Ad Widget

ಎಸ್ಸೆಸ್ಸೆಲ್ಸಿ ಫಲಿತಾಂಶ: ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಉತ್ತಮ್.ಕೆ ರಾಜ್ಯಕ್ಕೆ 10ನೇ ರ‌್ಯಾಂಕ್

2024-25 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗಿದ್ದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಉತ್ತಮ್.ಕೆ 616 ಅಂಕ ಗಳಿಸಿ ರಾಜ್ಯಕ್ಕೆ 10ನೇ ರ‌್ಯಾಂಕ್ ಗಳಿಸಿದ್ದಾರೆ. ಒಟ್ಟು 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 14 ಡಿಸ್ಟಿಂಕ್ಷನ್, 34 ಪ್ರಥಮ ದರ್ಜೆ,13 ದ್ವಿತೀಯ ದರ್ಜೆ ಹಾಗೂ 08 ತೃತೀಯ ದರ್ಜೆಯೊಂದಿಗೆ 69 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ 95.83%...

ಎಸ್ಸೆಸ್ಸೆಲ್ಸಿ ಫಲಿತಾಂಶ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಪ್ರೌಢಶಾಲಾ ವಿಭಾಗ 78% ಫಲಿತಾಂಶ

2024-25 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು 78% ಫಲಿತಾಂಶ ದಾಖಲಾಗಿದೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದಿಂದ ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 7 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಅನ್ವಿತ್. ಎಂ.ವಿ 565, ಕೃತಿಕಾ 562,ಬೃಂದಾ ಎಂ.ವಿ...
Ad Widget

ಮಂಗಳೂರು : ಹಿಂದೂ ಕಾರ್ಯಕರ್ತನ ಕೊಲೆ – ಸಂಘಟನೆಗಳಿಂದ ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ – ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರಿನ ಬಜಪೆ ಸಮೀಪ ಮೆ.01 ರಂದು ರಾತ್ರಿ ನಡೆದ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು (ಮೇ 2 ರಂದು) ಬಂದ್ ಗೆ ಕರೆ ನೀಡಿದೆ. ಈ ಬಗ್ಗೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ...

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

ನಾಳೆ ಬೆಳಗ್ಗೆ 11:30 ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಚಿವ ಮಧು ಬಂಗಾರಪ್ಪ ಅವರು ನಾಳೆ ಬೆಳಗ್ಗೆ 11:30 ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಫಲಿತಾಂಶ ಪ್ರಕಟವಾದ ತಕ್ಷಣ, ಫಲಿತಾಂಶವನ್ನು karresults.nic.in ಈ ಲಿಂಕ್ ಮೂಲಕ ವಿಕ್ಷೀಸಬಹುದು.

ಹರಿಹರ ಪಳ್ಳತ್ತಡ್ಕ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೃಹತ್ ಪಂಜಿನ ಮೆರವಣಿಗೆ

ಪಾಕಿಸ್ತಾನ ತನ್ನ ನರಿ ಬುದ್ಧಿ ಬಿಟ್ಟು ಬದುಕಲು ಕಲಿಯದೇ ಇದ್ದರೆ ಏಟು ತಿನ್ನಲು ತಯಾರಾಗಬೇಕಾದೀತು : ಪದ್ಮಕುಮಾರ್ ಗುಂಡಡ್ಕ ಪಾಕಿಸ್ತಾನ ಮತ್ತೆ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿ ತಪ್ಪು ಮಾಡಿದೆ : ಕುಸುಮಾಧರ ಎ.ಟಿ. ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು...

ಕರಿಮಣಿ ತಾಳಿ ಬಿದ್ದು ಹೋಗಿರುತ್ತದೆ

ಸುಳ್ಯದ ಕಟ್ಟೆಕಾರ್ ಹಾಗೂ ಕೆರೆಮೂಲೆ ರಸ್ತೆಯ ಆಸುಪಾಸಿನಲ್ಲಿ ಕರಿಮಣಿ ತಾಳಿ ಸರ ಬಿದ್ದು ಹೋಗಿರುತ್ತದೆ. ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಲು ಮನವಿ ಮಾಡಿದ್ದಾರೆ. ಈ ನಂಬರ್ ಗೆ ಕರೆ ಮಾಡಿ 9632489204

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಸ್ನಾತಕೋತರ ವಿಭಾಗದಲ್ಲಿ ರಾಜೀವ್ ಗಾಂಧಿ  ವಿಶ್ವವಿದ್ಯಾಲಯದಿಂದ ಮೂರು ರ‌್ಯಾಂಕ್

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇವರು ಮಾರ್ಚ್ -2025 ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ/ಎಂ.ಎಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತರ ವಿಭಾಗದ ಮೂರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ರ‌್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಗದ ತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಅವಿನಾಶ್ ಕೆ...

ಕೊಲ್ಲಮೊಗ್ರು : ಏ.30 ರಿಂದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವ

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ಏ.30 ರಿಂದ ಮೇ.01 ರವರೆಗೆ ನಡೆಯಲಿದ್ದು, ಏ.30 ರಂದು ಭಂಢಾರ ಬರುವುದು ಹಾಗೂ ಮೇ.01 ರಂದು ನೇಮ ನಡಾವಳಿ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಆರಂತೋಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಿರಂತರ 71ನೇ ತಿಂಗಳ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಅಭಿಯಾನ ದ ಅಂಗವಾಗಿ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆಯ ನಿರಂತರ 71 ತಿಂಗಳ ಕಾರ್ಯಕ್ರಮ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ದಿನಾಂಕ 27.4.2025ನೇ ಆದಿತ್ಯವಾರ ದಂದು ಬೆಳಿಗ್ಗೆ 7.30ರಿಂದ 9.30ರ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಸದಸ್ಯರಲ್ಲದೆ ಗ್ರಾಮ ಪಂಚಾಯತ್...

ಕೆ.ಎಂ.ಎಫ್. ಚುನಾವಣೆ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಗೆಲುವು

ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್.) ಚುನಾವಣೆ ಇಂದು ನಡೆದು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಜಯಗಳಿಸಿದ್ದಾರೆ. ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್. ಬಿ.‌ಜಯರಾಮ ರೈ 190, ಭರತ್ ನೆಕ್ರಾಜೆ 173, ಚಂದ್ರಶೇಖರ ರಾವ್‌ 169, ಹೆಚ್ ಪ್ರಭಾಕರ್ 157, ಸವಿತಾ ಎಸ್ ಶೆಟ್ಟಿ ಮತ ಪಡೆದು...
Loading posts...

All posts loaded

No more posts

error: Content is protected !!