Ad Widget

ಟೆಕ್ ಸಂವೇದ ಸುಳ್ಯ ಶಾಖೆ ಆರಂಭ

ಮಕ್ಕಳಿಗೆ ರೊಬೋಟಿಕ್ ಲ್ಯಾಬ್ ಮೂಲಕ ತರಬೇತಿ ನೀಡಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞನದ ಬಗ್ಗೆ ಕುತೂಹಲ ಹೆಚ್ಚಿಸಿ ಪ್ರೋತ್ಸಾಹ ನೀಡುವ ಟೆಕ್ ಅನ್ವೇಷಣದ ಟೆಕ್ ಸಂವೇದ ಸುಳ್ಯ ಶಾಖೆ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಞಾನದೀಪ ಸಂಸ್ಥೆಯಲ್ಲಿ ಸೆ.9ರಂದು ಉದ್ಘಾಟನೆಗೊಂಡಿದೆ.ಮಾಣಿಬೆಟ್ಟು ಶಿವರಾಮ ಗೌಡರು ಉದ್ಘಾಟಿಸಿದರು. ಟೆಕ್ನೊ ಅನ್ವೇಷಣ ಮಂಡ್ಯದ ಸಂಚಾಲಕರಾದ ಅವಿನಾಶ್ ಎ. , ಟೆಕ್ ಸಂವೇದದ...

ದೆಹಲಿಯ ಸಿವಿಲ್ ಡಿಫೆನ್ಸ್ ಅಧಿಕಾರಿ ಸಾಬಿಯಾ ಸೈಫ್ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ಖಂಡಿಸಿ ಬೆಳ್ಳಾರೆಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ

ದೆಹಲಿಯ ಸಿವಿಲ್ ಡಿಫೆನ್ಸ್ ಅಧಿಕಾರಿ ಸಾಬಿಯಾ ಸೈಫ್ ಮೇಲೆ ಅಮಾನವೀಯವಾಗಿ ಅತ್ಯಾಚಾರಗೈದು ಮೃಗೀಯವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ಳಾರೆ ಜಂಟಿ ಆಶ್ರಯದಲ್ಲಿ ಸೆ.11ರಂದು ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ರಾಜ್ಯ...
Ad Widget

ಯಾರದ್ದೋ ಸಾಧನೆಗೆ ತೃಪ್ತಿ ಪಡಬೇಡಿ ತಾವೇ ಸಾಧನೆ ಮಾಡಿ- ಸಚಿವ ಎಸ್. ಅಂಗಾರ

ಯಾರದ್ದೋ ಸಾಧನೆಗೆ ತೃಪ್ತಿ ಪಡಬೇಡಿ ಸ್ವತಃ ತಾವೇ ಸಾಧನೆ ಮಾಡಿ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಹೇಳಿದರು.ಅವರು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಹಾಗೂ ಎಸ್ ಡಬ್ಲ್ಯೂ ಎಪ್ ಯೋಜನೆಯ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದ ಅಡಿಯಲ್ಲಿ ಬರುವ ಕಲಿಕ ಚಟುವಟಿಕೆಗಳ ಕಂಪ್ಯೂಟರ್...

ಕುಕ್ಕುಜಡ್ಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಎಂ.ರವರಿಗೆ ಬೀಳ್ಕೊಡುಗೆ

ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 36 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಆ. 31ರಂದು ಸ್ವಯಂ ನಿವೃತ್ತಿ ಪಡೆದ ಶ್ರೀಮತಿ ರಾಜೀವಿ ಎಂ.ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸೆ. 11ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಅಮರಪಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಚಂದ್ರ ದೀಪ ಬೆಳಗಿಸಿ...

ಸೆ.13 : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಹೊಸ್ತಾರೋಗಣೆ ಕಾರ್ಯಕ್ರಮ – ಬೆಳಗ್ಗೆ 9.15ರ ನಂತರ ದೇವರ ದರ್ಶನ

ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂರ್ವ ಸಂಪ್ರದಾಯದಂತೆ ಸೆ.13ರಂದು ಹೊಸ್ತಾರೋಗಣೆ (ನವಾನ್ನ ಪ್ರಸಾದ) ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಕದಿರು ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾತಃಕಾಲ 5.15ಕ್ಕೆ ಸರಿಯಾಗಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಪೂರ್ವಾಹ್ನ ಗಂಟೆ 7.30ಕ್ಕೆ ತೆನೆ ತರುವುದು, ಕದಿರು ಪೂಜೆ ನಡೆಯಲಿದೆ. ಬಳಿಕ ದೇವಳದ...

