Ad Widget

ತೊಡಿಕಾನ ನಾಗರ ಪಂಚಮಿ ಆಚರಣೆ

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಪ್ರಯುಕ್ತ ನಾಗನಿಗೆ ಪೂಜೆ ಸಲ್ಲಿಸಿ ಹಾಲೆರೆಯಲಾಯಿತು.ದೇವಳದ ಪ್ರಧಾನ ಅರ್ಚಕ ಕೇಶವ ಮೂರ್ತಿ ಪೂಜಾ ಕಾರ್ಯ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಸಿಬ್ಬಂದಿಗಳು ಭಕ್ತಾಧಿಗಳು ಉಪಸ್ಥಿತರಿದ್ದರು.

ಮಿನುಂಗೂರು ದೇವಸ್ಥಾನದಲ್ಲಿ ನಾಗರ ಪಂಚಮಿ

ಮರ್ಕಂಜ: ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಅಭೀಷೆಕ ,ಪೂಜೆ ನಡೆಯಿತು
Ad Widget

ಜಯನಗರ : ನಾಗರ ಪಂಚಮಿ ಆಚರಣೆ

ಜಯನಗರ ಕೊರಂಬಡ್ಕ ಶೀ ನಾಗಬ್ರಹ್ಮ ಆದಿಮೊಗೇರ್ಕಳದೈವಸ್ಥಾನದಲ್ಲಿ ಆ. 13 ರಂದುನಾಗರ ಪಂಚಮಿ ಹಬ್ಬದ ಪ್ರಯುಕ್ತ ಶ್ರೀ ನಾಗಬ್ರಹ್ಮ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ದೈವಸ್ಥಾನದ ಪಾತ್ರಿಗಳು ನೆರವೇರಿಸಿದರು. ಈ ಸಂಧರ್ಭದಲ್ಲಿ ದೈವಸ್ಥಾನದ ಸಮಿತಿಯವರು ಮತ್ತು ಭಕ್ತರ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.

ವಳಲಂಬೆ : ನಾಗರಪಂಚಮಿ ಆಚರಣೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಇಂದು ಹಾಲಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಸದಸ್ಯರಾದ ಡಿ.ಎಂ.ರಾಮಣ್ಣ ಗೌಡ,ಪದ್ಮನಾಭ ದಂಬೆಕೋಡಿ , ಕರುಣಾಕರ ಪಾರೆಪ್ಪಾಡಿ, ಕುಶಾಲಪ್ಪ ಪಾರೆಪ್ಪಾಡಿ, ಲಿಂಗಪ್ಪ ನಾಯ್ಕ ಕಾಜಿಮಡ್ಕ, ಪುಷ್ಪಾವತಿ ಮೊಟ್ಟೆ, ಸಮಿತಿಯ ಮಾಜಿ ಸದಸ್ಯರುಗಳಾದ ಮಿತ್ರದೇವ ಮಡಪ್ಪಾಡಿ, ರಾಧಾಕೃಷ್ಣ ಶ್ರೀ ಕಟೀಲ್...

ಹರಿಹರ ಪಲ್ಲತ್ತಡ್ಕ : ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮ

ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇಲ್ಲಿ ಆ.12 ರಂದು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಹರಿಹರ-ಐನೆಕಿದು ಒಕ್ಕೂಟದ ಸದಸ್ಯರಿಂದ ಶ್ರಧ್ದಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ಸುಳ್ಯ ತಾಲೂಕು ಲೆಕ್ಕ ಪರಿಶೋಧಕರಾದ ಉಮೇಶ್, ಸೇವಾಪ್ರತಿನಿಧಿ ಶ್ರೀಮತಿ...

ಅರಂತೋಡು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಸಂಸ್ಥೆಯಲ್ಲಿ 2020_2021ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕು. ಫಮೀದಾ 547 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಇವಳು ಅರಂತೋಡು ಗ್ರಾಮದ ಉದಯನಗರ ನಿವೃತ್ತ ಸೈನಿಕ ಫಸೀಲು ಮತ್ತು ನೇಬಿಸಾ ಕನ್ಯಾನ ರವರ ಪುತ್ರಿ.

ನಾಗರ ಪಂಚಮಿ

ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು...

ದೃಷ್ಟಿ ಕಳೆದುಕೊಂಡ ಮಧುಸೂದನ್ ದಂಡೆಕಜೆ ಚಿಕಿತ್ಸೆಗೆ ನೆರವಾಗಲು ಮನವಿ

ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಮಧುಸೂದನ್ ಕೂಲಿ ಕಾರ್ಮಿಕರಾಗಿದ್ದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಈಗಾಗಲೇ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುತ್ತಾರೆ ಮನೆಯವರಿಗೆ ಇವರೇ ಆಧಾರ ಸ್ತಂಭವಾಗಿರುತ್ತಾರೆ ಈಗ ಇವರಿಗೆ ಕಣ್ಣಿನ ದಾನಿಗಳು ಸಿಕ್ಕಿರುತ್ತಾರೆ.ಆಗಸ್ಟ್ 14 ಶನಿವಾರದಂದು ಚಿಕಿತ್ಸೆ ನಡೆಯಲಿದ್ದು ಚಿಕಿತ್ಸಾ ವೆಚ್ಚ 2 ಲಕ್ಷ ರೂಗಳ ತುರ್ತು ಅವಶ್ಯಕತೆ ಇರುತ್ತದೆ. ಬಡತನದಲ್ಲಿರುವ ಅವರಿಗೆ ಸಹೃದಯ ದಾನಿಗಳು...

ಸುಳ್ಯ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆ ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಒಬಿಸಿ ಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷ ಚಂದ್ರಶೇಖರ ಪನ್ನೆ ವಹಿಸಿದ್ದರು ವೇದಿಕೆಯಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಆರ್ ಸಿ ನಾರಾಯಣ್, ಒಬಿಸಿ ಮೋರ್ಚಾ ಸುಳ್ಯ ಮಂಡಲದ...

ಕೇಂದ್ರದ ಎಲ್ಲಾ ಯೋಜನೆಗಳೂ ಸಾಮಾನ್ಯರಿಗೆ ತಲುಪುತ್ತಿವೆ- ಹರೀಶ್ ಕಂಜಿಪಿಲಿ

ಸುಳ್ಯ: ಕೇಂದ್ರದ ಎಲ್ಲಾ ಯೋಜನೆಗಳು ಇಂದು ಜನಸಾಮಾನ್ಯರಿಗೆ ತಲುಪುತ್ತಿದೆ‌. ಕೇಂದ್ರದ ಎಲ್ಲಾ ಯೋಜನೆಗಳ ಸರಿಯಾದ ಮಾಹಿತಿಯನ್ನು ಕಾರ್ಯಕರ್ತರು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು. ಸುಳ್ಯ ಸಿ.ಎ ಬ್ಯಾಂಕ್ ಹಾಲ್ ನಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಂಚಾಯತ್...
Loading posts...

All posts loaded

No more posts

error: Content is protected !!