- Sunday
- March 15th, 2026
ಮರ್ಕಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.14 ರಂದು ಪಂಚಶ್ರೀ ಸಂಜೀವಿನಿ ಒಕ್ಕೂಟದ ವತಿಯಿಂದ ಶ್ರಮದಾನ ನಡೆಯಿತು.ಈ ಶ್ರಮದಾನದಲ್ಲಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಎಂ.ಬಿ.ಕೆ, ಎಲ್.ಸಿ.ಆರ್.ಪಿ ಗಳು, ಕೃಷಿ ಸಖಿ, ಪಶು ಸಖಿ ಅವರುಗಳು ಭಾಗವಹಿಸಿ ಶಾಲಾ ಆವರಣದ ಮುಂಬಾಗದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಭಾಗವಹಿಸಿ ತರಕಾರಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು.ಶಾಲಾ...
ಸ್ಪಂದನ ಗೆಳೆಯರ ಬಳಗ(ರಿ.) ಅಡ್ತಲೆ ಇವರ ಆಶ್ರಯದಲ್ಲಿ ಆ.17ನೇ ಆದಿತ್ಯವಾರದಂದು ಅಡ್ತಲೆ ಶಾಲಾ ವಠಾರದಲ್ಲಿ 7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆಯು ನಡೆಯಲಿದೆ. ಪುಟಾಣಿಗಳಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾ ಹಾಗೂ ಮನರಂಜನಾ ಸ್ಪರ್ಧೆಗಳು ನಡೆಯಲಿವೆ.ಕಾರ್ಯಕ್ರಮವನ್ನು ಅಡ್ತಲೆ- ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ...
ಪಂಜ: "ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಸರಕಾರದ ಆದೇಶದಂತೆ ಮತ್ತು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಪ್ರಕಾರ ಆ.15ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗುವುದು. ಅಲ್ಲದೆ ಈ ಮೂಲಕ 'ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆಗೆ' ಅಭಿಯಾನಕ್ಕೆ ಪುಣ್ಯಕ್ಷೇತ್ರದಲ್ಲಿ ಚಾಲನೆ ನೀಡಲಾಗುವುದು. ಸಾರ್ವಜನಿಕರು ಸರ್ವರೀತಿಯ ಸಹಕಾರ ನೀಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ...
ಬೆಳ್ಳಾರೆ ಗ್ರಾಮದ ಕೊಳಂಬಳ-ಚಾಕಟ್ಟೆಮಜಲು ರಸ್ತೆ ಕಾಂಕ್ರಿಟೀಕರಣಗೊಂಡಿತು. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರ 4 ಲಕ್ಷ ಅನುದಾನ ಮತ್ತು ಸುಳ್ಯ ತಾಲೂಕು ಪಂಚಾಯತಿನ 2 ಲಕ್ಷ ಅನುದಾನ ಸೇರಿದಂತೆ ಒಟ್ಟು 6 ಲಕ್ಷ ಕೂಡಿ ಬಂದು ಈ ರಸ್ತೆಯು ಕಾಂಕ್ರಿಟೀಕರಣ ಕಂಡಿತು. ಈ ಅನುದಾನಗಳ ಬಿಡುಗಡೆಗಾಗಿ ಅನಿಲ್ ರೈ ಚಾವಡಿಬಾಗಿಲು ಬೆಳ್ಳಾರೆ ಹಾಗೂ ಹಮೀದ್ ಹೆಚ್.ಎಂ.ಬೆಳ್ಳಾರೆ...
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇವುಗಳ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ 17 ವಯೋಮಾನದ ವಿಭಾಗದಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ನಿಶಾಲ್ ಭಾಸ್ಕರ್ ದ್ವಿತೀಯ ಸ್ಥಾನ, ಆಸಿಯತ್ ಶಮ್ನ ಎಂ ದ್ವಿತೀಯ ಸ್ಥಾನ, ವಸಂತ ಮಾಧವ ಭಟ್ 5ನೇ ಸ್ಥಾನ...
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯದಲ್ಲಿ ಜು.13ರಂದು ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ವಿಶ್ವ ಅಂಗಧಾನ ದಿನಾಚರಣೆ ಪ್ರಯುಕ್ತ ಮಾನವ ಶರೀರದ ಅಂಗಾಂಗ ಮಾದರಿಯ ವಸ್ತು ಪ್ರದರ್ಶನ, ಬೀದಿ ನಾಟಕ ಹಾಗೂ ಅಂಗಾಂಗ ದಾನದ ನೈಜ ಘಟನೆಯನ್ನಾದರಿಸಿದ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಶಲ್ಯ ತಂತ್ರ ವಿಭಾಗ ಮುಖ್ಯಸ್ಥರಾದ ಡಾ.ಹರ್ಷವರ್ಧನ.ಕೆ ವಹಿಸಿ...
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕೊಲ್ಲುಮೊಗ್ರು ಕೆವಿಜಿ ಪ್ರೌಢಶಾಲಾ 60 ವಿದ್ಯಾರ್ಥಿಗಳಿಗೆ ಉಚಿತವಾಗಿ ಯೂನಿಫಾರಂ ಗಳನ್ನು ಆ.12 ಶುಕ್ರವಾರದಂದು ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು,...
(ವರದಿ : ಉಲ್ಲಾಸ್ ಕಜ್ಜೋಡಿ)ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್(ರಿ.) ಕಡಬ ತಾಲೂಕು, ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು ಹಾಗೂ ಟೀಂ ಈಶ್ವರ್ ಮಲ್ಪೆ ಇವರುಗಳ ಸಹಯೋಗದೊಂದಿಗೆ ಆ.30 ಹಾಗೂ 31 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ...
ಆಗಸ್ಟ್ 13 ನ್ನು ವಿಶ್ವದಾದ್ಯಂತ “ಆಂಗಾಂಗ ದಾನಿಗಳ” ಎಂದು ಆಚರಿಸಲಾಗುತ್ತಿದೆ. ಆಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 140 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ಇದರ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿರುವ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ವಾಸವಾಗಿರುವ ತೀರಾ ಸಂಕಷ್ಟದಲ್ಲಿರುವ ಸದಸ್ಯರಾದ ಕಮಲಾಕ್ಷಿ ಎಂಬವರಿಗೆ ರೂಪಾಯಿ 1,000/- ಮಾಶಾಸನ ಮಂಜೂರಾಗಿದ್ದು, ಇದರ ಮಂಜೂರಾತಿ ಕೈಪಿಡಿಯನ್ನು ಶ್ರೀ ಕಲ್ಕುಡ ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಗೌಡ, ಜ್ಞಾನವಿಕಾಸ...
Loading posts...
All posts loaded
No more posts
