Ad Widget

ರಥಬೀದಿಯಲ್ಲಿ ಕಟ್ಲೇರಿ ಅಂಗಡಿ ನಡೆಸುತ್ತಿದ್ದ ಧನಂಜಯ ಟೈಲರ್ ನಿಧನ

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಧನಂಜಯ ಕೆ. ಟೈಲರ್‌ ರವರು ನ.1 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.ಅವರು ಗಾಂಧಿನಗರ‌ ಮಸೀದಿ ಬಳಿ ಹಲವಾರು ವರ್ಷಗಳ ಕಾಲ ಕಟ್ಲೆರಿ‌ ಅಂಗಡಿಯನ್ನು ನಡೆಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಗಾಂಧಿನಗರದಲ್ಲಿದ್ದ ಉದ್ಯಮವನ್ನು ಸ್ಥಳಾಂತರಿಸಿ ರಥಬೀದಿಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಅಮರಸುದ್ದಿ ಪತ್ರಿಕೆಯ ಏಜೆಂಟರಾಗಿದ್ದರು. ಒಂದು ಅವಧಿಗೆ ಸುಳ್ಯ...

ಚೈನು ಬಿದ್ದು ಸಿಕ್ಕಿರುತ್ತದೆ

ದಿ. 30/10/2021 ರಂದು ಭಾನುವಾರ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಪವಿತ್ರಾ- ಗುಣಪಾಲ ಇವರ ವಿವಾಹ ಸಮಾರಂಭದಲ್ಲಿ ಚೈನೊಂದು ಬಿದ್ದು‌ಸಿಕ್ಕಿರುತ್ತದೆ. ಕಳೆದುಕೊಂಡವರು ಸರಿಯಾದ ವಿವರವನ್ನು ತಿಳಿಸಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ 8971308355, 6362414844, 9482384692
Ad Widget

ನ.03: ಐವರ್ನಾಡಿನಲ್ಲಿ ಆರ್.ಪಿ.ಚಿಕನ್ ಸೆಂಟರ್ ಶುಭಾರಂಭ

ಐವರ್ನಾಡಿನ ಮುಚ್ಚಿನಡ್ಕ ಶಿವಕೃಪಾ ಆಯಿಲ್ ಮಿಲ್ ಹತ್ತಿರ ರೇಣುಕಾಪ್ರಸಾದ್ ಚಾಕೋಟೆ ಮಾಲಕತ್ವದಲ್ಲಿ ಆರ್.ಪಿ.ಚಿಕನ್ ಸೆಂಟರ್ ನ.03(ನಾಳೆ) ಬುಧವಾರದಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಊರುಕೋಳಿ ಹಾಗೂ ಮೊಟ್ಟೆ ರಖಂ ಹಾಗೂ ಚಿಲ್ಲರೆ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ಹಾಗೂ ಕೃಷ್ಣಲೀಲೆ-ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ

ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು....

ಬಾಳಿಲ : ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ 66ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಆಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 66ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮಾಡಿ ಶುಭ ಹಾರೈಸಿದ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ಕನ್ನಡವನ್ನು ಉಳಿಸಿ ಬೆಳೆಸಿ ಎಂದರು. ಮುಖ್ಯಶಿಕ್ಷಕರಾದ ಯಶೋಧರ ಎನ್ ಶುಭಹಾರೈಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಧ್ಯಾಪಕ ವೃಂದದವರು, ಸಿಬ್ಬಂದಿ ವರ್ಗದವರು, ಸ್ಕೌಟ್...

ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ

ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು....

