Ad Widget

ದಕ್ಷಿಣ ಕನ್ನಡ ವ್ಯಾಪಕ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಸಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಮುಂದೆ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯು ತುರ್ತು ಕ್ರಮಗಳನ್ನು ಕೈಗೊಂಡಿದೆ.ಆದ್ದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ,...

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ವ್ಯಾಪಕ ಮಳೆ ; ಇಂದು(ಮೇ.30) ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢಶಾಲೆಗಳಿಗೆ, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ಇಂದು(ಮೇ.30) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಮಾಣಿಲ : ಮಾತೃಭೂಮಿ ಯುವ ವೇದಿಕೆಯ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಾಣಿಲ ಗ್ರಾಮದ ಸುಮಾರು 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಹತ್ತನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ.30ರಿಂದ ಉಪಹಾರ ಪ್ರಸಾದದ ವ್ಯವಸ್ಥೆ ಆರಂಭ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಮದ್ಯಾಹ್ನ ಮತ್ತು ರಾತ್ರಿ ಅನ್ನದಾಸೋಹ ಭೋಜನ ಪ್ರಸಾದದ ವ್ಯವಸ್ಥೆ ಜಾರಿಯಲ್ಲಿದ್ದು, ಇದೀಗ ಶ್ರೀ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗಿನ ಉಪಹಾರ ಪ್ರಸಾದದ ವ್ಯವಸ್ಥೆಯನ್ನು ಮೇ.30 ರಂದು ಪೂರ್ವಾಹ್ನ 8:00 ಗಂಟೆಗೆ ವಿದ್ಯುಕ್ತವಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು...

ಕಲ್ಲುಗುಂಡಿ : ವಿದ್ಯುತ್ ಶಾಕ್ – ಲೈನ್ ಮ್ಯಾನ್ ಗೆ ಗಂಭೀರ ಗಾಯ

ಕಲ್ಲುಗುಂಡಿ  ಕಡಪಾಲದ ಸಮೀಪ  ಕರೆಂಟ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭದಲ್ಲಿ ಲೈನ್ ಮ್ಯಾನ್ ನವೀನ್ ಎಂಬವರಿಗೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಘಟನೆ ಮೇ.26 ರಂದು ಮಧ್ಯಾಹ್ನ ನಡೆದಿದೆ. ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ನವೀನ್ ಅವರನ್ನು ಸ್ಥಳೀಯರು  ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಅರಂತೋಡು : ಪ್ರಾಥಮಿಕ ಶಾಲಾ ಬಳಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರ ತೆರವುಗೊಳಿಸಲು ಒತ್ತಾಯ

ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ  ಬಳಿ ರಸ್ತೆಗೆ ಬಾಗಿ ಮರವೊಂದು ನಿಂತಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸುವ  ರಸ್ತೆಯಲ್ಲಿರುವ ಮರವನ್ನು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ.

ಮರುಪರೀಕ್ಷೆ ಬರೆದ ಗುತ್ತಿಗಾರು ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ಯಶಸ್ವಿ ಎರ್ದಡ್ಕಳಿಗೆ 21 ಹೆಚ್ಚುವರಿ ಅಂಕ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಶಸ್ವಿ ಎರ್ದಡ್ಕ ಇವರು ಫಲಿತಾಂಶ ಉತ್ತಮಪಡಿಸುವ ಸಲುವಾಗಿ ಮರು ಪರೀಕ್ಷೆ ಬರೆದಿದ್ದು 21 ಅಂಕ ಹೆಚ್ಚುವರಿ ಪಡೆದುಕೊಂಡಿರುತ್ತಾರೆ. ಮರು ಪರೀಕ್ಷೆಯಲ್ಲಿ 522 ಡಿಸ್ಟಿಂಕ್ಷನ್ ಅಂಕ ಪಡೆದದಿರುತ್ತಾರೆ. ಇವರು ಮಾಧವ ಎರ್ದಡ್ಕ ಹಾಗೂ ರೂಪ ಎರ್ದಡ್ಕ ರವರ...

ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳ ಬಳಿ ಹುಚ್ಚಾಟ ಮಾಡದಿರಿ… ಒಂದು ಕ್ಷಣದ ಖುಷಿಗಾಗಿ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ…

ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಇನ್ನೇನು ಕೆಲವೇ ದಿನಗಳಲ್ಲಿ ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯಲು ಪ್ರಾರಂಭಿಸುತ್ತವೆ.ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಜೀವಸಂಕುಲದ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುತ್ತಿರುವ ಈ ಮಳೆಯಲ್ಲಿ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು...

ಗೂನಡ್ಕ ಮರ ಬಿದ್ದು ಮನೆಗಳಿಗೆ ಹಾನಿ – ನೆರವಿಗೆ ಧಾವಿಸಿದ ಸಂಘ ಸಂಸ್ಥೆಗಳು – ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ

ಸಂಪಾಜೆ ಗ್ರಾಮದ ಗೂನಡ್ಕ ಉಮ್ಮರ್ ಹಾಜಿ ಯವರ ಬಾಡಿಗೆ ಮನೆ ಮೇಲೆ ಸಾಗುವಾನಿ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿ ವಾಸವಿದ್ದ 3 ಕುಟುಂಬ ಅಪಾಯದಿಂದ ಪಾರಾಗಿದ್ದಾರೆ.ಮನೆಯಲ್ಲಿ ವಾಸವಿದ್ದ 2 ಮಕ್ಕಳು ಹಾಗೂ ತಾಯಿಯ ಮೇಲೆ ಸೀಟು ಬಿದ್ದು ಸಣ್ಣ ಪುಟ್ಟ ಹಾನಿಯಾಗಿದ್ದು ಸುಳ್ಯದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅಲ್ಲದೆ 3 ಮನೆಗಳಲ್ಲಿ...

ಬಾಳಿಲ : ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಕಂಬ – ಪೈಪ್ ಲೈನ್ ಕಾಮಗಾರಿಯಿಂದ ಹಲವು ಸಮಸ್ಯೆ

ಬೆಳ್ಳಾರೆ ಗುತ್ತಿಗಾರು 33ಕೆ.ವಿ. ವಿದ್ಯುತ್ ಲೈನ್ ನ ಕಂಬವೊಂದು ಬಾಳಿಲ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿದ್ದು ರಸ್ತೆಗೆ ಬೀಳುವ ಹಂತದಲ್ಲಿದೆ. ವಿದ್ಯುತ್ ಕಂಬದ ಬಳಿಯೇ ಪೈಪ್ ಲೈನ್ ಕಾಮಗಾರಿ ನಡೆಸಿದ್ದರಿಂದ ಕಂಬ ಬೀಳುವಂತಾಗಿದೆ. ಮಳೆಗಾಲ ಆರಂಭವಾದರೂ ಇನ್ನೂ ಎಲ್ಲಾ ಕಡೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಜನತೆ ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.‌ ಮಳೆಗಾಲ ಕಾಮಗಾರಿ...
Loading posts...

All posts loaded

No more posts

error: Content is protected !!