Ad Widget

ಬೆಳ್ಳಾರೆ : ನಾಳೆ ಪಳ್ಳಿಮಜಲಿನಲ್ಲಿ ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರ್ ಸಾಹಿತ್ಯೋತ್ಸವ

ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಸಾಹಿತ್ಯೋತ್ಸವವು ನಾಳೆ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಸೆಂಡೊರಿ ಮದರಸದ ವಠಾರದಲ್ಲಿ ಜರುಗಲಿದೆ.ಬೆಳಿಗ್ಗೆ 8:30 ಕ್ಕೆ  ಧಾರ್ಮಿಕ, ಸಂಘಟನಾ ಪ್ರಮುಖರ ಉಪಸ್ಥಿತಿಯಲ್ಲಿ ಸಮಾರಂಭವು ಉದ್ಘಾಟನೆಗೊಳ್ಳಲಿರುವುದು.ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಘಟಕಗಳಾದ ಬೆಳ್ಳಾರೆ, ತಂಬಿನಮಕ್ಕಿ, ಮಾಲೆಂಗ್ರಿ, ಪೆರುವಾಜೆ, ಇಂದ್ರಾಜೆ, ಪಳ್ಳಿಮಜಲಿನ ಪ್ರತಿಭೆಗಳು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಧಾರ್ಮಿಕ ಸಂಸ್ಕೃತಿ ವೈಭವ ತುಂಬಿ ಬರಲಿದ್ದು ಆಕರ್ಷಣೆಗೆ ಕಾರಣವಾಗಿರಲಿದೆ....

ಉಪ್ಪುಕ್ಕಳ ಪರಮೇಶ್ವರ ಗೌಡ ಕೊಲೆ ಪ್ರಕರಣದ ಆರೋಪಿಗಳ ಖುಲಾಸೆ

ಬಾಳುಗೋಡು ಗ್ರಾಮದ ಉಪ್ಪುಕ್ಕಳ ಪರಮೇಶ್ವರ ಗೌಡ ಕೊಲೆ ಪ್ರಕರಣದ ಆರೋಪಿಗಳ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ .2013 ಸೆ.16 ರಂದು ಆರೋಪಿಗಳಾದ ಚಂದ್ರಹಾಸ, ಎಂ.ಎಚ್.ಮೋಹನ. ಮೋಹನ ದಾಸ್ ಗೌಡ, ಪ್ರಕಾಶ್ ಶೆಟ್ಟಿಗಾರ್, ರಫೀಕ್, ಹಾಗೂ ಉಂಬು ಯಾನೆ ಇಬ್ರಾಹಿಂ ಉಂಬಯ್ ರವರುಗಳು ಸೇರಿಕೊಂಡು ಸಂಜೆ 7:30 ಗಂಟೆಗೆ 2ನೇ ಆರೋಪಿ ಮೋಹನ ಎಂ ಎಚ್ ರವರ ಬಾವ...
Ad Widget

ವಿವಿಧೆಡೆ ಗಣೇಶೋತ್ಸವ ಆಚರಣೆ ಅಡ್ಡಿ – ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ : ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಸರಕಾರದ ಧೋರಣೆಯನ್ನು ಹಿಂದೂ ಸಮಾಜ ಕ್ಷಮಿಸಲು ಸಾಧ್ಯವಿಲ್ಲ – ವೆಂಕಟ್ ವಳಲಂಬೆ

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಮಾಜವನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೆಶೋತ್ಸವ ಪ್ರಾರಂಭ ಮಾಡಿದ್ದರು. ಅಂತಹ ಪರಂಪರೆಯ ಇತಿಹಾಸ ಹೊಂದಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ರಾತ್ರಿ10 ಗಂಟೆ ವೇಳೆಗೆ ಸರಕಾರದ ಒತ್ತಡದ ಮೂಲಕ ಆರಕ್ಷಕ ಇಲಾಖಾಧಿಕಾರಿಗಳು ಕಾರ್ಯಕ್ರಮ ನಿಲ್ಲಿಸುವಂತೆ ಸೂಚನೆ ನೀಡಿರುವುದು ಖಂಡನೀಯವೆಂದು ಬಿಜೆಪಿ ಮಂಡಲ ಸಮಿತಿ ವೆಂಕಟ್ ವಳಲಂಬೆ...

ಅಂಗನವಾಡಿ, ಪ್ರಾಥಮಿಕ & ಪ್ರೌಢ ಶಾಲೆ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಇಂದು (ಆ.30) ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ದಿನಾಂಕ: 30-08-2025 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆಧೇಶಿಸಿದ್ದಾರೆ.

ಕುಕ್ಕೆ : ಶ್ರೀ ದೇವರ ಪಾಲಕಿಗೆ ರಜತ ಗೊಂಡೆ ಹಸ್ತಾಂತರ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿಗೆ ರಜತ ಗೊಂಡೆಯನ್ನು ಸೇವಾರೂಪದಲ್ಲಿ ಶುಕ್ರವಾರ  ಉದ್ಯಮಿ ನಾಗರಾಜ ಕುಲಕರ್ಣಿ ಬೆಂಗಳೂರು ಮತ್ತು  ಕುಟುಂಬಸ್ಥರು ಸಮರ್ಪಿಸಿದರು.ಕಳೆದ ಬಾರಿ ಬೆಳ್ಳಿಯ ಪಾಲಕಿ  ಸಮರ್ಪಣೆ ಮಾಡಿದ್ದ ಇವರು  ನೂತನ ಪಲ್ಲಕ್ಕಿಗೆ 12 ಬೆಳ್ಳಿಯ ಗೊಂಡೆ ಸಮರ್ಪಣೆ ನೀಡಿದರು.ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್. ಇಂಜಾಡಿ,ಸಹಾಯಕ...

