Ad Widget

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಬದ್ದ ಪದ್ಮಾಸನದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಪ್ರಗತಿ ವಿದ್ಯಾ ಸಂಸ್ಥೆ (ರಿ.) ಕಾಣಿಯೂರಿನಲ್ಲಿ6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಂಟೆಪ್ಪಾಡಿ ಶ್ರೀ ವಿಶ್ವನಾಥ ಗೌಡ...

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ: ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಪ್ರದೀಪ್ ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನಿ

ಪ್ರದೀಪ್ ಟಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ. ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬಾಳಿಲ ತೋಟ ಮನೆ...
Ad Widget

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸಾತ್ವಿಕ್.ಹೆಚ್.ಎಸ್ ಗೆ ಗಣಿತ ಸಂಶೋಧಕನಾಗುವ ಆಸೆ

ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆಯ ವಿದ್ಯಾರ್ಥಿಯಾದ ಸಾತ್ವಿಕ್.ಹೆಚ್.ಎಸ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ. ಅಮರಸುದ್ದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಾತ್ವಿಕ್.ಹೆಚ್.ಎಸ್ ಭವಿಷ್ಯದಲ್ಲಿ ಗಣಿತ ಸಂಶೋಧಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳಂಜ ಗ್ರಾಮದ ಕಜೆಮೂಲೆ ಡಾ.ಶಶಿಧರ್.ಹೆಚ್.ಎಸ್ ಹಾಗೂ ಡಾ.ಅನುಪಮಾ ಶಶಿಧರ್ ದಂಪತಿಗಳ ಸುಪುತ್ರರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಶೇಣಿ, ಚೊಕ್ಕಾಡಿ ಭಗವಾನ್...

ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಹೆಚ್.ಎಸ್. ರಾಜ್ಯಕ್ಕೆ ಪ್ರಥಮ- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಸಾತ್ವಿಕ್ ಹೆಚ್.ಎಸ್. ಈ ಬಾರಿಯ ಎಸ್ .ಎಸ್.ಎಲ್.ಸಿ. ಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಸುಳ್ಯದ 8 ಮಂದಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಡಿ.11 ಮತ್ತು 12ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ರಿ.) ಇದರ ವತಿಯಿಂದ 40ನೇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು 8 ಜನ ಕ್ರೀಡಾಪಟುಗಳು ಪ್ರತಿನಿಧಿಸಿದ್ದು ಎಲ್ಲಾ 8 ಮಂದಿ ಕ್ರೀಡಾಪಟುಗಳು ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತುಕಾರಾಮ ಏನೆಕಲ್ಲು 100ಮೀ. ಮತ್ತು 200ಮೀ. ಓಟದಲ್ಲಿ...

ದ.ಕ.ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದು ಇಂದು ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಬಿಜೆಪಿ ಜಿಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಡುಪಿ‌ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಪರವಾಗಿ ಅಭಿನಂದನೆ

ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಶ್ರೀಯುತ ಹರೇಕಳ ಹಾಜಬ್ಬ ಅವರನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ಡಾ.ಎಂ ಎಸ್ ಶಶಿಕುಮಾರ್, ಶಾಲೆಯ ಪ್ರಾಂಶುಪಾಲರು ಹಾಗೂ ಸದಸ್ಯರು ಮತ್ತು ಪೋಷಕರು ಸೇರಿ ವಿಮಾನ...

ನಿಂತಿಕಲ್ಲು : ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

ಇಂದು ಸುಳ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಅವರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಹೋಗಿ ನಂತರ ನಿಂತಿಕಲ್ಲಿನ ಎಂ.ಮಾಧವ ಗೌಡ ಕಾಮಧೇನು ಅವರ ಧರ್ಮಶ್ರೀ ಆರ್ಕೇಡ್ ನಲ್ಲಿರುವ ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದರು. ಉದ್ಯಮಿ ಹಾಗೂ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ , ಮಯೂರ ಗೋಲ್ಡ್ ಮಾಲಕ ದೀಕ್ಷಿತ್...

ಸಚಿವ ಅಂಗಾರರಿಗೆ ದ.ಕ.ಜಿಲ್ಲಾ ಉಸ್ತುವಾರಿ – ಕೊಡಗಿಗೆ ಕೋಟ, ಉಡುಪಿಗೆ ಸುನಿಲ್

ರಾಜ್ಯದ ನೂತನ ಸಚಿವರಾಗಿ ಎರಡನೇ ಬಾರಿ ಇಂದು ಪ್ರಮಾಣವಚನ ಸ್ವೀಕರಿಸಿದ ಸುಳ್ಯ ಶಾಸಕರಾದ ಎಸ್.ಅಂಗಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತಕ್ಷಣದಿಂದ ಜಾರಿ ಬರುವಂತೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೋಟಿ ಶ್ರೀನಿವಾಸ ಪೂಜಾರಿ ಅವರಿಗೆ ಕೊಡಗು ಹಾಗೂ ಸುನಿಲ್ ಕುಮಾರ್ ಅವರನ್ನು ಉಡುಪಿ...

ಕುತೂಹಲಕ್ಕೆ ಬಿತ್ತು ತೆರೆ : ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ತೀರ್ಮಾನ

ಕೆಲವು ತಿಂಗಳುಗಳಿಂದ ನಡೆದ ನಡೆದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಬಿ.ಎಸ್. ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿ ಬಿಜೆಪಿಯಲ್ಲಿ ಹೊಸ ಶಕೆಗೆ ನಾಂದಿ ಹಾಡಿದ್ದಾರೆ. ಕಣ್ಣೀರಿಡುತ್ತಲೇ ರಾಜೀನಾಮೆ ಸಲ್ಲಿಸುವ ಇರಾದೆ ವ್ಯಕ್ತಪಡಿಸಿದರು. ಇದುವರೆಗೂ ಅವಕಾಶ ಮಾಡಿ ಹೈಕಮಾಂಡ್...
Loading posts...

All posts loaded

No more posts

error: Content is protected !!