Ad Widget

ಶ್ರೀಮತಿ ಸೀತಮ್ಮ ಕಳಂಜ ನಿಧನ

ಕಳಂಜ ಗ್ರಾಮದ ಕಳಂಜ ಮನೆ ಶ್ರೀಮತಿ ಸೀತಮ್ಮ ಕಳಂಜ ಇಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು.ಮೃತರು ಪತಿ ಸುಬ್ರಾಯ ಗೌಡ, ಸಹೋದರಿ ಹೊನ್ನಮ್ಮ, ಪುತ್ರ ಪುರಂದರ ಗೌಡ, ಸೊಸೆ ಶ್ರೀಮತಿ ರಮ್ಯ, ಮೊಮ್ಮಗಳು ಬೇಬಿ ಜನನಿ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ನಳಿನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸ್ಪರ್ಧೆಯಲ್ಲಿ ಪೂರ್ಣಿಮಾ ಮಡಪ್ಪಾಡಿಯವರಿಗೆ ದ್ವಿತೀಯ ಸ್ಥಾನ

ದಾವಣಗೆರೆಯಲ್ಲಿ ಅ.23 ರಂದು ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸ್ಪರ್ಧೆಯಲ್ಲಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಯವರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸ.ಉ.ಹಿ. ಪ್ರಾಥಮಿಕ ಶಾಲೆ ಜಾಲ್ಸೂರು(ಅಡ್ಕಾರು) ಸುಳ್ಯ ತಾಲೂಕು ಇಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಶ್ರೀ ದಿನೇಶ್ ಅಂಬೆಕಲ್ಲು ನ್ಯಾಯವಾದಿಗಳು & ನೋಟರಿ ಇವರ ಪತ್ನಿ ಹಾಗೂ ಮಾಧವ...
Ad Widget

ನವಚೇತನ ಯುವಕ ಮಂಡಲ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ

ನವಚೇತನ ಯುವಕ ಮಂಡಲ (ರಿ )ಬೊಳುಬೈಲು, ಕೆ. ಎಂ. ಸಿ. ಆಸ್ಪತ್ರೆ ಅತ್ತಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ, ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಜಾಲ್ಸೂರು ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವು ವಿವೇಕಾನಂದ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಸುಧಾಕರ ಕಾಮತ್, ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ, ವಿನೋಬನಗರ ಜಾಲ್ಸೂರು ನೆರವೇರಿಸಿದರು....

ಅ.30 : ವಳಲಂಬೆಯಲ್ಲಿ ಗಾನಾರ್ಚನೆ

ಗುತ್ತಿಗಾರು: ಯಕ್ಷಗಾನ ಕಲೆಯ ಪೋಷಣೆ ಹಾಗೂ ಕಲಾರಾಧನೆಯ ಸತ್ಕಾರ್ಯದೊಂದಿಗೆ ಕಲಾವಿದರನ್ನೂ ಪೋಷಿಸುವ ಸಾಮಾಜಿಕ ಕಳಕಳಿಯೊಂದಿಗೆ ಯಕ್ಷಕಲಾಭಿಮಾನಿ ಮಿತ್ರರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಅ.30 ರಂದು ಮಧ್ಯಾಹ್ನ 2.30 ರಿಂದ "ಗಾನಾರ್ಚನೆ" ನಡೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಿದ್ಧ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ...

ಐನೆಕಿದು : ಶ್ರಮದಾನ

ಸುಬ್ರಹ್ಮಣ್ಯ, ಅಜ್ಜಿಗುಡ್ಡೆ, ನೂಜಿಬೆಟ್ಟು ಮೂಲಕ ಐನೆಕಿದು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಅ.24 ರಂದು ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ರಸ್ತೆಯನ್ನು ಜನಸಂಚಾರಕ್ಕೆ ಸುಗಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಜನರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಹರಿಹರ ಪಲ್ಲತ್ತಡ್ಕ :ಅ.25 ರಂದು ಎಸ್.ಕೆ ಜನರಲ್ ಸ್ಟೋರ್ ಶುಭಾರಂಭ

