Ad Widget

ಪಳ್ಳಿಮಜಲು-ಪಾಟಾಜೆ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಕಾರ್ಯ

ಕಳೆದ 12 ವರುಷಗಳಿಂದಲೂ ಮರು ಡಾಮರೀಕರಣಗೊಳ್ಳದೆ ಸಂಚಾರಕ್ಕೆ ದುಸ್ತರವಾಗಿದ್ದ ಬೆಳ್ಳಾರೆ ಗ್ರಾಮದ  ಪಳ್ಳಿಮಜಲು ಪಾಟಾಜೆ ರಸ್ತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ತಾತ್ಕಾಲಿಕವಾಗಿ ಮಣ್ಣು ಹಾಕಿ ಸರಿಪಡಿಸುವ ಕಾರ್ಯ ನಡೆದಿದೆ. ಹಲವಾರು ಮನೆಗಳು ಈ ರಸ್ತೆಯ ಮೂಲಕ ಸಿಗುತ್ತಿದ್ದು, ಮಸೀದಿ, ದೈವಸ್ಥಾನ, ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ,vಪಾಟಾಜೆ ಶಾಲೆಗೆ ಈ ರಸ್ತೆಯ ಮೂಲಕವೇ ಹೋಗಬೇಕಾಗಿರುವುದು. ತಾತ್ಕಾಲಿಕ...

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 10 ದಿನದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ 10 ದಿನದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭವು ಡಿ.19 ರಂದು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ದೇವನಹಳ್ಳಿ ಚಾಣಕ್ಯ ಮಹಾವಿದ್ಯಾಲಯದ language centre project assistant ಆದ ಡಾ.ಶಶಾಂಕ ಹತ್ವಾರ್ ರವರು ಭಾಗವಹಿಸಿ ವಿಧ್ಯಾರ್ಥಿಗಳಿಗೆ ಸಂಸ್ಕೃತದ ಮಹತ್ವ ಹಾಗೂ...
Ad Widget

ಚಿರಶ್ರೀ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಪ್ರತಿಭಾ ಕಾರಂಜಿಯ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಡಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಚಿರಶ್ರೀ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಚಿರಶ್ರೀ ತಮ್ಮ ಸ್ಪಷ್ಟವಾದ ಉಚ್ಚಾರಣೆ, ವಿಷಯಪೂರ್ಣ ಭಾಷಣ ಹಾಗೂ ಆತ್ಮವಿಶ್ವಾಸದಿಂದ ತೀರ್ಪುಗಾರರ ಮೆಚ್ಚುಗೆ ಪಡೆದರು. ಇವರು ಭಾಸ್ಕರ ಮಣಿಮಜಲು ಮತ್ತು ಎಡಮಂಗಲ...

ಡಿ.27 ರಂದು ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಡಿಸೆಂಬರ್ 27  ಶನಿವಾರದಂದು ಬೆಳಿಗ್ಗೆ 10:00...

ಬೆಳ್ಳಾರೆಯಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯ ದಲ್ಲಿ “75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025” ಇದರ ಅಂಗವಾಗಿ  “ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಸ್ವಚ್ಛತೆಯೆಡೆಗೆ ನಮ್ಮ ನಡಿಗೆ” ಯೋಜನೆಯಂತೆ, “ಶಾಲೆಯತ್ತ ನಮ್ಮ ಚಿತ್ತ” ಬೆಳ್ಳಾರೆ  ಶಾಲಾ ವಿದ್ಯಾರ್ಥಿಗಳಿಗೆ  “ನಮ್ಮ ಶಾಲೆ ಸ್ವಚ್ಛ ಶಾಲೆ” ಎಂಬ ವಿಷಯದ ...