ಕೊಲ್ಲಮೊಗ್ರು ಗ್ರಾಮದಲ್ಲಿ ಭ್ರಷ್ಟಾಚಾರ ವಿರೋಧಿ ಕಿಡಿ ; ತನಿಖೆಯಿಲ್ಲದೇ ಅಮಾನತುಗೊಂಡ ಸಿಬ್ಬಂದಿ ಪುನರ್ ನೇಮಕವನ್ನು ವಿರೋಧಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೇ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಆ.29 ಶುಕ್ರವಾರದಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. “ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಕೂಗಿದರು. ಪಂಚಾಯತ್‌ ನಲ್ಲಿ ಜನರ ಹಿತದಾಯಕ ನಿರ್ವಹಣೆ ಬದಲಾಗಿ ಭ್ರಷ್ಟಾಚಾರ ನಡೆಯುತ್ತಿದೆ. ತನಿಖೆ...

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಯುಗನ್ ಜೇನುಕೋಡಿ ಪ್ರಥಮ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ 10ನೇ ತರಗತಿ ವಿದ್ಯಾರ್ಥಿ ಯುಗನ್ ಜೇನುಕೋಡಿ ಭಾಗವಹಿಸಿ ಪ್ರಥಮ...

ದ.ರಾ ಬೇಂದ್ರೆ ರಾಷ್ಟ್ರ ಪ್ರಶಸ್ತಿಗೆ ಎಂ.ಎ ಮುಸ್ತಫಾ ಬೆಳ್ಳಾರೆ ಆಯ್ಕೆ

ರಾಯಚೂರಿನ ಬೆಳಕು ಸಾಹಿತ್ಯಿಕ ಸಾಂಸ್ಕೃತಿಕ ಟ್ರಸ್ಟ್ ನವರು ನೀಡುವ ದ.ರಾ ಬೇಂದ್ರೆ ರಾಷ್ಟ್ರ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಗಾಗಿ ಖ್ಯಾತ ಯುವಕವಿ ಎಂ.ಎ ಮುಸ್ತಫಾ ಬೆಳ್ಳಾರೆಯವರು ಆಯ್ಕೆಯಾಗಿದ್ದಾರೆ.ಸೆ.21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ನಡೆಯಲಿದ್ದು, ಇಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬಿಜೆಪಿಯನ್ನು ಪ್ರಶ್ನೆ ಮಾಡುವುದೇ ತಪ್ಪಾ – ಪರ್ಯಾಯ ಮೀನು ಕೃಷಿ ಕಥೆ ಏನಾಯಿತು ? – ಎಂ.ವೆಂಕಪ್ಪ ಗೌಡ ಮರುಪ್ರಶ್ನೆ

ಬಿಜೆಪಿಯವರು ತಾವು ರೈತರ ರಕ್ಷಣೆಗೆ ಮುಂದಾಗಿದ್ದಾರೆ ಅಂತ ಹೇಳಿಕೆ ನೀಡುತ್ತಿದ್ದಾರೆ, ಕರ್ನಾಟಕದಲ್ಲಿ ಈ ತನಕದ ಬಿಜೆಪಿ ಆಡಳಿತದಲ್ಲಿ ರೈತರಿಗೆ ಏನು ಸಾಲ ಮನ್ನಾ ಮಾಡಿದ್ದೀರಾ?  ಈ ಹಿಂದೆ ರೈತರ ಅಡಿಕೆ ಕೃಷಿ ಕೊಳೆ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಎಕರೆ ಒಂದಕ್ಕೆ ರೂ 12,000/= ದಂತೆ ಪರಿಹಾರ ಕೊಟ್ಟಿದ್ದಾರಾ? ಸಹಕಾರಿ ಸಂಘದಲ್ಲಿ 0% ಗೆ ಸಾಲ ಕೊಟ್ಟಿದ್ದಾರಾ?...

ಹಳೇಗೇಟು 42ನೇ ಗಣೇಶೋತ್ಸವ ; ಇಂದು ಸಂಜೆ ನಾಸಿಕ್ ಬ್ಯಾಂಡ್ ಅಬ್ಬರದೊಂದಿಗೆ ವೈಭವದ ಶೋಭಾಯಾತ್ರೆ

ಸಾಂಸ್ಕೃತಿಕ ಸಂಘ ಹಳಗೇಟು ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಕೊನೆಯ ದಿನ ಇಂದು ಮಧ್ಯಾಹ್ನ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5:00 ರಿಂದ ನಾಸಿಕ್ ಬ್ಯಾಂಡ್ ನ ಅಬ್ಬರದೊಂದಿಗೆ ವೈಭವದ...
Loading posts...

All posts loaded

No more posts

error: Content is protected !!