Ad Widget

ಮರ್ಕಂಜ ಪಿಡಿಓ ಆಗಿ ರವಿಚಂದ್ರ ಅಧಿಕಾರ ಸ್ವೀಕಾರ

ಮರ್ಕಂಜ ಗ್ರಾಮ ಪಂಚಾಯತ್ ನ ಪ್ರಭಾರ ಪಿಡಿಓ ಆಗಿ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.ಧನಪತಿಯವರು ಗುತ್ತಿಗಾರು ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದ್ದಾರೆ.

ಬೆಳ್ಳಾರೆಯಲ್ಲಿ ‘ಕ್ಷಯ ಮುಕ್ತ ಭಾರತ’ ಕಿರುಚಿತ್ರಕ್ಕೆ ಮುಹೂರ್ತ

ಜೇಸಿಐ ಬೆಳ್ಳಾರೆ, ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ನಡೆಯುತ್ತಿರುವ 'ಕ್ಷಯ ಮುಕ್ತ ಭಾರತ' ಕಿರುಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಸೆ.1ರಂದು ನಡೆಯಿತು. ಕಿರುಚಿತ್ರದ ಮುಹೂರ್ತವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜೇಸಿ ರಾಜೀವಿ.ಆರ್ ರೈ ನೆರವೇರಸಿ ಕಿರುಚಿತ್ರಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ...
Ad Widget

ಅರಂತೋಡು : ಮಾತೃಶ್ರೀ ಜನರಲ್ ಸ್ಟೋರ್ & ಚಿಕನ್ ಸೆಂಟರ್ ಶುಭಾರಂಭ

ತೊಡಿಕಾನ ಗ್ರಾಮದಲ್ಲಿ ಪರ್ನೋಜಿ ಉಲ್ಲಾಸ್ ನಗರದಲ್ಲಿ ನಿವೃತ್ತ ಸೈನಿಕ ಚಂಗಪ್ಪ ಗೌಡ ಕಲ್ಲಗದ್ದೆ ಮಾಲಕತ್ವದ ಮಾತೃಶ್ರೀ ಜನರಲ್ ಸ್ಟೋರ್ & ಚಿಕನ್ ಸೆಂಟರ್ ಸೆ.1 ರಂದು ಶುಭಾರಂಭಗೊಂಡಿತು.

ದೇಶದಲ್ಲಿ ತಾಲಿಬಾನಿ ಮಾನಸಿಕತೆಯ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸುವುದೊಳಿತು – ಜಗದೀಶ್ ಕಾರಂತ

ಅಫ್ಘಾನಿಸ್ತಾನದ ತಾಲಿಬಾನಿಗಳ ಮಾನಸಿಕತೆಯ ವ್ಯಕ್ತಿಗಳು ಭಾರತದಲ್ಲೂ ಇದ್ದು ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅದೇ ಮಾನಸಿಕತೆಯ ವ್ಯಕ್ತಿಗಳು ಹಿಂದೂಗಳನ್ನು ಶೋಷಣೆ ಮಾಡುವ ಸನ್ನಿವೇಶಗಳೂ ಎದುರಾಗಬಹುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ. ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆ ಎಂಬಲ್ಲಿ ಗೌರಿ ಎಂಬ ಬಡ ದಲಿತ ಮಹಿಳೆಗೆ ವೇದಿಕೆಯ...

ಮಡಪ್ಪಾಡಿ ಪಿಡಿಓ ಆಗಿ ಪ್ರವೀಣ್ ಅಧಿಕಾರ ಸ್ವೀಕಾರ

ಮಡಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಚಿಲ್ಪಾರು ಪ್ರಭಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಪ್ರಭಾರ ಪಿ.ಡಿ.ಒ ಆಗಿದ್ದ ರವಿಚಂದ್ರರವರು ಮರ್ಕಂಜ ಗ್ರಾಮ ಪಂಚಾಯಿತಿಗೆ ಪ್ರಭಾರ ಪಿ.ಡಿ.ಒ ಆಗಿ ವರ್ಗಾವಣೆಯಾಗಿರುತ್ತಾರೆ.

ಬೆಳ್ಳಾರೆ: ಕ್ಷಯ ಮುಕ್ತ ಭಾರತ ರಂಗ ತರಬೇತಿ- ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಹಾಗೂ ಮುಖಾಮುಖಿ ಕಾರ್ಯಕ್ರಮ

ಜೇಸಿಐ ಬೆಳ್ಳಾರೆ,ಜೂನಿಯರ್ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಸುಳ್ಯ ನೇತೃತ್ವದಲ್ಲಿ ನಡೆಯುತ್ತಿರುವ 'ಕ್ಷಯ ಮುಕ್ತ ಭಾರತ' ಕಿರು ಚಿತ್ರದ ರಂಗ ತರಬೇತಿಯ 9ನೇ ದಿನದ ತರಬೇತಿ ಕಾರ್ಯಕ್ರಮದಲ್ಲಿ ಕ್ಷಯ ರೋಗಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ಮತ್ತು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ...