ಹರಿಹರ ಪಲ್ಲತ್ತಡ್ಕದ ಶ್ರೀ ದುರ್ಗಾ ಸಂಕೀರ್ಣದಲ್ಲಿ ಅ.25ನೇ ಸೋಮವಾರ ಸಂದೀಪ್ ಕೇವಳ ಮಾಲಕತ್ವದ ಎಸ್.ಕೆ ಜನರಲ್ ಸ್ಟೋರ್ ಶುಭಾರಂಭಗೊಳ್ಳಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ

ಕೊಲ್ಲಮೊಗ್ರು : ಅ.29 ರಂದು ಅರುಣೋದಯ ಜನರಲ್ ಸ್ಟೋರ್ ಶುಭಾರಂಭ

ಉದಯ ಶಿವಾಲ ಮಾಲಕತ್ವದ ಅರುಣೋದಯ ಜನರಲ್ ಸ್ಟೋರ್ ಅ.29 ನೇ ಶುಕ್ರವಾರದಂದು ಕೊಲ್ಲಮೊಗ್ರದ ಎಸ್.ಕೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದ್ದು, ನಮ್ಮಲ್ಲಿ ಎಲ್ಲಾ ರೀತಿಯ ದಿನಸಿ ಸಾಮಾಗ್ರಿಗಳು, ನಂದಿನಿ ಹಾಲು, ಮೊಸರು ಹಾಗೂ ಉತ್ಪನ್ನಗಳು ದೊರೆಯುತ್ತವೆ ಎಂದು ಮಾಲಕರಾದ ಉದಯ ಶಿವಾಲ ತಿಳಿಸಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ

ಕೊಡಗು ಸಂಪಾಜೆ ಸೊಸೈಟಿ ಮಹಾಸಭೆ – ರೈತರಿಗೆ ಮಣ್ಣುಪರೀಕ್ಷೆ ಮಾಡಿಯೇ ಪೂರಕ ಗೊಬ್ಬರ ಪೂರೈಕೆಗೆ ಕ್ರಮ – ಅನಂತ್ ಊರುಬೈಲು

ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ 2020-21 ನೆ ಸಾಲಿನ ವಾರ್ಷಿಕ ಮಹಾಸಭೆಯು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ದಿನಾಂಕ 23.10.2021 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಎನ್.ಸಿ ಅನಂತ್ ರವರು ವಹಿಸಿದ್ದರು, ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ರೇಣುಕಾಕ್ಷ...

ಕವಯಿತ್ರಿ, ಲೇಖಕಿ, ನೃತ್ಯಗಾರ್ತಿ, ಹಾಡುಗಾರ್ತಿ, ನಿರೂಪಕಿ ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಸೌರಭ ರತ್ನ” ರಾಜ್ಯ ಪ್ರಶಸ್ತಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಥಾ ಬಿಂದು ಪ್ರಕಾಶನ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇವರ ಸಹಯೋಗದಲ್ಲಿ15ರಂದು ತುಳು ಭವನ ಉರ್ವಸ್ಟೋರ್ ಮಂಗಳೂರಿನಲ್ಲಿ ಜರುಗಿದ ತುಳು, ಕನ್ನಡ ಸಾಹಿತ್ಯೋತ್ಸವದಲ್ಲಿ ಕವಯಿತ್ರಿ ,ನಿರೂಪಕಿ, ನೃತ್ಯಗಾರ್ತಿ, ಹಾಡುಗಾರ್ತಿ , ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ "ಸೌರಭ ರತ್ನ" ರಾಜ್ಯ...

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಕರಪತ್ರ ಅನಾವರಣ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಶಿಕ್ಷಕರ ಸಂಘದ ವತಿಯಿಂದ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಸ್ವಚ್ಛತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕರಪತ್ರ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಳ್ಯದ ಕೆ ಎಫ್ ಡಿ ಸಿ ಗಾರ್ಡನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಾಯಿಗೀತಾ ಜ್ಞಾನೇಶ್...
Loading posts...

All posts loaded

No more posts

error: Content is protected !!