Ad Widget

ಗುತ್ತಿಗಾರು : ಪರ್ಸ್ ಕಳೆದುಹೋಗಿದೆ

ಗುತ್ತಿಗಾರಿನ ಕಂದ್ರಪ್ಪಾಡಿ ಕ್ರಾಸ್ ಬಳಿ ನ.14 ರಂದು ರಾತ್ರಿ ಅಮೂಲ್ಯ ದಾಖಲೆಗಳಿರುವ ಪರ್ಸ್ ಕಳೆದುಹೋಗಿದೆ. ಅದರಲ್ಲಿ ಹಣ ಹಾಗೂ ಅಮೂಲ್ಯ ದಾಖಲೆಗಳಿದ್ದು ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಬೇಕಾಗಿ ಗುರುಪ್ರಸಾದ್ ಪೂಜಾರಿಕೋಡಿ (99728 62725) ವಿನಂತಿಸಿದ್ದಾರೆ.

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಪುತ್ತೂರು ಸಹಾಯ ಆಯುಕ್ತರಾದ ಯತೀಶ್ ಉಳ್ಳಾಲ್ ಅವರ ಅದ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ...
Ad Widget

ಪೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್.

ದ.ಕ.ಜಿಲ್ಲಾ ಪೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್. ಇಂದು ನಡೆದ ಜಿಲ್ಲಾ ಸಭೆಯಲ್ಲಿ ಆಯ್ಕೆಯಾದರು. ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಂತಲಾ ಸ್ಟುಡಿಯೋ ನಡೆಸುತ್ತಿದ್ದಾರೆ. ಇವರು ಸುಬ್ರಮಣ್ಯ ರೋಟರಿ, ಜೇಸಿಐ, ಹಳೆವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. (ವರದಿ : ಶ್ರೀದೇವಿ ವಿ ಹೆಗ್ಡೆ)

ಶುಭವಿವಾಹ : ಸುಮಿತ್ರಾ – ಯೋಗೀಶ್

ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಗಡಿಕಲ್ಲು ಶ್ರೀ ಕೃಷ್ಣ ನಾಯ್ಕ ಅವರ ಪುತ್ರಿ ಸುಮಿತ್ರಾ ರವರ ವಿವಾಹವು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿಯ ದಿ. ಕೊರಗಪ್ಪ ನಾಯ್ಕರ ಪ್ರಥಮ ಪುತ್ರ ಯೋಗೀಶ್ ರವರೊಂದಿಗೆ ನ.11 ರಂದು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ಇಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ಮಡಪ್ಪಾಡಿ : ಮರದಲ್ಲೇ ಮೊಳಕೆಯೊಡೆದು ಸಸಿಯಾದ ತೆಂಗಿನಕಾಯಿ

ಮಡಪ್ಪಾಡಿ ಗ್ರಾಮದ ಬೊಮ್ಮೆಟ್ಟಿ ಪ್ರಸಾದ್ ಅವರ ತೆಂಗಿನಮರದಲ್ಲೇ ತೆಂಗಿನಕಾಯಿ ( ಕುಂದ್ರಿ) ಮೊಳಕೆಯೊಡೆದು ಸಸಿಯಾಗಿದೆ.

ಸ್ನೇಹಿತರ ಬಳಗ ಕಲ್ಪಡ ವತಿಯಿಂದ ದೀಪಾವಳಿ ಕ್ರೀಡಾಕೂಟ,ಸನ್ಮಾನ ಕಾರ್ಯಕ್ರಮ

ಕಾಣಿಯೂರು: ತುಳುನಾಡು ಶ್ರೇಷ್ಠ ಸಂಸ್ಕೃತಿ,ಸಂಸ್ಕಾರ ಹೊಂದಿರುವ ಪುಣ್ಯ ಭೂಮಿ.ಮೂವಪ್ಪೆಯಂತಹ ತೀರಾ ಹಿಂದುಳಿದ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಊರಿನವರೆಲ್ಲರೂ ಸೇರಿಕೊಂಡು ಆಚರಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಸವಣೂರು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ಹೇಳಿದರು.ಅವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಸ್ನೇಹಿತರ ಬಳಗ ಕಲ್ಪಡ,ಮೂವಪ್ಪೆ ಇದರ ಆಶ್ರಯದಲ್ಲಿ ಮೂವಪ್ಪೆ ಶಾಲಾ ಕ್ರೀಡಾಂಗಣದಲ್ಲಿ ನಡೆದ 5...