ಬೆಳ್ಳಾರೆ ಜೇಸಿಐಗೆ ವಲಯಾಧ್ಯಕ್ಷರ ಭೇಟಿ – ಶಾಶ್ವತ ಯೋಜನೆಗಳ ಅನಾವರಣ, ಕಮಲ ಪತ್ರ ಪುರಸ್ಕಾರ, ಭಿತ್ತಿಪತ್ರ ಬಿಡುಗಡೆ ಹಾಗೂ “ಹೆಜ್ಜೆ ಬದಲಾದಾಗ” ಕಿರು ಚಿತ್ರ ಬಿಡುಗಡೆ

ಜೇಸಿಐ ಬೆಳ್ಳಾರೆ ಮತ್ತು ಯುವ ಜೇಸೀ ವಿಭಾಗ ಬೆಳ್ಳಾರೆ ಇದರ ಜೇಸೀ ಸಪ್ತಾಹ 2021 ಸಪ್ತ ಕಲೋತ್ಸವದ ಅಂಗವಾಗಿ ವಲಯಾಧ್ಯಕ್ಷರ ಭೇಟಿ ಸೆ.11 ರಂದು ನಡೆಯಿತು. ಬೆಳಿಗ್ಗೆ ಶಾಶ್ವತ ಯೋಜನೆಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ನೆಟ್ಟಾರು ಶಾಲೆಗೆ ನೀರಿನ ಟ್ಯಾಂಕ್ ಮತ್ತು ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು. ನಂತರ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಭಾ...

ಹರೀಶ್ ಕಂಜಿಪಿಲಿ ಬೆಂಬಲಕ್ಕೆ ಬಿಜೆಪಿ ಕೊನೆವರೆಗೂ ನಿಲ್ಲಲಿದೆ – ಎವಿ ತೀರ್ಥರಾಮ

ಸರಸ್ವತಿ ಕಾಮತ್ ಅವರ ಆರೋಪ ದುರುದ್ದೇಶಪೂರಿತವಾಗಿದೆ. ಆದರೂ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಹರೀಶ್ ಕಂಜಿಪಿಲಿ ಅವರು ತಪ್ಪು ಮಾಡಿಲ್ಲ ಎಂದು ನಾವು ಮೇಲಿನ ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ ಎಂದು ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ಎ.ವಿ ತೀರ್ಥರಾಮ ಅವರು ಹೇಳಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕಂಜಿಪಿಲಿ ಅವರು ಬಿಜೆಪಿ ಮಂಡಲದ ಆಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ...

ಆಲೆಟ್ಟಿ ಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷರಾಗಿ ಪ್ರದೀಪ್ ಕೊಲ್ಲರಮೂಲೆ

ಆಲೆಟ್ಟಿ (ಅರಂತೋಡು) ಬಿಜೆಪಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷರಾಗಿ ಪ್ರದೀಪ್ ಕೊಲ್ಲರಮೂಲೆ ಆಯ್ಕೆಯಾಗಿದ್ದಾರೆ. ಇವರು ಕೋಲ್ಚಾರ್ ಬೂತ್ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಹರಿಶ್ಚಂದ್ರ ಕೋನಡ್ಕ ನಿಧನ

ಕೊಲ್ಲಮೊಗ್ರು ಗ್ರಾಮದ ಹರಿಶ್ಚಂದ್ರ ಕೋನಡ್ಕ ಸೆ.09 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)

ಅರಂತೋಡು : ಗಣೇಶೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ

ಅರಂತೋಡು ದುರ್ಗಾ ಮಾತಾ ಭಜನಾ ಮಂದಿರದಲ್ಲಿ ಗಣೇಶೋತ್ಸವ ಕಾರ್ಯಕ್ರಮ ಸರಳ ರೀತಿಯಲ್ಲಿ ಆಚರಣೆ ನಡೆಯಿತು. ಬೆಳಿಗ್ಗೆ 5 ಗಂಟೆಗೆ ಗಣಪತಿ ಹವನ, ಸಂಜೆ 5 ಗಂಟೆಯಿಂದ ರಾತ್ರಿ 7.30ರ ತನಕ ಭಜನಾ ಕಾರ್ಯಕ್ರಮ ನಡೆಯಿತು.
Loading posts...

All posts loaded

No more posts

error: Content is protected !!