಹ್ನದ ಊಟವನ್ನು ನೀಡುವ ಮೂಲಕ ನಾವೂರು ಬೀಜಕೊಚ್ಚಿ ಫ್ರೆಂಡ್ಸ್ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಮಾರು 70 ಮಂದಿಗೆ ಮಧ್ಯಾಹ್ನದ ಊಟವನ್ನು ವಿತರಿಸಿ ಹಬ್ಬದ ಸಂತೋಷವನ್ನು ಇತರರಿಗೂ ಹಂಚಿದ್ದಾರೆ. ಈ ತಂಡದಲ್ಲಿ ಹಲವಾರು ಮಂದಿ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ ಲಾಕ್ ಡೌನ್ ದಿನಗಳಲ್ಲಿ ಪರಿಸರದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರು ಗ್ರಾಮದಲ್ಲಿ ಚೂಡಾಮಣಿ ಹೆಸರಿನ ಪ್ರಗತಿ ಬಂಧು ಸಂಘವನ್ನು ಮಾಜಿ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ರವರು ಚೂಡಾಮಣಿ ಎಂಬ ಸಂಘವನ್ನು ದೀಪ ಬೆಳಗಿ ಉದ್ಘಾಟಿಸಿ ಐದು ಮಂದಿಯೂ ಏಕ ಮನಸ್ಸಿನಿಂದ ಕೂಡಿ ಮಾಡಿದ ಸಂಘವು ನಿಮ್ಮ...
ಎಂ. ಚೆಂಬು ಗ್ರಾಮದ ಕುದ್ರೆಪಾಯ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಟ್ಟಪ್ಪಾರೆ, ಕುರುಂಜಿ, ಉಂಬಾಳೆ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಅಭಿವೃದ್ಧಿ ನೆಪದಲ್ಲಿ ರಸ್ತೆಯನ್ನು ಪ್ರತಿ ವರ್ಷವೂ ಜೆಸಿಬಿ ಬಳಸಿ ಅಗಲಗೊಳಿಸುವುದು, ಚರಂಡಿ ನಿರ್ಮಾಣ ಇತ್ಯಾದಿ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ಕೆಸರುಮಯವಾಗಿ ಕಂಬಳದ ಗದ್ದೆಯಂತಾಗಿದೆ. ರಸ್ತೆಯಲ್ಲಿ...
ಏರಣಗುಡ್ಡೆ ಕಮಿಲ ರಸ್ತೆಯಲ್ಲಿ ಏರಣಗುಡ್ಡೆ ಬಳಿ ನೀರಿನ ವರತೆಯಿಂದ ರಸ್ತೆ ಕುಸಿದು ವಾಹನ ಸಂಚಾರ ಕಷ್ಟವಾಗಿತ್ತು. ಇದನ್ನು ಮನಗಂಡ ಗ್ರಾಪಂ ಸದಸ್ಯ ಭರತ್ ಕೆ ವಿ ನೇತೃತ್ವದಲ್ಲಿ ಗ್ರಾಮ ಭಾರತ ತಂಡದ ಯುವಕರು ಕೆಲಸ ಮಾಡಿ ದುರಸ್ತಿ ಮಾಡಿದರು.
ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೃದ್ಧಿ ಹೆಚ್ ರೈ 600 ರಲ್ಲಿ 600 ಅಂಕ ಪಡೆದು ಸುಳ್ಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾಳೆ. ಇವರು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ಮತ್ತು ರಾಜೀವಿ ಹೆಚ್ ರೈ ದಂಪತಿಗಳ ಪುತ್ರಿ.
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ 2ನೇ ಅಲೆಯಿಂದಾಗಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಅರಂತೋಡು ಜುಮ್ಮಾ ಮಸೀದಿ ಖತೀಬ್ ಆಲ್ ಹಾಜ್ ಇಸ್ಹಾಕ್ ಬಾಖವಿ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ಮರಣ ಹೊಂದಿದವರಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜಮಾತ್ ಪದಾಧಿಕಾರಿಗಳು, ಎಸೋಸಿಯೇಶನ್ ಪದಾಧಿಕಾರಿಗಳು,ಎಸ್ ಕೆ ಎಸ್ ಎಸ್...
ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 25 ಮಂದಿ ಡಿಸ್ಟಿಂಕ್ಷನ್, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕೃತಿಕಾ.ವೈ.ಸಿ 600ರಲ್ಲಿ 600 ಪೂರ್ಣ ಅಂಕಗಳು, ಮಹಮ್ಮದ್ ಮುಯೀಫ್ 599 ಹಾಗೂ ಯಶವಂತ್.ವೈ.ಪಿ 596 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಡಿಸ್ಟಿಂಕ್ಷನ್,...
Loading posts...
All posts loaded
No more posts
