Ad Widget

ಗ್ರಾ.ಪಂ.ಮಾಜಿ ಸದಸ್ಯ ಸನತ್ ಅಡ್ಕಾರು ನಿಧನ

ಜಾಲ್ಸೂರು ಗ್ರಾಮದ ಅಡ್ಕಾರು ದಿ. ತೇಜಕುಮಾರ್ ರವರ ಪುತ್ರ ಗ್ರಾ.ಪಂ.ಮಾಜಿ ಸದಸ್ಯ ಸನತ್ ಅಡ್ಕಾರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ರು. ಮೃತರು ತಾಯಿ, ಪತ್ನಿ, ಪುತ್ರ, ಸಹೋದರ ಶರತ್ ಅಡ್ಕಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು : ಮಕ್ಕಳ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ ಸಮಾರೋಪ – ಸನ್ಮಾನ

ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕೊಲ್ಲಮೊಗ್ರು ಇದರ ನೇತೃತ್ವದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಹಾಗೂ ಊರಿನವರ ಸಹಕಾರದೊಂದಿಗೆ ಏಳು ದಿನಗಳ ಕಾಲ ಕೊಲ್ಲಮೊಗ್ರು ಮಯೂರ ಕಲಾಮಂದಿರದಲ್ಲಿ ನಡೆದ “ಮಕ್ಕಳ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ” ದ ಸಮಾರೋಪ ಸಮಾರಂಭವು ಏ.17 ರಂದು ನಡೆಯಿತು. ತಂಬಿನಡ್ಕ ದಿಂದ ಮಕ್ಕಳ ಕುಣಿತ ಭಜನೆಯೊಂದಿಗೆ...
Ad Widget

ಈಶ್ವರ ಗೌಡ (ಬಾಬು) ಕಟ್ಟ ಗೋವಿಂದನಗರ ನಿಧನ

ಕೊಲ್ಲಮೊಗ್ರ ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಈಶ್ವರ ಗೌಡ (ಬಾಬು) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃದಲ್ಲಿ ಎ.18 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಾಯತ್ರಿ , ಪುತ್ರಿ ವನಿತಾ ತೀರ್ಥರಾಮ, ಪುತ್ರ ನವೀನ್ ಕುಮಾರ್, ಸಹೋದರರಾದ ಮಂಜಪ್ಪ ಗೌಡ , ಶೇಷಪ್ಪ ಗೌಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಳ್ಳಾರೆ ಶಾಖೆಯ ಸದಸ್ಯರಾಗಿ ಕರುಣಾಕರ ಆಳ್ವ ಕೊಡಿಯಾಲ, ಉಷಾ ಗಂಗಾಧರ ಇಂದಿರಾನಗರ ಬೆಳ್ಳಾರೆ, ನಳಿನಿ ಪುರಂದರ ಕುಲಾಲ್ ಬೆಳ್ಳಾರೆ, ಇಬ್ರಾಹಿಂ ಅಂಬಟೆಗುಡ್ಡೆ ಪೆರುವಾಜೆ, ಅಬೂಬಕ್ಕರ್ ಅರಾಫ ಬಾಳಿಲ ಇವರನ್ನು ಸರಕಾರ ನೇಮಕ ಮಾಡಿ...

ನಾಳೆ (ಎ.18) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33/11ಕೆ.ವಿ. ಮಾಡಾವು -ಸುಳ್ಯ, 33/11ಕೆ.ವಿ. ಪುತ್ತೂರು ಕ್ಯಾಂಪ್ಕೋ ಕಾವು ಮತ್ತು 33/11ಕೆ.ವಿ. ಪುತ್ತೂರು ಕುಂಬ್ರ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಎ. 18 (ಶುಕ್ರವಾರ) ಪೂರ್ವಾಹ್ನ 9.30 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸುಳ್ಯ, ಕಾವು ಮತ್ತು ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು...

ಪೈಕ : ನಾಲ್ವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕಮ

ಪೈಕ - ಹನ್ನೆರಡು ಒಕ್ಕಲಿನ ಊರುಕಟ್ಟಿಗೆ ಸಂಬಂಧಿಸಿದಂತೆ ಊರಿನ ನಾಲ್ವರು ಸಾಧಕ 4 ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಎ.16 ರಂದು ಪೈಕ ಊರು ಗೌಡರ ಮನೆಯಲ್ಲಿ ನಡೆಯಿತು2024 - 25 ನೇ ಸಾಲಿನ NMMS ಪರೀಕ್ಷೆಯಲ್ಲಿ ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾದ ಕು. ಲಾವಣ್ಯ ಡಿ ಎನ್ ಹಾಗೂ PUC ವಿಭಾಗದಲ್ಲಿ ಗುತ್ತಿಗಾರು ಕಾಲೇಜಿನ ವಾಣಿಜ್ಯ...

ಅಂತರಾಷ್ಟ್ರೀಯ ಖ್ಯಾತಿಯ ಸಂಮೋಹಿನಿಗಾರ ಕೃಷ್ಣಮೂರ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದನ ರೈ ಕಾರ್ಕಳ ನಾಳೆ ಪಂಜಕ್ಕೆ

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ಐದನೇ ದಿನದ ಸಂಪನ್ಮೂಲ ವ್ಯಕ್ತಿ ಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಹಿಪ್ನೋಟಿಸಂ ಕಲಾವಿದ ಕೃಷ್ಣಮೂರ್ತಿ ವಿಶಾಖಪಟ್ಟಣಂ...

ನವೀಕರಣಗೊಂಡ ಮಡಪ್ಪಾಡಿ ಶಾಲಾ ಕ್ರೀಡಾಂಗಣ ಲೋಕಾರ್ಪಣೆ – ಸನ್ಮಾನ

ನವೀಕರಣಗೊಂಡ ಮಡಪ್ಪಾಡಿ ಶಾಲಾ ಕ್ರೀಡಾಂಗಣನ್ನು  ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಲೋಕಾರ್ಪಣೆಗೊಳಿಸಿದರು.ಅನುದಾನವನ್ನು ಒದಗಿಸಿ ಗ್ರಾಮದ ಪ್ರಮುಖ ಕ್ರೀಡಾಂಗಣಕ್ಕೆ ಪುನಃಶ್ಚೇತನ ನೀಡಿದ ಶಾಸಕರಿಗೆ ಯುವಕ ಮಂಡಲ ಮಡಪ್ಪಾಡಿ ಮತ್ತು ಊರವರ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು,...

ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಪೈಚಾರು ಬೆಳ್ಳಾರೆ ಹಾಗೂ ನಿಂತಿಕಲ್ಲು ಬೆಳ್ಳಾರೆ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ(ಸಿಆರ್ ಐಎಫ್)ಯಡಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಎರಡು ಪ್ರಮುಖ ರಸ್ತೆಗಳ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಎ.15 ರಂದು ಗುದ್ದಲಿಪೂಜೆ ನೆರವೇರಿಸಲಾಯಿತು. ಸಿಆರ್ ಐಎಫ್ ಅನುದಾನದಡಿ ಸುಳ್ಯ ತಾಲೂಕಿನ ನಿಂತಿಕಲ್ಲು-...

ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ : ಪ್ರಥಮ ಓಂ ಫ್ರೆಂಡ್ಸ್ ದೊಡ್ಡೇರಿ, ದ್ವಿತೀಯ ಬ್ಲಾಕ್ ಟಾಪ್ ಕೂಟೇಲು

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ವೇದಿಕೆ ಇದರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಎ. 13 ಮತ್ತು 14 ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್...
Loading posts...

All posts loaded

No more posts

error: Content is protected !!