- Wednesday
- March 11th, 2026
ಮಂಗಳೂರು : “ಅತ್ಯಂತ ಕಠಿಣ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ...
ಅಜ್ಜಾವರ : ಸುಳ್ಯ ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕೇಂದ್ರ ಮೇದಿನಡ್ಕ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಸಹಯೋಗದೊಂದಿಗೆ ಮೇದಿನಡ್ಕ ಅಂಗನವಾಡಿ ಕೇಂದ್ರದಲ್ಲಿ ಡಿ.30 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕರಾದ ಬಾಲಕೃಷ್ಣ, ಜಯಶೀಲ.ಎಸ್ ಆರೋಗ್ಯಾಧಿಕಾರಿ ಆಯುಷ್ಮಾನ್ ಆರೋಗ್ಯ ಕೇಂದ್ರ ಅಜ್ಜಾವರ, ನೂರುನ್ನೀಸಾ ಕೆ.ಎಸ್ ಲ್ಯಾಬ್...
ಸುಬ್ರಹ್ಮಣ್ಯ ಡಿಸೆಂಬರ್ 30 : “ಸಮಾಜದಲ್ಲಿರುವ ಅಶಕ್ತರಿಗೆ, ಬಡಬಗ್ಗರಿಗೆ, ಸೂರಿಲ್ಲದವರಿಗೆ ಸೂರು, ಒಂದು ಹೊತ್ತಿನ ಊಟ ಇಲ್ಲದವರಿಗೆ ಅನ್ನ ನೀಡುವುದು, ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ಹಾಗೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುವಂತಹ ಬಸ್ಸು ತಂಗುದಾಣ, ರಿಕ್ಷಾ ತಂಗುದಾಣ, ಶೌಚಾಲಯ ಅಥವಾ ಯಾವುದೇ ಜನೋಪಯೋಗಿ ಕೆಲಸಗಳು ಅದು ನಿಜವಾದ ಸಮಾಜ ಸೇವೆ ಹಾಗೂ ದೇವರ ಸೇವೆಯಾಗಿರುತ್ತದೆ” ಎಂದು...
ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ದೇವ ಪಡ್ಪು ಶ್ರೀ ವಿಷ್ಣು ಜನರಲ್ ಸ್ಟೋರ್ ಗೆ ಸ್ವಚ್ಛತಾ ಪಲಕ ಅಳವಡಿಕೆ ಮಾಡಲಾಯಿತು . ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ,ಗೌರವಾ ಧ್ಯಕ್ಷ ಯೋಗೀಶ್ ದೇವ, ಸದಸ್ಯರುಗಳಾದ ಕಾರ್ತಿಕ್ ದೇವ, ಧನುಷ್ ಕನ್ನಡಕಜೆ,...
ಪುತ್ತೂರು ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದ ಪೆರಾಜೆ ಇಂದಿರಾ ಆವಾಜ್ ಕಾಲೋನಿ ನಿವಾಸಿ ಲಲಿತಾ(39) ಡಿ.29 ರಂದು ರಾತ್ರಿ ಅನಾರೋಗ್ಯಕ್ಕೆ ಒಳಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆ ತರುವ ವೇಳೆಗೆ ಮೃತಪಟ್ಡ ಘಟನೆ ವರದಿಯಾಗಿದೆ. ಮೃತ ಮಹಿಳೆ ಕೆಲ ವರ್ಷಗಳಿಂದ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಅಟೋ ಚಾಲಕ ಸತೀಶ್, ಒಂದುವರೆ ವರ್ಷದ ಪುತ್ರಿ...
ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಲು ವಾಡ್ಯಪ್ಪ ಗೌಡ ಎಂಬವರು ಡಿ.29 ರಂದು ಮಧ್ಯಾಹ್ನ ಬಳ್ಪದಲ್ಲಿರುವ ತನ್ನ ಮಗಳ ಮನೆಗೆ ಹೊರಟು,ಅಲ್ಲಿಗೂ ತಲುಪದೇ ಮನೆಯವರ ಆತಂತಕ್ಕೆ ಕಾರಣವಾಗಿ ಅವರ ಪತ್ತೆಗಾಗಿ ಜಾಲತಾಣದಲ್ಲಿ ಮನವಿ ಮಾಡಿದ್ದರು. ತಡರಾತ್ರಿ ಅವರು ಪತ್ತೆಯಾಗಿದ್ದಾರೆ ಎಂದು ಮನೆಯವರು ಅಮರ ಸುದ್ದಿಗೆ ತಿಳಿಸಿದ್ದಾರೆ.
ಸುಬ್ರಹ್ಮಣ್ಯ : ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಭಜನೆ, ಧಾರ್ಮಿಕ ಸಭೆ ಹಾಗೂ ಭಜನೋತ್ಸವವು ಬಿಳಿನೆಲೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮ ಮತ್ತು ಕುಣಿತ ಭಜನೆಯನ್ನು ಖ್ಯಾತ...
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶವಾಗಿದ್ದು, ಕ್ರೀಡಾಕೂಟಗಳು ಆಗಾಗ ನಡೆಯುತ್ತಿರುತ್ತದೆ. ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ತಾಲೂಕಿಗೆ ಹೈ-ಜಂಪ್ ಬೆಡ್ ಇಲ್ಲದೆ ಲಭ್ಯತೆಗೆ ಅನುಗುಣವಾಗಿ ಪುತ್ತೂರು ಅಥವಾ ಮಂಗಳೂರಿನಿಂದ ತರಬೇಕಾಗಿದೆ....
ಬೆಳ್ಳಾರೆ ನಗರದ ಕೊಳಂಬಳ ದೇವಿನಗರದ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳಾದ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ದೇರೇಬೈಲು ತಂತ್ರಿ ಶ್ರೀ ಪತಂಜಲಿ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ಜ.6 ಮತ್ತು 7 ರಂದು ರಾತ್ರಿ 8:00 ರಿಂದ ನಡೆಯಲಿದೆ.ಜ.6ರಂದು ಪ್ರಾತ:ಕಾಲ ಗಂಟೆ 8:00ಕ್ಕೆ ಸ್ವಸ್ತಿ ಪುಣ್ಯಾಹ,...
110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ಡಿ.30 ರಂದು ಬೆಳಿಗ್ಗೆ 10:00 ರಿಂದ ಸಂಜೆ ಗಂಟೆ 4:00 ರ ತನಕ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮಾಡಾವು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ 33/11ಕೆವಿ ಸವಣೂರು, ಬೆಳ್ಳಾರೆ, ಗುತ್ತಿಗಾರು, ಕಾವು ಮತ್ತು ಸುಳ್ಯ ವಿದ್ಯುತ್ ಉಪಕೇಂದ್ರಕ್ಕೆ ಸರಬರಾಜು ಕಡಿತವಾಗಲಿದ್ದು, ಇಲ್ಲಿಂದ ಹೊರಡುವ ಎಲ್ಲಾ 11 ಕೆವಿ...
Loading posts...
All posts loaded
No more posts
