- Sunday
- March 15th, 2026
ಭಕ್ತಿಗೀತೆಗಳ ಲೋಕಕ್ಕೆ ಮತ್ತೊಂದು ಭಕ್ತಿಯ ಮಧುರ ಗೀತೆ ಇಂದು ಸೇರ್ಪಡೆಯಾಗಿದೆ. ಫೆ.02ರಂದು ಮಂಗಳೂರಿನ ಶ್ರೀ ನವದುರ್ಗಾ ಮಂತ್ರಾಮೂರ್ತಿ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಯೋಗೀಶ್ ಭಟ್ ಚಿಂತನೆಯಲ್ಲಿ ಬಿಡುಗಡೆಗೊಳಿಸಿದರು. ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಭಕ್ತಿಪದ ಬಿಡುಗಡೆಗೊಂಡಿದೆ. ಈ ಸಂದರ್ಭದಲ್ಲಿ ಬಹರೇನ್ ನಿಂದ ಆಗಮಿಸಿದ ನವೀನ್ ಮಾವಜಿ ಹಾಗೂ ಹನುಮಾನ್ ಭಟ್, ರಾಜೇಂದ್ರ ಮಂಗಳೂರು, ಪ್ರಗತ್ ಪುತ್ತೂರು...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಸಹಯೋಗದೊಂದಿಗೆ " ಅರೆಭಾಷೆ ಜಂಬರ ಆಟಿ ಕೂಟ " ಆಗಸ್ಟ್ 10 ರಂದು ಅಡ್ಕಾರ್ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿ ಪರ ಕೃಷಿಕ ಗಂಗಾಧರ ಅಡ್ಕಾರ್ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಜಾಲ್ಸೂರು ಗ್ರಾಮ ಪಂಚಾಯಿತಿ...
ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲ್ಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ವಠಾರದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆಯಿತು. ಸಭಾ...
ಸುಬ್ರಹ್ಮಣ್ಯ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆಯು ಆಗಸ್ಟ್ 07 ಗುರುವಾರದಂದು ಸುಬ್ರಹ್ಮಣ್ಯ ಉಪ ವಿಭಾಗ ಕಚೇರಿಯಲ್ಲಿ ಜರಗಲಿರುವುದು. ಮಂಗಳೂರು ಮೆಸ್ಕಾಂ ಕಾರ್ಪೊರೇಟ್ ಕಚೇರಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಅವರು ಅಧ್ಯಕ್ಷತೆ ವಹಿಸಲಿರುವರು.ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ದೂರವಾಣಿ ಕರೆ ಸಂಖ್ಯೆ(08257-200699) ಮೂಲಕ ಸಲ್ಲಿಸಬಹುದೆಂದು...
ಬಳ್ಪ ಗ್ರಾಮದ ಶಿವರಾಮ ಗೌಡ ಎಣ್ಣೆಮಜಲು ಆ.02 ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ಪುನಿತ್, ಪುತ್ರಿಯರಾದ ಶ್ರೀಮತಿ ವಾಣಿ, ಶ್ರೀಮತಿ ವೀಣಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಕಾಜಿಮಡ್ಕ ಲಿಂಗಪ್ಪ ಗೌಡ ರವರ ಪುತ್ರ ಯಶವಂತ.ಕೆ(50 ವರ್ಷ) ಎಂಬುವವರು ಜುಲೈ 14 ರಂದು ಐನೆಕಿದು ಗ್ರಾಮದ ಪಾದೆಮೂಲೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದು, ಸದ್ರಿ ವ್ಯಕ್ತಿ ಕಂಡುಬಂದಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಟೆ ಫೌಂಡೇಷನ್ ವತಿಯಿಂದ ಸುಳ್ಯದ ಯುವಕ, ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಸುವರ್ಣ ಅವಕಾಶ ಒದಗಿಸಿದೆ. ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯ ಜೇನು ಸೊಸೈಟಿ ಹಿಂಭಾಗದಲ್ಲಿರುವ ಸಾಂದೀಪ್ ಶಾಲೆಯಲ್ಲಿ ರೈಟ್ ಟು ಲಿವ್ (ಕೋಟೆ ಫೌಂಡೇಷನ್), ಎಂ. ಬಿ ಫೌಂಡೇಷನ್ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ...
ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿಗಳಾದ ಶ್ರೀ ಪ್ರಭಾಕರ ಶಿಶಿಲ ಅವರು ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ. ಆ.03 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳಾದ...
ದೆಹಲಿಯಲ್ಲಿ ನಡೆದ ಪ್ರತಿಷ್ಠಿತ Food connoisseurs India Awards ನಲ್ಲಿ ಸುಳ್ಯ ಮೂಲದ ಪ್ರಣೀತ್ ಎಂ.ಬಿ. ಹಾಗೂ ಪ್ರಾಂಜಲಿ ಪ್ರಣೀತ್ ಮಾಲಕತ್ವದ ಮಂಗಳೂರಿನ ಸೆರೀನೊ ಜಿಲಾಟೋ (Sereno Gelato) ಬೆಸ್ಟ್ ನ್ಯೂಕಮರ್ - ಐಸ್ ಕ್ರೀಂ ಪಾರ್ಲರ್ ರಾಷ್ಟ್ರ ಪ್ರಶಸ್ತಿ 2025ನ್ನು ಮುಡಿಗೇರಿಸಿಕೊಂಡಿದೆ. ಇವರು ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೊರಿಯಲ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ...
Loading posts...
All posts loaded
No more posts