ಚಂದ್ರಕಾಂತ್ ಎಂ.ಆರ್. ರಿಗೆ ಉಪ ತಹಶೀಲ್ದಾರ್ ಆಗಿ ಪದೋನ್ನತಿ – ವರ್ಗಾವಣೆ

ಸುಳ್ಯ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಚಂದ್ರಕಾಂತ್ ಎಂ.ಆರ್. ಇವರಿಗೆ ಉಪತಹಶೀಲ್ದಾರ್ ಆಗಿ ಬಡ್ತಿ ದೊರೆತಿದ್ದು ಅವರು ಪಂಜ ನಾಡಕಚೇರಿಗೆ ವರ್ಗಾವಣೆಗೊಂಡಿದ್ದಾರೆ.2001ರಲ್ಲಿ ಗ್ರಾಮ ಕರಣಿಕರ ಸರಕಾರಿ ಸೇವೆಗೆ ಸೇರಿದ ಇವರು ಆರಂಭದಲ್ಲಿ ಕಲ್ಮಡ್ಕ ಗ್ರಾಮ ಸಹಾಯಕರಾಗಿ, ಆ ಬಳಿಕ ಗುತ್ತಿಗಾರು, ಎಡಮಂಗಲ, ಕೊಲ್ಲಮೊಗ್ರ, ಮಂಡೆಕೋಲು, ಕನಕಮಜಲು, ನಾಲ್ಕೂರು, ಸುಳ್ಯ ಕಸಬಾ ಗ್ರಾಮಗಳಲ್ಲಿ ಸೇವೆಸಲ್ಲಿಸಿದರು. 2015ರಲ್ಲಿ...

ಅಚ್ರಪ್ಪಾಡಿ : ಎಸ್.ಡಿ.ಎಂ.ಸಿ ಪೂರ್ವಾಧ್ಯಕ್ಷ ಹರೀಶ್ ಕಡಪಳರಿಗೆ ಸನ್ಮಾನ

ಅಚ್ರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ಮತ್ತು 2020-21ರ ಎರಡು ಅವಧಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಹರೀಶ ಕಡಪಳ ಅವರನ್ನು ಆ. 31 ರಂದು ಸನ್ಮಾನಿಸಲಾಯಿತು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಾಗ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಮತ್ತು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ...

ನಾಳೆ ಸುಳ್ಯ ತಾಲೂಕಿನಲ್ಲಿ ಲಸಿಕೆ ವಿತರಣೆಗೆ ಮೆಘಾ ಕ್ಯಾಂಪ್ – ವಿವಿಧ ಕೇಂದ್ರದಲ್ಲಿ ಒಟ್ಟು 6000 ಲಸಿಕೆ ಲಭ್ಯ

ಸುಳ್ಯ ತಾಲೂಕಿನಲ್ಲಿ ಸೆ. 1ರಂದು ಲಸಿಕೆ ವಿತರಣೆಗೆ ಮೆಘಾ ಕ್ಯಾಂಪ್ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ವಿವಿಧ ಕೇಂದ್ರದಲ್ಲಿ ಒಟ್ಟು 6000 ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ಕುಕ್ಕುಜಡ್ಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರಾಜೀವಿ ಎಂ. ಸ್ವಯಂ ನಿವೃತ್ತಿ

ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಶ್ರೀಮತಿ ರಾಜೀವಿ ಎಂ. ಸುದೀರ್ಘ ಸೇವೆ ಸಲ್ಲಿಸಿ ಆ.31 ರಂದು ಸ್ವಯಂ ನಿವೃತ್ತರಾದರು. 1985 ರಿಂದ ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕದಲ್ಲಿ ಸೇವೆ ಆರಂಭಿಸಿದ ಇವರು ಒಂದೇ ಶಾಲೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಲಾ ಜೀವನದಲ್ಲಿ ವಾಲಿಬಾಲ್,ಬ್ಯಾಡ್ಮಿಂಟನ್, ತ್ರೋಬಾಲ್,ಗುಂಡೆಸೆತ,ಚಕ್ರ ಎಸೆತ, ಮುಂತಾದ ಕ್ರೀಡಾ...
Loading posts...

All posts loaded

No more posts

error: Content is protected !!