- Wednesday
- March 18th, 2026
ಮಾಡಾವು ಸಬ್ ಸ್ಟೇಷನ್ ನಿಂದ ಬೆಳ್ಳಾರೆ, ನಿಂತಿಕಲ್ಲು, ಪಂಜದ ಮೂಲಕ ಗುತ್ತಿಗಾರಿಗೆ ಹಾದುಹೋಗಿರುವ ಎಚ್.ಟಿ ವಿದ್ಯುತ್ ಲೈನ್ ಕಂಬಗಳಲ್ಲಿ ಅಳವಡಿಸಲಾಗಿದ್ದ 'ಅಪಾಯ'(DANGER) ಸೂಚನಾ ಬೋರ್ಡ್ ಗಳು ಬರಿದಾಗಿದ್ದು, ಖಾಲಿ ಖಾಲಿ ಬೋರ್ಡ್ ಗಳು ಕಾಣಸಿಗುತ್ತಿವೆ. ಜನರಿಗೆ ಅಪಾಯ ಎಂಬುದನ್ನು ಮನವರಿಕೆ ಮಾಡುವ ಮೂಲಕ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಾಕಲಾಗಿರುವ ಈ ಸೂಚನಾ ಫಲಕಗಳು ಅಗತ್ಯವಿದ್ದು, ಅಕ್ಷರಗಳು...
ಎಲಿಮಲೆ ಸರಕಾರಿ ಪ್ರೌಡಶಾಲೆಯಲ್ಲಿ ನಡೆಯುತ್ತಿರುವ ಅಂತರರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ 'ಅನ್ವೇಷಣಾ-2021' ಕಾರ್ಯಕ್ರಮದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಇಲ್ಲಿನ ವಿದ್ಯಾರ್ಥಿಗಳು ಯಕ್ಷನೃತ್ಯ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರಪ್ರಸಾದ್ ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಶಿವಪ್ರಸಾದ್ ಹಾಗೂ ಶಿಕ್ಷಕಿ ಶುಭಾ ಡಿ. ತಂಡವನ್ನು ನಿರ್ದೇಶಿಸಿದ್ದರು.
ತ್ರಿಸ್ಟಾರ್ ಕಳಂಜ ವತಿಯಿಂದನ.28 ಆದಿತ್ಯವಾರದಂದು(ನಾಳೆ) ಕಳಂಜದಲ್ಲಿ ಆಹ್ವಾನಿತ ತಂಡಗಳ ಅಂಡರ್ 18 ಲೀಗ್ ಮಾದರಿಯ ಪುಟ್ಬಾಲ್ ಪಂದ್ಯಾಟ ಜರುಗಲಿದೆ. ಪಂದ್ಯಾಟದಲ್ಲಿ ಸುಳ್ಯ ತಾಲೂಕಿನ 8 ಬಲಿಷ್ಠ ತಂಡಗಳು ಭಾಗವಹಿಸಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಪೆರುವಾಜೆ ಗ್ರಾಮದ ಮಠತ್ತಡ್ಕ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲದ ಪೂರ್ವಭಾವಿಯಾಗಿ ನ.27ರಂದು ಕೊಳ್ಳಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರಾದ ನರಹರಿ ಭಟ್ ಮಠತ್ತಡ್ಕ ಹಾಗೂ ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜನಪದ ಕ್ಷೇತ್ರಗಳಲ್ಲಿ ಸೇವೆ ಮಾಡುವ ದೃಷ್ಟಿಯನ್ನಿಟ್ಟು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಎಂಬ ಟ್ರಸ್ಟ್ ಒಂದು ನೋಂದಾವಣೆಗೊಂಡಿದೆ. ಇದರ ಸಭೆಯು ಇತ್ತೀಚೆಗೆ ಕಡ್ಲಾರುವಿನಲ್ಲಿ ನಡೆಯಿತು. ಈ ಸಭೆಯಲ್ಲಿ ಟ್ರಸ್ಟಿನ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಂದುವರಿಸುವುದರ ಬಗ್ಗೆ ನಿರ್ಧರಿಸಲಾಯಿತು.ಈ ಟ್ರಸ್ಟ್ ನ ಅಧ್ಯಕ್ಷರಾಗಿ ನಿರಂಜನ ಕಡ್ಲಾರು,...
ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ದಿನದ ಮಹತ್ವವನ್ನು ವಿವರಿಸಿದರು. ಸಹ ಶಿಕ್ಷಕರಾದ ವೆಂಕಟೇಶ್ ಕುಮಾರ್ ಯು ಸಂವಿಧಾನದ ಪ್ರಸ್ತಾವನೆಯನ್ನು ಓದಿಸಿ, ಸಂದರ್ಭೋಚಿತವಾಗಿ ಮಾತನಾಡಿದರು. ಸಹಶಿಕ್ಷಕಿ ಸಹನಾ ಬಿ ಬಿ ಸ್ವಾಗತಿಸಿ, ವಂದನಾರ್ಪಣೆಗೈದರು. ಅದೇ ದಿನ ಬೆಳಿಗ್ಗೆ 11.00 ಗಂಟೆಗೆ ರಾಷ್ಟ್ರಪತಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಆರ್ಥಿಕ ಯೋಜನಾ ವೇದಿಕೆ ವತಿಯಿಂದ ಅರ್ಥಶಾಸ್ತ್ರ ಕೃತಿಗಳ ಅನಾವರಣ ಕಾರ್ಯಕ್ರಮ ನವೆಂಬರ್ 26 ರಂದು ಕಾಲೇಜಿನಲ್ಲಿ ನಡೆಯಿತು. ಅಂತಿಮ ಕಲಾ ಪದವಿಯ ವಿದ್ಯಾರ್ಥಿಗಳಿಗಾಗಿ ಡಾ. ಪ್ರಭಾಕರ ಶಿಶಿಲರು ಬರೆದ "ಆರ್ಥಿಕ ಚಿಂತನೆ" ಹಾಗೂ "ಅಭಿವೃದ್ಧಿ ಅರ್ಥಶಾಸ್ತ್ರ" ಎಂಬೆರಡು ಕೃತಿಗಳನ್ನು ಅನಾವರಣ ಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ವಲಯ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ನವದೆಹಲಿಯ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಕೌನ್ಸಿಲ್ ನವರು ಪ್ರತಿವರ್ಷ ಕೊಡಮಾಡುವ "ಭಾರತ ವಿದ್ಯಾ ರತ್ನ ಅವಾರ್ಡ್ 2021" ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಸಂಘಟನಾ ಕ್ಷೇತ್ರವನ್ನು ಗಮನಿಸಿ ಕೊಡಮಾಡುವ 2021 ನೇ ಸಾಲಿನ ಪ್ರಶಸ್ತಿಗೆ ದಕ್ಷಿಣ...
ಹರಿಹರ ಪಲ್ಲತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.25 ರಂದು ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿ ಆರಂಭಗೊಂಡಿತು.ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್.ಡಿ.ಎಂ.ಸಿ ಅದ್ಯಕ್ಷರಾದ ನೇಮಿಚಂದ್ರ ದೋಣಿಪಳ್ಳ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ದೇವಕಿ ನೆತ್ತಾರ ವಂದಿಸಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಾವಿತ್ರಿ,...
ನಮ್ಮ ಊರಿನ ಹಾಗೂ ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಈ ಬಾರಿಯ ಒಕ್ಕಲಿಗ ಸಮುದಾಯದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಈ ಭಾಗದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಇಲ್ಲಿನ ಸಮುದಾಯ ಬಾಂಧವರಿಗೆ ಇಂಥದೊಂದು ಚುನಾವಣೆಯಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ಹೇಳಿದರು. ಸುಳ್ಯದಲ್ಲಿ ನ.೨೬ ರಂದು...
Loading posts...
All posts loaded
No more posts
