- Sunday
- March 15th, 2026
ಸುಳ್ಯ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯು ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಇಂದು ನಡೆಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕಾರ್ಯಕಾರಿಣಿ ಸಭೆಯಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ,ಉಪಾಧ್ಯಕ್ಷ ಬೂಡಿಯರು ರಾಧಾಕೃಷ್ಣ ರೈ, ಜಿಲ್ಲೆಯ ಪ್ರಭಾರಿ ರಾಜೇಶ್ ಕಾವೇರಿ, ಸುಳ್ಯ ಬಿಜೆಪಿ ಮಂಡಲ...
ಸುಳ್ಯ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಜು.25 ರಂದು ರಾತ್ರಿ ನಡೆದ ಭೀಕರ ಅಪಘಾತದಲ್ಲಿ ರಾಜುಎಂಬವರು ಮೃತಪಟ್ಟ ಘಟನೆ ನಡೆದಿದೆ. ಸುಳ್ಯದಿಂದ ಮಂಗಳೂರು ಕಡೆ ಹೊಗುತ್ತಿದ್ದ ಬಸ್ ಹಾಗೂಹಳೆಗೇಟು ಕಡೆಯಿಂದ ಸುಳ್ಯ ಕಡೆಗೆ ರಾಜು ಎಂಬವರುಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಗುದ್ದಿದೆ. ಸುಳ್ಯಸರಕಾರಿ ಆಸ್ಪತ್ರೆ ಹಿಂಬದಿ ನಿವಾಸಿ ಸುಳ್ಯದಲ್ಲಿ ಸಿಸಿ ಕ್ಯಾಮರಾಅಳವಡಿಕೆ ಮತ್ತು ಸರ್ವಿಸ್ ವೃತ್ತಿ...
ಭಾರಿ ಮಳೆಯಿಂದಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹಲವೆಡೆ ನೀರು ತುಂಬಿ ವಾಹನ ಸಂಚಾರ ಹಾಗೂ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್ ಸುಳ್ಯದಿಂದ ಅರಂತೋಡು ವರೆಗೆ ನೀರು ನಿಂತ ಕಡೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಚರಂಡಿ ವ್ಯವಸ್ಥೆ ಮಾಡಿಕೊಡಲಾಯಿತು.
ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯಿಂದ ಕೆರೆಮೂಲೆ, ಎರ್ಮೆಟ್ಟಿಯಿಂದ ಬೊಮ್ಮರಿನವರೆಗೆ ಸಾಗುವ ಮಾರ್ಗವು ತೀರಾ ಕುಲಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೇ ನೀರೆಲ್ಲಾ ರಸ್ತೆಯಲ್ಲಿ ಹರಿದು ಗುಂಡಿ ಬಿದ್ದಿದೆ. ಇದೇ ರಸ್ತೆಯಲ್ಲಿ ತೆರಳುವ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಶೀಘ್ರದಲ್ಲಿ ಕ್ರಮವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನವಚೇತನ ಯುವಕ ಮಂಡಲ ಮತ್ತು ಜಾಲ್ಸುರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೊಳುಬೈಲು, ಬೈತಡ್ಕ, ಕೋನಡ್ಕಪದವು, ವಿನೋಬನಗರ, ಮಾವಿನಕಟ್ಟೆ, ಅಡ್ಕಾರು, ಜಾಲ್ಸುರು, ಸೋಣoಗೇರಿ, ಪೈಚಾರು ಬಸ್ಸು ಪ್ರಯಾಣಿಕರ ತಂಗುದಾಣ ಮತ್ತು ರಸ್ತೆ ಸೂಚನಾ ಫಲಕಗಳ ಸ್ವಚ್ಛತೆ ನಡೆಸಿ ಸ್ಯಾನಿಟೈಸ್ ಮಾಡಿ ಸುತ್ತಮುತ್ತ ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತೆ ನಡೆಸಲಾಯಿತು....
ಗುತ್ತಿಗಾರು ಗಾಮ ಪಂಚಾಯತ್ ಗೆ ಒಳಪಟ್ಟ ಚತ್ರಪ್ಪಾಡಿ - ಹಾಲೆಮಜಲು ರಸ್ತೆಯಿಂದ ಚತ್ರಪ್ಪಾಡಿಯ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಹೋಗುವ ರಸ್ತೆಯ ಶ್ರಮದಾನ ಊರವರಿಂದ ಮಾಡಲಾಯಿತು.ಈ ಶ್ರಮದಾನದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜತ್ತಪ್ಪ ಚತ್ರಪ್ಪಾಡಿ, ರಾಮ ಚತ್ರಪ್ಪಾಡಿ, ಹಾಗೂ ಚತ್ರಪ್ಪಾಡಿ ಕೊರಗಜ್ಜ ದೈವಸ್ಥಾನದ ಪಾತ್ರಿ ಗಂಗಾಧರ ಚತ್ರಪ್ಪಾಡಿ, ಸ್ಥಳೀಯರಾದ ಉಮೇಶ ಶಿಬಾಜೆ, ಪೊಡಿಯ ಚತ್ರಪ್ಪಾಡಿ,...
ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶ ಪಡೆಯಲು ಇಲಾಖೆ ಆನ್ಲೈನ್ ಪ್ರಕ್ರಿಯೆ ಆರಂಭಿಸಿದ್ದು ಜು.28 ರಿಂದ ಆಗಸ್ಟ್ 10 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್16 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ,ರಂಗನಿರ್ದೇಶಕ ಜೀವನ್ ರಾಂ ಸುಳ್ಯರಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮ ನೆನಪಿನಲ್ಲಿ ನೀಡುವ 'ವನಜ ರಂಗಮನೆ ಪ್ರಶಸ್ತಿ'ಗೆ ಈ ವರ್ಷ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಅವರನ್ನು ಆಯ್ಕೆ ಮಾಡಲಾಗಿದೆ.ಕಳೆದ 35 ವರ್ಷಗಳಿಂದ ನಿರಂತರವಾಗಿ ಯಕ್ಷಗಾನದ ಅರ್ಥದಾರಿಯಾಗಿ,ವೇಷದಾರಿಯಾಗಿತನ್ನನ್ನು ತಾನು ತೊಡಗಿಸಿಕೊಂಡಿರುವ ಜಬ್ಬಾರ್ ಸಮೊ ಅವರು...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ತಿಂಗಳ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ ಪ್ರಾರಂಭಗೊಂಡಿದ್ದು ಸೆ.2 ರ ತನಕ ಪೂಜೆ ನಡೆಯಲಿದೆ.ಸೇವೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಛೇರಿಯಲ್ಲಿ (ಮೊಬೈಲ್: 9902050424) ವಿಚಾರಿಸಬೇಕಾಗಿದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.
ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನ ಕಾರ್ಯಕ್ರಮವು ಜು.24 ರಂದು ನಡೆಯಿತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಮಾತನಾಡಿ, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿಯಾಗಿದ್ದರೆ ಮಾತ್ರ ಸರಕಾರದ ಸವಲತ್ತು ಪಡೆಯಲು ಸಾಧ್ಯವಿದೆ. ಈ...
Loading posts...
All posts loaded
No more posts
