Ad Widget

ಸುಳ್ಯ :- ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರಗಳ ತೆರವು

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಟೆಲು ಅಡಿಕೆಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ಮರದ ದಿಮ್ಮಿಗಳಿಂದ ತುಂಬಿದ್ದು, ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಇದನ್ನು ಮನಗಂಡ ದೊಡ್ಡತೋಟ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡಿಸೆಂಬರ್ 02 ರಂದು ಈ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಸಮೀಪದ ಮನೆಯವರಾದ ಶಕುಂತಳಾ ಭಟ್ ಅಡಿಕೆಹಿತ್ಲು ಎಂಬುವವರು...

ಕಳಂಜ: ಬುಖಾರಿಯಾ ಜುಮಾ ಮಸ್ಜಿದ್ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

ಕಳಂಜದ ಬುಖಾರಿಯಾ ಜುಮಾ ಮಸ್ಜಿದ್ ನ ಆಡಳಿತ ಮಂಡಳಿಗೆನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಡಿ.01ರಂದು ನಡೆಯಿತು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್.ಕೆ.ಎಚ್, ಕೋಶಾಧಿಕಾರಿಯಾಗಿ ಮಹಮ್ಮದ್.ಕೆ.ಎಂ ಆಯ್ಕೆಯಾದರು.
Ad Widget

ಮತದಾರ ಚೀಟಿ ಎಲ್ಲರಿಗೂ ದೊರೆಯಲು ರಾಜ್ಯ ಒಕ್ಕಲಿಗ ಸಂಘ ಕ್ರಮ ಕೈಗೊಳ್ಳಲಿ- ಹೇಮಾನಂದ ಹಲ್ದಡ್ಕ

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ.12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಹಲವು ಮತದಾರರಲ್ಲಿ ಗುರುತಿನ ಚೀಟಿ ಇಲ್ಲದಿರುವುದರಿಂದ ಎಲ್ಲಾ ಮತದಾರರಿಗೆ ಗುರುತಿನ ಚೀಟಿಯನ್ನು ಒದಗಿಸಲು ರಾಜ್ಯ ಒಕ್ಕಲಿಗರ ಸಂಘವು ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯತ್ವ ಮತ್ತು ಡಿಜಿಟಲ್ ಮಾದರಿಯಲ್ಲಿ ಗುರುತಿನ ಚೀಟಿ ದೊರೆಯುವಂತಾಗಬೇಕು...

ಗುತ್ತಿಗಾರು : ಜೆ.ಜೆ ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿ ಶುಭಾರಂಭ

ಜೆ.ಜೆ. ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿಯು ಡಿ.2 ರಂದು ಗುತ್ತಿಗಾರಿನ ಎಸ್ ಎಮ್ ಎಸ್ ಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ನೆರವೇರಿಸಿದರು. ಗುತ್ತಿಗಾರು ಗ್ರಾ.ಪಂ ಸದಸ್ಯರು,ಕಾಂಪ್ಲೆಕ್ಸ್ ಮಾಲಕರಾದ ವೆಂಕಟ್ ವಳಲಂಬೆ ಮೊದಲ ಪಾಲಿಸಿ ಹಸ್ತಾಂತರಿಸಿ ಶುಭ...

ಪಾಲೆಪ್ಪಾಡಿ : ಅಷ್ಟಮಂಗಲ ಕಾರ್ಯಕ್ರಮ

ಪಾಲೆಪ್ಪಾಡಿ ಇರ್ವೆರ್ ಉಳ್ಳಾಕ್ಲು ಚಾವಡಿಯ ವಠಾರದಲ್ಲಿ ಸ್ವರ್ಣ ಇಡುವ ಕಾರ್ಯಕ್ರಮ ಹಾಗೂ ಅಷ್ಟಮಂಗಲ ಕಾರ್ಯಕ್ರಮವು ನ.29 ರಿಂದ ಡಿ.2 ರವರೆಗೆ ನಡೆಯಿತು.‌ ಶಶಿಧರನ್ ನಾಯರ್ ಕುತ್ತಿಕೋಳು ಇವರ ನೇತೃತ್ವದಲ್ಲಿ ಅಷ್ಟಮಂಗಲ ನಡೆದು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಪಾಲೆಪ್ಪಾಡಿ ಬೈಲಿನ ಭಕ್ತಾಭಿಮಾನಿಗಳು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಹೋರಾಟ: ಎನ್ ಎಸ್ ಯು ಐ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಶಿಕ್ಷಣ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಹೋರಾಟ ಮುಂದುವರಿಯಲಿದೆ ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಇವರು ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಜಲಜೀವನ್ ಮಿಷನ್ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ ಜಲಜೀವನ್ ಮಿಷನ್ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ನೋಡಲ್ ಅಧಿಕಾರಿ ಜಲಜೀವನ್ ಮಿಷನ್ ಇವರು ನೀರಿನ ಬಳಕೆ, ಸ್ವಚ್ಛತೆ ಸರಬರಾಜು, ವ್ಯವಸ್ಥೆ ,ನೀರು ಇಂಗಿಸುವ ಕ್ರಮ ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಿದರು. ಪಂಚಾಯತು ಸಿಬ್ಬಂದಿ ವಸಂತ್...

ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸುಳ್ಯ ಸದಸ್ಯರಿಂದ ಧರ್ಮಸ್ಥಳ ಲಕ್ಷದೀಪ ಪಾದಯಾತ್ರೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 9ನೇ ವರ್ಷದ ಲಕ್ಷದೀಪ ಪಾದಯಾತ್ರೆಯಲ್ಲಿ ಸುಳ್ಯ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ತಂಡದ 120 ಸ್ವಯಂಸೇವಕರು ನ.29 ರಂದು ಉಜಿರೆ ಲಕ್ಷ್ಮಿಜನಾರ್ಧನ ದೇವಸ್ಥಾನದಿಂದ ಧರ್ಮಸ್ಥಳದ ತನಕ ಪಾದಯಾತ್ರೆಯಲ್ಲಿ ಪಾಲ್ಗೊಂಡರು.ಈ ವರ್ಷದ ಪಾದಯಾತ್ರೆಯಲ್ಲಿ ರಾಜ್ಯದ ಇತರ ತಾಲೂಕುಗಳಿಂದ ಸುಮಾರು 1,200 ವಿಪತ್ತು ನಿರ್ವಹಣಾ ಸ್ವಯಂಸೇವಕರು ಸಮವಸ್ತ್ರದೊಂದಿಗೆ ಪಾದಯಾತ್ರೆ ಕೈಗೊಂಡರು. ವರದಿ :- ಉಲ್ಲಾಸ್...

ಮಡಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಮಡಪ್ಪಾಡಿ ಅಂಗನವಾಡಿ ಮತ್ತು ಬಲ್ಕಜೆ ಅಂಗನವಾಡಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಡಪ್ಪಾಡಿ ಮತ್ತು ಬಲ್ಕಜೆ ಅಂಗನವಾಡಿ ಬಾಲವಿಕಾಸ ಅಧ್ಯಕ್ಷರಾದ ಶ್ರೀಮತಿ ಅನುಪಮ ಹಾಗೂ ಭವಾನಿ.ಕೆ, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಗೊಂಚಲು ಅಧ್ಯಕ್ಷರಾದ ಶ್ರೀಮತಿ...

ಕಲ್ಮಕಾರು :- ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ನೂತನ ಸೇವಾ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಮಕಾರಿನ ಸೇವಾ ಕೇಂದ್ರವು ಸುಬ್ರಹ್ಮಣ್ಯ ಕೊಪ್ಪಡ್ಕ ಅವರ ಮಾಲಕತ್ವದ ಕಟ್ಟಡದಲ್ಲಿ ನ.30 ರಂದು ಉದ್ಘಾಟನೆಗೊಂಡಿತು. ಕಲ್ಮಕಾರು ಒಕ್ಕೂಟದ ಉಪಾಧ್ಯಕ್ಷರಾದ ರಾಮಣ್ಣ ಗೌಡ ಅಂಜನಕಜೆ ದೀಪ ಬೆಳಗಿಸುವ ಮೂಲಕ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾದ ಪುಷ್ಪರಾಜ್ ಪಡ್ಪು, ನಿಕಟಪೂರ್ವ ಅದ್ಯಕ್ಷರಾದ ಆನಂದ ಮೆಂಟೆಕಜೆ, ಸ್ಥಾಪಕಾಧ್ಯಕ್ಷರಾದ ರಾಧಾಕೃಷ್ಣ, ಶ್ರೀ...
Loading posts...

All posts loaded

No more posts

error: Content is protected !!