Ad Widget

ಕಂದ್ರಪ್ಪಾಡಿ : ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಗಸ್ಟ್ 31 ರಂದು ಕಂದ್ರಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ...

ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಹರಿಹರ ಪಳ್ಳತ್ತಡ್ಕ ಪ್ರಾ.ಕೃ.ಪ.ಸ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ರವರಿಗೆ ಸನ್ಮಾನ

ಆ.30 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
Ad Widget

ನಡುಗಲ್ಲು : ಮರಕತ ಶ್ರೀದುರ್ಗಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ವಿಜಯ ಕುಮಾರ್ ಚಾರ್ಮತ ; ಕಾರ್ಯದರ್ಶಿಯಾಗಿ ವಿಶ್ವನಾಥ ಕುತ್ಯಾಳ

ನಡುಗಲ್ಲು ಮರಕತ ಶ್ರೀದುರ್ಗಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆ.27 ರಂದು ಸುಬ್ರಹ್ಮಣ್ಯ ಪಾಲ್ತಾಡು ರವರ ಮನೆಯಲ್ಲಿ ನಡೆಯಿತು.ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಜಯ ಕುಮಾರ್ ಚಾರ್ಮತ ಅವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿಶ್ವನಾಥ ಕುತ್ಯಾಳ ರವರು ಆಯ್ಕೆಯಾದರು.(ವರದಿ : ಉಲ್ಲಾಸ್ ಕಜ್ಜೋಡಿ)

ಅಡ್ಕಾರು : ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ

ಮಾಣಿ ಮೈಸೂರು ಹೆದ್ದಾರಿಯ ಅಡ್ಕಾರು ಸಮೀಪ ಆ.30 ರಂದು ಲಾರಿ ಢಿಕ್ಕಿಯಾದ ಘಟನೆ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದು ವಿದ್ಯುತ್ ಕಂಬ ಮುರಿದ್ದು ಕಂಬ ಹಾಗೂ ಲಾರಿಗೆ ಹಾನಿಯಾಗಿದೆ.

ದುಗ್ಗಪ್ಪ ಗೌಡ ಪಾಂಡಿಪಾಲು ನಿಧನ

ಕಳಂಜ ಗ್ರಾಮದ ಪಾಂಡಿಪಾಲು ನಿವಾಸಿ ದುಗ್ಗಪ್ಪ ಗೌಡ ಪಾಂಡಿಪಾಲು ಬೈನ್ ಹೆಮರೇಜ್ ಆಗಿ ಆ.30 ರ ರಾತ್ರಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಬ್ರೈನ್ ಹೆಮರೇಜ್ ಗೆ ತುತ್ತಾದ ಅವರಿಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆ ಹಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರನ್ನು ಮನೆಗೆ...

ಸುಳ್ಯ : ಎನ್ ಎಸ್ ಎಸ್ ಸೇವಾ ಸಂಗಮದ  ವತಿಯಿಂದ ಮಂಡೆಕೋಲು ಗ್ರಂಥಾಲಯಕ್ಕೆ ಇನ್ವರ್ಟರ್ ಕೊಡುಗೆ

ಎನ್ ಎಸ್ ಎಸ್ ಸೇವಾ ಸಂಗಮ (ರಿ)ಸುಳ್ಯ ಇವರ ವತಿಯಿಂದ ಮಂಡೆಕೋಲು ಗ್ರಂಥಾಲಯಕ್ಕೆ ಇನ್ವರ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೇವಾ ಸಂಗಮದ ಎನ್ ಎಸ್ ಎಸ್ ಘಟಕದ ಸಂಘಟನಾ ಕಾರ್ಯದರ್ಶಿ ಸುಜಿತ್  ಮತ್ತು ಸದಸ್ಯರಾದ ಲಿಕಿತ್ ಕೆ. ವಿ., ಬಾನುಪ್ರಕಾಶ್ ಹಾಗೂ ಮಂಡೆಕೋಲು ಗ್ರಂಥಾಲಯ ಸಮಿತಿಯ ವಿದ್ಯಾರ್ಥಿ ಬಳಗದ ಅಭಿಷೇಕ್ ಕಣೆಮರಡ್ಕ ರವರು ಉಪಸ್ಥಿತರಿದ್ದರು      ...

ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದ್ದು, ಸಹಕಾರಿ ರತ್ನ ಚಂದ್ರ ಕೋಲ್ಚಾರ್, ಕಾರ್ಯನಿರ್ವಾಹಣಾಧಿಕಾರಿಗಳಾದ ತಿಮ್ಮಯ್ಯ ಪಿಂಡಿಮನೆ, ನಿರ್ದೇಶಕರಾದ ಪುರುಷೋತ್ತಮ ಭಟ್, ತನಿಯಪ್ಪ ಗೌಡ, ಸಹಾಯಕ ಮಾರಾಟ ಮತ್ತು ಖರೀದಿ ಅಧಿಕಾರಿಯಾದ  ಜಯಾನಂದ ಜೆ ಇವರುಗಳು ಆ.30 ರಂದು ಮಂಗಳೂರಿನಲ್ಲಿ ನಡೆದ ಸಂಘದ 111ನೇ ವರ್ಷದ ಮಹಾಸಭೆಯಲ್ಲಿ ಪ್ರಶಸ್ತಿಯನ್ನು...

ದ. ಕ ಸಂಪಾಜೆ ಸಹಕಾರಿ  ಸಂಘಕ್ಕೆ ಸತತ 12ನೇ ಬಾರಿ ಜಿಲ್ಲಾ ಬ್ಯಾಂಕ್ ಪ್ರಶಸ್ತಿ

ದ.ಕ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ 2024-25 ಸಾಲಿನ ಸಮಗ್ರ ಕಾರ್ಯಚಟುವಟಿಕೆಗೆ ಜಿಲ್ಲಾ  ಬ್ಯಾಂಕ್ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂಎನ್ ರಾಜೇಂದ್ರ ಕುಮಾರ್ ರವರಿಂದ ಆ.30 ರಂದು ಮಂಗಳೂರಿನ ಜಿಲ್ಲಾ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ಸಂಘದ ಅಧ್ಯಕ್ಷರಾದ  ಸೋಮಶೇಖರ ಕೊಯಿಂಗಾಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ವೀರೇಂದ್ರ...

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಪೆರಾಜೆ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

2024-25 ನೇ ಸಾಲಿನಲ್ಲಿ ಉತ್ತಮ ಆಡಳಿತ ಮತ್ತು ಕಾರ್ಯನಿರ್ವಹಣೆಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಥಮ ಸ್ಥಾನ ದೊರೆಕಿರುತ್ತದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಗಣಪತಿ ಇವರಿಂದ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು, ಉಪಾಧ್ಯಕ್ಷರಾದ ಅಶೋಕ ಪಿ ಎಂ ಇವರು ಹಾಗೂ ಮುಖ್ಯ...

ಶೇ.100 ಸಾಲ ವಸೂಲಾತಿ – ಐವರ್ನಾಡು ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರಶಸ್ತಿ

ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಾಸಭೆಯಲ್ಲಿ 2024-2025 ರ ಸಾಲ ವಸೂಲಾತಿ ಯಲ್ಲಿ ಶೇ.100% ಸಾಧನೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾoಕ್ ನಿಂದ ಗೌರವ ಸಮರ್ಪಣೆ ನಡೆಯಿತು. ಈ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಹಾಗೂ ಸಿಇಓ ದೀಕ್ಷಿತ್ ಪಡೆದುಕೊಂಡರು.
Loading posts...

All posts loaded

No more posts

error: Content is protected !!