ಅಮರಸುದ್ದಿ ಕಚೇರಿಯಲ್ಲಿ ಗಣಹೋಮ

ಅಮರ ಸುದ್ದಿ ಕಚೇರಿಯಲ್ಲಿ ನ.1.ರಂದು ಗಣಹೋಮ ನಡೆಯಿತು. ಈ ಸಂದರ್ಭ ಪ್ರಧಾನ ಸಂಪಾದಕರಾದ ಮುರಳೀಧರ ಅಡ್ಡನಪಾರೆ ಹಾಗೂ ಕುಟುಂಬಸ್ಥರು, ಹಿರಿಯ ವರದಿಗಾರ ಪದ್ಮನಾಭ ಅರಂಬೂರು, ಕಾರ್ಯನಿರ್ವಾಹ ಸಂಪಾದಕ ಸುದೀಪ್ ರಾಜ್ ಕೋಟೆಮೂಲೆ, ಕಚೇರಿ ನಿರ್ವಾಹಕ ಕೀರ್ತನ್ ಕುಕ್ಕುಡೇಲು, ವರದಿಗಾರರಾದ ಜಗದೀಶ್ ಮುಂಡುಗಾರು, ಲಿಪಿ ಸಂಯೋಜಕಿ ಸೌಮ್ಯ ಬಳ್ಳಕ್ಕಾನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ : ಅಕ್ರಮ ಗೋಸಾಗಾಟ ಶಂಕೆ, ಪಿಕ್ ಅಪ್ ಪೊಲೀಸ್ ವಶಕ್ಕೆ

ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಹಿಂದೂ ಕಾರ್ಯಕರ್ತರು ಅಕ್ರಮ ಗೋ ಸಾಗಾಟದ ಶಂಕೆಯ ಹಿನ್ನೆಲೆ ವಿಟ್ಲ ಮೂಲದ ಅಬ್ದುಲ್ ಕುಂಞಿ ಅವರಿಗೆ ಸೇರಿದ ಪಿಕ್ ಅಪ್ ಅನ್ನು ತಡೆದು ಸುಳ್ಯ ಪೋಲೀಸರಿಗೊಪ್ಪಿಸಿದ್ದಾರೆ‌. ಸದ್ಯ ಹಸುವನ್ನು ಸಾಕಲು ಮಂಡೆಕೋಲು ವಸಂತ ಎಂಬವರಿಂದ ಖರೀದಿಸಿದ್ದೆ ಎಂದು ಅಬ್ದುಲ್ ಕುಂಞ ಹೇಳಿಕೆ ನೀಡಿದ್ದು ಸುಳ್ಯ ಪೊಲೀಸರು ದನ ಸಾಗಾಟಕ್ಕೆ ಪರ್ಮಿಶನ್...

ಜಯಾನಂದ ಸಂಪಾಜೆಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ

ಅರಂತೋಡು: ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸಾಧನೆ ಗೈದ ಹಿನ್ನೆಲೆಯಲ್ಲಿ ಜಯಾನಂದ ಸಂಪಾಜೆ ಸೇರಿದಂತೆ ಒಟ್ಟಾರೆ 58 ಮಂದಿ ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವದ ದಿನದಂದು ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಹು ವರ್ಷದ ಯಕ್ಷಗಾನದ ಅನುಭವ ಹೊಂದಿರುವ ಜಯಾನಂದ ಅವರು ಹಲವು ಪ್ರಸಂಗಗಳಲ್ಲಿ ತನ್ನದೇ ಆದ ವಿಶಿಷ್ಟ...

ದ.ಕ ಜಿಲ್ಲಾ ಬಿ.ಜೆ.ಪಿ ಎಸ್.ಸಿ. ಮೋರ್ಚಾದ ಸಭೆ- ಸಚಿವ ಎಸ್ ಅಂಗಾರ ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಎಸ್ ಸಿ ಮೋರ್ಚಾ ದ ಜಿಲ್ಲಾ ಕಾರ್ಯಕಾರಿಣಿ ಸಭೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು. ಈ ಸಂದರ್ಭ ಸಚಿವ ಎಸ್.ಅಂಗಾರ ದ.ಕ.ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಎಸ್. ಸಿ. ಮೋರ್ಚಾ ಅಧ್ಯಕ್ಷ ವಿನಯ್ ನೇತ್ರ ದಡ್ಡಲ್ ಕಾಡು, ಪ್ರಧಾನ ಕಾರ್ಯದರ್ಶಿಗಳಾದ ಅಣ್ಣಿ ಎಳ್ತಿಮಾರ್, ಭೋಜರಾಜ್ ಅಮೀನ್ ಪ್ರಮುಖರಾದ...
Loading posts...

All posts loaded

No more posts

error: Content is protected !!