- Wednesday
- March 11th, 2026
ಅಜ್ಜಾವರ ಗ್ರಾಮದ ಪಡ್ಡಂಬೈಲ್ ಕುಟುಂಬಸ್ಥರ ನೇತೃತ್ವದಲ್ಲಿ ಫೆಬ್ರವರಿ 15 ಮತ್ತು 22 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ಸುಳ್ಯ ಇದರ ಕ್ರೀಡಾಂಗಣದಲ್ಲಿ 32 ತಂಡಗಳ ಗೌಡ ಕುಟುಂಬಗಳ ಓವರ್ ಆರ್ಮ್ ಕ್ರಿಕೆಟನ್ನು ನಡೆಯಲಿದೆ. ಪ್ರಥಮ ಬಹುಮಾನವಾಗಿ ರೂ. 30,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 20,000 ನಗದು ಮತ್ತು ಆಕರ್ಷಕ...
ಪೆರಾಜೆಯ ಒಂದು ಗ್ರಾಮಕ್ಕೆ ೧೯ಕೋಟಿಕ್ಕೂ ಅಧಿಕ ಅನುದಾನ ಬಿಡುಗಡೆಗೊಂಡಿದೆ: ಶಾಸಕ ಎ.ಎಸ್.ಪೊನ್ನಣ್ಣ ಶಾಸಕರಾದ ಬಳಿಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕನಾಗಿ ಸಾಕಷ್ಟು ಅಭಿವೃದ್ಧಿಕೆಲಸಗಳನ್ನು ಮಾಡಲು ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಿಸಿಕೊಂಡು ಪೆರಾಜೆ ಗ್ರಾಮಕ್ಕೆ 33 ಕೆವಿ ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ ೧೯ ಕೋಟಿಗೂ ಅಧಿಕ ಅನುದಾನಗಳನ್ನು ಬಿಡುಗಡೆಮಾಡಿ, ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. ನಾನಾ...
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ಸಾಂಸ್ಕೃತಿಕ ಉಪ ಸಮಿತಿ ಇದರ ವತಿಯಿಂದ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ 22 ರಿಂದ ಜನವರಿ 26(ಗಣ ರಾಜ್ಯೋತ್ಸವ ದಿನಾಚರಣೆ) ವರೆಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡ ಭಾರತೀಯ ಸಂವಿಧಾನ ಪೀಠಿಕೆ ಗಾಯನ ಅಭಿಯಾನದ ಪರ್ಯಟನೆ ಮಾಲಿಕೆಯನ್ನು ಸುಳ್ಯ ಗ್ರೀನ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಯಿತು.ನ್ಯಾಯಾಂಗ...
ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ಹಿಂದೂ ರುದ್ರಭೂಮಿ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಜ.5 ರಂದು ಬೆಳಿಗ್ಗೆ 9:30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಪಂಚಾಯತ್ ಪ್ರಕಟನೆಯಲ್ಲಿ ತಿಳಿಸಿದೆ.ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಇವರಿಂದ ಶಿವಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನದ ಮೂಲಕ ರುದ್ರಭೂಮಿ ಲೋಕಾರ್ಪಣೆಗೊಳ್ಳಲಿದ್ದು, ಈ ಪುಣ್ಯ ಕಾರ್ಯದಲ್ಲಿ ಊರಿನವರು, ಸಂಘ-ಸಂಸ್ಥೆಯವರು,...
ಜಾಲ್ಸೂರು ಗ್ರಾಮದ ಹುಲಿಮನೆಯವರಾದ ವೆಂಕಟ್ರಮಣ ಗೌಡರು ಬೇಂಗಮಲೆಯಲ್ಲಿ ನೆಲೆಸಿದ್ದರು. ಅಲ್ಪಕಾಲದ ಅಸೌಖ್ಯದಿಂದ ಜ.1 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 89 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ , ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಗುತ್ತಿಗಾರು ಗ್ರಾಮದ ಬಲ್ಬೇರಿ(ಪಾಲ್ತಾಡಿ) ವಾಚಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಮೋಹಿನಿ ಇವರು ಹೃದಯಾಘಾತದಿಂದ ಜ.1 ರಂದು ನಿಧನರಾದರು.ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯರಾದ ಶ್ರೀಮತಿ ಭವ್ಯ ಗಣೇಶ ನಾವೂರು, ಶ್ರೀಮತಿ ಉಮಾ ಚೇತನ್ ಇಟ್ಟಿಗುಂಡಿ, ಶ್ರೀಮತಿ ಉಷಾ ದಯಾನಂದ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಉಡುಪಿ ಸಮೀಪದ ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜ.02 ರಂದು ರಾತ್ರಿ ನಡೆದಿದೆ.ಮೃತರನ್ನು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬೀಡಿನಗದ್ದೆ ನಿವಾಸಿ ಯುವರಾಜ್(27) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದಿದೆ...
ನಾಲ್ಕೂರು ಗ್ರಾಮದ ನಡುಗಲ್ಲು ಮರಕತ ಶ್ರೀ ದುರ್ಗಾ ಭಜನಾ ಮಂಡಳಿಯ “25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ” ಹಾಗೂ 19ನೇ ವರ್ಷದ ಸಾಮೂಹಿಕ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸನ್ಮಾನ ಸಮಾರಂಭವು ಜ.11ರಂದು ನಡುಗಲ್ಲು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ...
ಬಾಳಿಲ ಗ್ರಾಮದ ಅತ್ತಿಕರಮಜಲು ಪಾಜಪಳ್ಳ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಹಝ್ರತ್ ವಲಿಯುಲ್ಲಾಹಿ ಸಯ್ಯದ್ ಹುಸೈನ್ ಆಟಕ್ಕೋಯ ತಂಙಲ್ ಅಲ್ ಮುಶೈಖಿ(ರ.ಅ)ರವರ ಹೆಸರಿನಲ್ಲಿ ಎರಡು ವರುಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜ 2026 ನೇ 1,2,3 ರಂದು ಬಾಳಿಲ ಅತ್ತಿಕರಮಜಲಿನ ಮುಹಿಯುದ್ದೀನ್ ಜುಮುಅ: ಮಸೀದಿಯ ವಠಾರದಲ್ಲಿ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದ್ದು, ಪ್ರಮುಖ ವಿದ್ವಾಂಸರು...
ಸುಬ್ರಹ್ಮಣ್ಯ ಜನವರಿ 1 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗದ ಬದಿಯಲ್ಲಿರುವ ಖಾಸಗಿ ಒಡೆತನದ ಸುಮಾರು ಮೂವತ್ತಕ್ಕೂ ಅಧಿಕ ಅಂಗಡಿ ಕಟ್ಟಡಗಳ ವಿವಾದ ನಡೆಯುತ್ತಿದ್ದು, ಸುಬ್ರಹ್ಮಣ್ಯದ ನೂಚಿಲ ನಿವಾಸಿ ಸಂತೋಷ್ ಕುಮಾರ್ ಎಂಬುವರು ನೀಡಿದ ದೂರಿನ ಅನ್ವಯ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಹಾಗೂ ಕಾರ್ಯದರ್ಶಿ ಮೋನಪ್ಪ.ಡಿ...
Loading posts...
All posts loaded
No more posts
