Ad Widget

ನಿಧನ : ಮೀನಾಕ್ಷಿ ಗೌಡ ಕನ್ನಡ್ಕ

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಡ್ತಲ್‌ಕಜೆ ಸಮೀಪದ ಕನ್ನಡ್ಕ ದಿ| ವೆಂಕಟ್ರಮಣ ಗೌಡರ ಪತ್ನಿ ಮೀನಾಕ್ಷಿ ಗೌಡ ರವರು ಜ.21 ಬುಧವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು.ಮೃತರು ಪುತ್ರರಾದ ಪತ್ರಕರ್ತ ಭರತ್ ಕನ್ನಡ್ಕ, ಸೊಸೆ ಶ್ರೀಮತಿ ಧನ್ಯಾ, ಮೊಮ್ಮಗಳು ಕಿರಣ್ಮಯಿ ಕನ್ನಡ್ಕ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೆಳ್ಳಾರೆಯ ಆಳ್ವಾ ಕ್ಲೋತ್ ಸ್ಟೋರ್ ಮ್ಹಾಲಕ ಸುಂದರ ಆಳ್ವಾ ಬಜನಿಗುತ್ತು ನಿಧನ

ಬೆಳ್ಳಾರೆ ಕೆಳಗಿನ ಪೇಟೆಯ ಆಳ್ವಾ ಕ್ಲೋತ್ ಸ್ಟೋರ್ ಮ್ಹಾಲಕ ಸುಂದರ ಆಳ್ವಾ ಬಜನಿಗುತ್ತು ರವರು ಜ.14 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಶಾಲಿನಿ ಆಳ್ವಾ, ಪುತ್ರಿ ಸುಶ್ಮಿತಾ ಆಳ್ವಾ, ಪುತ್ರ ಸುಜಿತ್ ಆಳ್ವಾ, ಸೊಸೆ, ಅಳಿಯ, ಸಹೋದರ, ಸಹೋದರಿಯರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧಕ-ಮಿತ್ರರನ್ನು ಅಗಲಿದ್ದಾರೆ.ಇವರು...
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ : ಎರಡು ತಿಂಗಳಲ್ಲಿ 14 ಕೋಟಿಗೂ ಮಿಕ್ಕಿ ಆದಾಯ

ಸುಬ್ರಹ್ಮಣ್ಯ ಜನವರಿ 21 : ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025 ನವೆಂಬರ್ ಹಾಗೂ ಡಿಸೆಂಬರ್ ಎರಡು ತಿಂಗಳಲ್ಲಿ ಒಟ್ಟು 14 ಕೋಟಿ 77 ಲಕ್ಷದ 80,000 ರೂ. ಆದಾಯ ಬಂದಿರುತ್ತದೆ. ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4,56,21,739 ರೂಪಾಯಿ, ಹುಂಡಿಯಿಂದ 1,09,76,957 ರೂಪಾಯಿ ಹಾಗೂ ಅನ್ನದಾನ...

ಹರಿಹರ ಪಳ್ಳತ್ತಡ್ಕ : ಜ.31ರಂದು ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31ನೇ ಶನಿವಾರದಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ ಹಾಗೂ...

ಕಳೆದು ಹೋದ ಚಿನ್ನದ ಸರ ಪತ್ತೆ – ಕಾರ್ಣಿಕ ಮೆರೆದ ಉಜಿರಡ್ಕದ ಕೊರಗಜ್ಜ

ನಾಲ್ಕೂರು ಗ್ರಾಮದ ಪಂಜಿಪಳ್ಳ ನಿವಾಸಿ ದಿವ್ಯ ಚಿದ್ಗಲ್ಲು ಎಂಬುವವರ ಚಿನ್ನದ ಸರ ಜ.20ರಂದು ಕಳೆದು ಹೋಗಿತ್ತು. ಕಳೆದು ಸರ ಪತ್ತೆ ಮಾಡಿಕೊಡುವಂತೆ ಉಜಿರಡ್ಕ ಕೊರಗಜ್ಜ ದೈವದಲ್ಲಿ ಪ್ರಾರ್ಥಿಸಿದ ಕೂಡಲೇ ಕಳೆದು ಹೋದ ಚಿನ್ನದ ಸರ ಪತ್ತೆಯಾಗಿದ್ದು, ನಂಬಿದವರಿಗೆ ಕೊರಗಜ್ಜ ದೈವ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ.

ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನಾ ರವರಿಗೆ ಸುಳ್ಯದಲ್ಲಿ ಸ್ವಾಗತ

ಸುಳ್ಯದ ಸೈಂಟ್ ಬ್ರಿಜಿಡ್ಸ್  ಶಾಲೆಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನಾ ರವರು ಸುಳ್ಯಕ್ಕೆ  ಆಗಮಿಸಿದ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷರಾದ ಕೆ.ಎಂ. ಮುಸ್ತಫ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ ರವರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಸಂಜೀವ ಶೆಟ್ಟಿ ಪಾಂಡೇಲುಗುತ್ತು ನಿಧನ

ಬೆಳ್ಳಾರೆ ಗ್ರಾಮದ ದರ್ಖಾಸ್ತು ನಿವಾಸಿ ಪಾಂಡೇಲು ಗುತ್ತು ಸಂಜೀವ ಶೆಟ್ಟಿಯವರುಜ 20ರಂದು ನಿಧನರಾದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ದಿನೇಶ್ ದರ್ಖಾಸ್ತು, ಪುತ್ರಿಯರಾದ ಶ್ರೀಮತಿ ದೀಪ, ದಿವ್ಯ ಚಂದ್ರಶೇಖರ ನಂಜೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಲೀಲಾವತಿ ರೈ ಬೆಳ್ಳಿಪ್ಪಾಡಿ ನಿಧನ

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಗುತ್ತು ಮನೆಯ ಹಿರಿಯರಾದ ಲೀಲಾವತಿ ರೈ ಬೆಳ್ಳಿಪ್ಪಾಡಿ ಅವರು ಜ.20ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಹಾಸ ರೈ, ಸದಾನಂದ ರೈ, ಜಗದೀಶ ರೈ, ರಾಮಕೃಷ್ಣ ರೈ ಹಾಗೂ ಪುತ್ರಿಯರಾದ ನಳಿನಿ ರೈ, ಜಯಂತಿ ರೈ, ಪವಿತ್ರ ರೈ ಹಾಗೂ ಸೊಸೆಯಂದಿರು, ಬಂಧುಮಿತ್ರರು...

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಬಾಳುಗೋಡು ಬಸ್ ಸಂಚಾರ ಆರಂಭ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ ಪದಾಧಿಕಾರಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರಿಗೆ ಗ್ರಾಮೀಣ ಭಾಗದ ಬಸ್ ಸಮಸ್ಯೆ ಬಗ್ಗೆ ಸಲ್ಲಿಸಿದ ಮನವಿಗೆ ಯಶಸ್ಸು ದೊರಕಿದ್ದು, ಸುಳ್ಯ - ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಪರ್ಕ ಆರಂಭಗೊಂಡಿದೆ. ಬೆಳಿಗ್ಗೆ 7.05ಕ್ಕೆ ಬಾಳುಗೋಡು - ಸುಳ್ಯ, ಸಂಜೆ 5.20ಕ್ಕೆ...

ದೇರಣ್ಣ ಗೌಡ ಕನ್ನಡ್ಕ ನಿಧನ

ಗುತ್ತಿಗಾರು ಗ್ರಾಮದ ಪೈಕ ದೇರಣ್ಣ ಗೌಡ ಕನ್ನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಾಲಕಿ, ಪುತ್ರರಾದ ಚಿದಾನಂದ ಕನ್ನಡ್ಕ, ದಯಾನಂದ ಕನ್ನಡ್ಕ, ಪುತ್ರಿ ಶ್ರೀಮತಿ ನೇತ್ರಾವತಿ ಪುರುಷೋತ್ತಮ ಸೋಣಂಗೇರಿ ಕಲ್ಲಾಜೆ, ಸೊಸೆಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!