ಹರಿಹರ ಪಲ್ಲತಡ್ಕ : ಶಾಲಾ ಶಿಕ್ಷಕರ ವಿರುದ್ದ ಪ್ರತಿಭಟನೆ- ಶಿಕ್ಷಕರ ಬದಲಾವಣೆ ಆಗದಿದ್ದರೇ ಮಕ್ಕಳನ್ನೇ ಬೇರೆ ಶಾಲೆಗೆ ಕಳುಹಿಸುತ್ತೇವೆ – ಎಸ್ ಡಿ.ಎಂ.ಸಿ ಅಧ್ಯಕ್ಷ ನೇಮಿಚಂದ್ರ

ಹರಿಹರ ಪಲ್ಲತಡ್ಕ ಹಿ.ಪ್ರಾ.ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ಮಾಡುತ್ತಿಲ್ಲ, ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ, ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಆರೋಪಿಸಿ ಮಕ್ಕಳು ಶಾಲೆಗೆ ಬರದೆ ಮನೆಯಲ್ಲೇ ಕೂತ ಘಟನೆ ವರದಿಯಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಇತರೇ ೨ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಬಂದರೂ ತರಗತಿ ನಡೆಸುತ್ತಿಲ್ಲ, ಶಾಲೆಯಲ್ಲಿದ್ದರೂ ತರಗತಿಗೆ ಹಾಜರಾಗುವುದಿಲ್ಲ, ಮಕ್ಕಳಲ್ಲಿ ಬೇಧಭಾವ...

ಚರಿಷ್ಮಾ ಕಾನಾವು ಹಾಡಿರುವ “ಅಮರ್ ಜಾಲ ಕೊರಗಜ್ಜ” ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ

https://youtu.be/ihuD5HqmyCs ಅದ್ವೈತಂ ಕ್ರಿಯೇಷನ್ ವತಿಯಿಂದ ರಚಿಸಿರುವ ಅಮರ್ ಜಾಲ ಕೊರಗಜ್ಜ ಎಂಬ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿತು. ಇದಕ್ಕೆ ಮನೀಷ್ ಪ್ರಜ್ವಲ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಹಾಡಿಗೆ ಚರಿಷ್ಮಾ ಕಾನಾವು ಅಡ್ಡನಪಾರೆ ಸ್ವರ ನೀಡಿದ್ದಾರೆ. ಚರಿಷ್ಮಾ ಇವರು ದೇವಚಳ್ಳ ಗ್ರಾಮದ ಅಡ್ಡನಪಾರೆ ಕಾನಾವು ರವೀಂದ್ರ ಮತ್ತು ಶ್ರೀಮತಿ ತಾರಾ ದಂಪತಿಗಳ ಪುತ್ರಿ.

ದೇಶಾದ್ಯಂತ ಚರ್ಚೆಯಾಗುತ್ತಿರುವ ಬಿಟ್ ಕಾಯಿನ್ ಬಗ್ಗೆ ಇಲ್ಲಿದೆ ಮಾಹಿತಿ

ಬಿಟ್ ಕಾಯಿನ್ ಎಂದರೇನು?: ಕೊಳ್ಳುವ, ಮಾರುವ ಮತ್ತು ಹಣ ಸಂಗ್ರಹಿಸುವ ಸಾಧನವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಪ್ರಚಲಿತಕ್ಕೆ ಬಂದಿರುವುದರಿಂದ ವ್ಯವಹಾರದಲ್ಲಿ ಬಾರಿ ಹಗರಣ ನಡೆದು ಬಂದಿದೆ ಎಂದು ಸುದ್ದಿಯಾಗಿದೆ. ಇದನ್ನು ಗುಪ್ತಲಿಪಿ ಶಾಸ್ತ್ರ ಎಂಬ ತಂತ್ರಜ್ಞಾನದ ಮೂಲಕ ನಡೆಸಲಾಗುತ್ತದೆ. ಅಲ್ಲದೇ ಸದ್ಯದಲ್ಲಿರುವ ಅನೇಕ ವಿದ್ಯುನ್ಮಾನ ಹಂತಗಳಲ್ಲಿ ಬಿಟ್ ಕಾಯಿನ್ ಮೊದಲಿನ ಸ್ಥಾನದಲ್ಲಿ ಇದೆ ಎಂಬುದು ಸತ್ಯ....

ರೈತ ಉತ್ಪಾದಕ ಸಂಸ್ಥೆಯಿಂದ ರೈತರ ಆದಾಯ ಹೆಚ್ಚಳ – ಲ.ವೀರಪ್ಪ ಗೌಡ ಕಣ್ಕಲ್

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೇವಾ ಸದನದಲ್ಲಿ ಏರ್ಪಡಿಸಿದ್ದು, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ಅವರು ಮಾಹಿತಿ ನೀಡಿದರು.ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಆ ಮೂಲಕ ಕೃಷಿಯನ್ನು ಉದ್ಯಮವನ್ನಾಗಿಸಿ ಕೃಷಿಕರ ಆದಾಯವನ್ನು ಹೆಚ್ಚಿಸುವುದರಿಂದ ಸುಳ್ಯದಲ್ಲಿ...
Loading posts...

All posts loaded

No more posts

error: Content is protected !!