Ad Widget

ಪಂಜ : ಪ್ರಕೃತಿ ಡಿಜಿಟಲ್ ಸ್ಟುಡಿಯೋ ಶುಭಾರಂಭ

ಗುತ್ತಿಗಾರಿನಲ್ಲಿ ಕಳೆದ 27 ವರ್ಷಗಳಿಂದ ಕಾರ್ಯಚರಿಸುತ್ತಿರುವ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಇದರ ಸಹ ಸಂಸ್ಥೆ ಪಂಜದ ವಾಣಿಶ್ರೀ ಕಾಂಪ್ಲೆಕ್ಸ್ ನಲ್ಲಿ ನ.12 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕೃತಿ ಸ್ಟುಡಿಯೋ ಮಾಲಕರಾದ ಶಿವರಾಮ್ ದೇವ ಹಾಗೂ ಶ್ರೀಮತಿ ಯಶೋಧ ಶಿವರಾಮ್...

SDPI ಕರ್ನಾಟಕ ರಾಜ್ಯದ ನೂತನ ಕಾರ್ಯದರ್ಶಿಯಾಗಿ “ಶಾಫಿ ಬೆಳ್ಳಾರೆ” ಆಯ್ಕೆ

ಸುಳ್ಯ:- ಎಸ್‌ಡಿಪಿಐ ಪಕ್ಷದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಫಿ ಬೆಳ್ಳಾರೆ ಮತ್ತು ಆನಂದ ಮಿತ್ತಬೈಲ್ ರಾಜ್ಯ ಕಾರ್ಯದರ್ಶಿ ಗಳಾಗಿ ಆಯ್ಕೆ ಯಾಗಿದ್ದಾರೆ.ನವೆಂಬರ್ 6 ಮತ್ತು 7 ರಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2021-24 ರ ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನ...
Ad Widget

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ : ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆ,ಗ್ರಾಮ ಸಭೆ, ಗುದ್ದಲಿ ಪೂಜೆ, ಉದ್ಘಾಟನೆಗೆ ನಿರ್ಬಂಧ

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ರಾಜ್ಯದ ಒಟ್ಟು 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24 ರಂದು ನಾಮಪತ್ರಗಳ ಪರಿಶೀಲನೆ...

ಮರಕತ ದೇವಸ್ಥಾನಕ್ಕೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ

ಮರಕತ ದೇವಸ್ಥಾನಕ್ಕೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜನ್ಮ ದಿನದ ಅಂಗವಾಗಿ ದೇವರ ದರ್ಶನ ಪಡೆದು ನದಿಯಲ್ಲಿರುವ ದೇವರ ಮೀನಿಗೆ ಆಹಾರವನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುಳಿಯ ಕೇಶವ ಭಟ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ನಡುಗಲ್ಲು, ಚಾಮಯ್ಯ ಚೆಮ್ನೂರು....

ತೀರ್ಥಪ್ರಸಾದ್ -ಶ್ರುತಿ

ಜಾಲ್ಸೂರು ಗ್ರಾಮದ ಬೈತಡ್ಕ ಕಾಜಿಮಡ್ಕ ದಿ. ನಾರಾಯಣ ಗೌಡರ ಪುತ್ರ ತೀರ್ಥಪ್ರಸಾದ್ ರ ವಿವಾಹ ನಿಶ್ಚಿತಾರ್ಥವು ಮಡಪ್ಪಾಡಿ ಗ್ರಾಮದ ಬಲ್ಕಜೆ ಪಾರೆಪ್ಪಾಡಿ ನೀಲಪ್ಪ ಗೌಡರ ಪುತ್ರಿ ಶ್ರುತಿಯೊಂದಿಗೆ ನ.10 ರಂದು ವಧುವಿನ ಮನೆಯಲ್ಲಿ ನಡೆಯಿತು.

ಶುಭವಿವಾಹ: ಗಾಯತ್ರಿ- ಸತೀಶ್ ಕುಮಾರ್

ಅಮರಮುಡ್ನೂರು ಗ್ರಾಮದ ಕಟ್ಟದಮಜಲು ಶ್ರೀಮತಿ ವಸಂತಿ ಮತ್ತು ಶ್ರೀ ಹರಿಶ್ಚಂದ್ರ ಗೌಡರ ಪುತ್ರಿ ಗಾಯತ್ರಿಯವರ ವಿವಾಹವು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೇಂಕನಾಜೆ ದಿ|ರಾಮಣ್ಣ ಗೌಡರ ಪುತ್ರ ಸತೀಶ್ ಕುಮಾರ್ ರೊಂದಿಗೆ ನ.11ರಂದು ಕುಕ್ಕುಜಡ್ಕ ಸಹಕಾರಿ ಸಂಘದ 'ಅಮರ ಸಹಕಾರ ಸೌಧ' ಸಭಾಭವನದಲ್ಲಿ ನಡೆಯಿತು.