ಮಡಪ್ಪಾಡಿ : ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗದ ವತಿಯಿಂದ ಸ್ವಚ್ಚತಾ ಕಾರ್ಯ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ “ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025 (75 ದಿನಗಳ ಸ್ವಚ್ಛತಾ ಅಭಿಯಾನ)” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ.23 ಮಂಗಳವಾರ ಬೆಳಿಗ್ಗೆ ಮಡಪ್ಪಾಡಿಯ ಕಜೆ ಅಂಗಡಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ಹಾಗೂ ಸ್ಫಚ್ಛತೆಯ ಬಗ್ಗೆ ಪತ್ರಗಳನ್ನು ಅಂಟಿಸಲಾಯಿತು. ಹಾಗೂ ಕಸದ ಬುಟ್ಟಿಯನ್ನು ಕೊಡಲಾಯಿತು.            ಈ...

ಗುತ್ತಿಗಾರು : ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ತಾಲೂಕು ಇದರ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ನಡೆದ “ಪಂಚಸಪ್ತತಿ - 2025 ; 75 ದಿನಗಳ ಸ್ವಚ್ಚತಾ ಅಭಿಯಾನ”ದ ಅಂಗವಾಗಿ ಗುತ್ತಿಗಾರಿನ ಪ್ರತಿಷ್ಠಿತ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ವತಿಯಿಂದ ನಿರಂತರವಾಗಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ 75ನೇ ದಿನ‌ ಗುತ್ತಿಗಾರಿನ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಜಾಗೃತಿ ಘೋಷವಾಕ್ಯ ಗಳ...

ಮಡಪ್ಪಾಡಿಯ ಚೈತನ್ಯ ಗೆಳೆಯರ ಬಳಗದ ವತಿಯಿಂದ ಕಜೆ ಅಂಗಡಿಯ ಸುತ್ತ ಸ್ವಚ್ಚತೆ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ “ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ.23 ಮಂಗಳವಾರ ಬೆಳಿಗ್ಗೆ ಗಂಟೆ 9:00 ರಿಂದ ಮಡಪ್ಪಾಡಿಯ ಕಜೆ ಅಂಗಡಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು. ಹಾಗೂ ಸ್ಫಚ್ಛತೆಯ ಬಗ್ಗೆ ಪತ್ರ (stickers) ಗಳನ್ನು...

ಕರಾಟೆಯಲ್ಲಿ ದ್ವಿಜಾಶ್ರೀಗೆ ಬಹುಮಾನ

ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ವಿಜಾಶ್ರಿ ಬಳ್ಳಡ್ಕ ಬಹುಮಾನ ಗಳಿಸಿದ್ದಾರೆ.‌ಸುಳ್ಯ ಕೊಡಿಯಾಲಬೈಲ್ ಮಹಾತ್ಮಾಗಾಂಧಿ ಮಲ್ನಾಡ್ ಪ್ರೌಢಶಾಲೆಯ 3ನೇ ತರಗತಿ ವಿಧ್ಯಾರ್ಥಿಯಾಗಿರುವ ದ್ವಿಜಾಶ್ರೀ, ಉಬರಡ್ಕ ಗ್ರಾಮದ ಬಳ್ಳಡ್ಕ ಅನಿಲ್ ಹಾಗೂ ಕಾವ್ಯ ದಂಪತಿಗಳ ಪುತ್ರಿ. ಇವರಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ತರಬೇತಿ...

ಡಿ.28ರಂದು ಕಳಂಜದಲ್ಲಿ ಛಾಯಾನಂದನ ಯಕ್ಷಗಾನ ಬಯಲಾಟ

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಕಳಂಜ ಗ್ರಾಮ ಬೆಳ್ಳಾರೆ, ಯುವಕ ಮಂಡಲ(ರಿ.) ಕಳಂಜ ಇದರ ಸಹಕಾರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಕದ್ರಿ ನವನೀತ ಶೆಟ್ಟಿ ವಿರಚಿತ 'ಛಾಯಾನಂದನ'ಯಕ್ಷಗಾನ ಬಯಲಾಟವು ನಿನಾದ ತಂಟೆಪ್ಪಾಡಿ ಕಳಂಜದಲ್ಲಿ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗಮಂಟಪದಲ್ಲಿ...
Loading posts...

All posts loaded

No more posts

error: Content is protected !!