ಹರಿಹರಪಲ್ಲತ್ತಡ್ಕ : ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯಿಂದ ಜೇನು ಕೃಷಿ ಬಗ್ಗೆ ಮಾಹಿತಿ

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಪುತ್ತೂರು ಇದರ ವತಿಯಿಂದ ನ.10 ರಂದು ಪೂರ್ವಾಹ್ನ 10:30 ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಾಗೂ ಅಪರಾಹ್ನ 02:30 ಕ್ಕೆ ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದ ಸಭಾಂಗಣದಲ್ಲಿ ಒಪ್ಪಂದ ಆಧಾರಿತ ಜೇನು ಕೃಷಿ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಮೂಲಚಂದ್ರ ಆರ್ಯಾಪು, ರಾಮ್ ಪ್ರತೀಕ್...

ದೇವ : ಕೆರೆಯಲ್ಲಿ ಪತ್ತೆಯಾದ ಮೊಸಳೆ – ಅರಣ್ಯ ಇಲಾಖೆಯಿಂದ ಸೆರೆ

ದೇವಚಳ್ಳ ಗ್ರಾಮದ ದೇವದಲ್ಲಿ ಮೊಸಳೆ ಪತ್ತೆಯಾಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಘಟನೆ ನ.10 ರಂದು ನಡೆದಿದೆ. ದೇವ ಬಾಲಕೃಷ್ಣ ಗೌಡರ ತೋಟದ ಕೆರೆಯಲ್ಲಿ ನ.10 ರಂದು ಬೆಳಿಗ್ಗೆ ಪತ್ತೆಯಾದ ಮೊಸಳೆಯನ್ನು ಅರಣ್ಯ ಇಲಾಖೆಯವರು ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಕಾರ್ಯಚರಣೆಯಲ್ಲಿ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್, ಉಪವಲಯಾರಣ್ಯಾಧಿಕಾರಿ ರವೀಂದ್ರ , ಅರಣ್ಯ ರಕ್ಷಕ...

ಮಡಪ್ಪಾಡಿ: ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಅಶ್ರುತರ್ಪಣ ಕಾರ್ಯಕ್ರಮ

"ನಿಮ್ ತರ ಬದುಕೋಕೆ ಪ್ರಯತ್ನ…ನೀವೇ ನಮ್ ಬದುಕಿನ ರಾಜರತ್ನ…..ಮನುಷ್ಯನಿಂದ ದೇವರಾಗಿ ನಿಮ್ಮ ಹುಟ್ಟು ಇದು ಸಾವಲ್ಲ……ಜೊತೆಗಿರದ ಜೀವ ಎಂದೆಂದಿಗೂ ಜೀವಂತ……" ಎಳೆಯ ವಯಸ್ಸಿನಲ್ಲಿ ಅಕಾಲಿಕ ಮರಣ ದವಡೆಗೆ ಸಿಲುಕಿ ಭಗವಂತನ ಪಾದ ಸೇರಿದ ಕರುನಾಡಿನ ಕಣ್ಮಣಿ ಪುನೀತ್ ರಾಜ್ ಕುಮಾರ್ ರಿಗೆ ಮಡಪ್ಪಾಡಿಯ ಯುವಕ ಮಂಡಲ ಸಭಾಭವನದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ನೆರವೇರಿಸಲಾಯಿತು. ಸುಳ್ಯ ಎಪಿಎಂಸಿ ಅಧ್ಯಕ್ಷರಾದ...

ತೀರ್ಥಪ್ರಸಾದ್ -ಶ್ರುತಿ

ಜಾಲ್ಸೂರು ಗ್ರಾಮದ ಬೈತಡ್ಕ ಕಾಜಿಮಡ್ಕ ದಿ. ನಾರಾಯಣ ಗೌಡರ ಪುತ್ರ ತೀರ್ಥಪ್ರಸಾದ್ ರ ವಿವಾಹ ನಿಶ್ಚಿತಾರ್ಥವು ಮಡಪ್ಪಾಡಿ ಗ್ರಾಮದ ಬಲ್ಕಜೆ ಪಾರೆಪ್ಪಾಡಿ ನೀಲಪ್ಪ ಗೌಡರ ಪುತ್ರಿ ಶ್ರುತಿಯೊಂದಿಗೆ ನ.10 ರಂದು ವಧುವಿನ ಮನೆಯಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!