- Sunday
- March 8th, 2026
ಬೆಳ್ಳಾರೆ, ಕೊಡಿಯಾಲ ಹಾಗೂ ಪೆರುವಾಜೆ ಮೂರು ಗ್ರಾಮಗಳ 35 ಮಂದಿ ಫಲಾನುಭವಿ ರೈತರಿಗೆ ಫೆ.11 ರಂದು ವಿಟ್ಲದ ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿರಾಂಬೃತ ಯೋಜನೆಯ ಮೊದಲ ಹಂತದ ಏಣಿಯನ್ನು ವಿತರಿಸಲಾಯಿತು.ಈ ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು,ಶಪಿಡಿಒ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿ ರೈತರು ಪಾಲ್ಗೊಂಡಿದ್ದರು.
"ಗ್ರಾಮಗಳ ಅಭಿವೃದ್ಧಿಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ" ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿಯಿಂದ ಮುಖ್ಯ...
ಕಂದ್ರಪ್ಪಾಡಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.12ರಂದು ನಡೆಯಿತು.ಆಮಂತ್ರಣ ಪತ್ರಿಕೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನವರು ಉಪಸ್ಥಿತರಿದ್ದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ-ಗ್ರಂಥಾಲಯದಲ್ಲಿ ಫೆ.10 ರಂದು "ಶಾಲಾ ವಿದ್ಯಾರ್ಥಿಗಳು ಒಂದು ದಿನ" ಕಾರ್ಯಕ್ರಮ ನಡೆಯಿತು. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಖುಷಿಪಟ್ಟರು.ಈ ಸಂದರ್ಭದಲ್ಲಿ ಸಹಶಿಕ್ಷಕರುಗಳಾದ ಅರುಣಾಕ್ಷಿ ಕೆ.ಎಲ್, ಸುಶೀಲ ಹೆಗಡೆ, ಇಳಶ್ರೀ ಸಿ.ಜಿ, ತೃಪ್ತಿ ಎಂ.ಎಂ ಉಪಸ್ಥಿತರಿದ್ದರು.ಗ್ರಂಥಾಪಾಲಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿ ವಂದಿಸಿದರು.
ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಸುಳ್ಯ ಭಾಗದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಯ ವ್ಯವಸ್ಥೆಗಳ ಮತ್ತು ಬೇಡಿಕೆಗಳ ಬಗ್ಗೆ ಗಮನಿಸಲಾಯಿತು. ಹೊಸ ಕಟ್ಟಡದ ಬೇಡಿಕೆಯಿದ್ದು, ಶಾಸಕರ ಜೊತೆ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ಭರವಸೆ ನೀಡಿದರು.ಈ...
ಗ್ರಾಮ ಪಂಚಾಯತ್ ದೇವಚಳ್ಳ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಕಂದ್ರಪ್ಪಾಡಿ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ, ಲಯನ್ಸ್ ಕ್ಲಬ್ ಗುತ್ತಿಗಾರು, ಜೆ.ಸಿ.ಐ ಸುಳ್ಯ ಪಯಸ್ವಿನಿ, ಶಿವಾಜಿ ಫ್ರೆಂಡ್ಸ್ ಕ್ಲಬ್(ರಿ.) ಹುರುಳಿಯಡ್ಕ, ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ (ರಿ.) ಎಲಿಮಲೆ ಇವುಗಳ...
ಅಡಿಕೆಗೆ ಉತ್ತಮ ಬೆಲೆ ಇರುವ ಹಿನ್ನೆಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಫೆ.11 ರಂದು ಸಂಜೆ ವಳಲಂಬೆ ಸಮೀಪ ಅಡಿಕೆ ಕಳ್ಳತನ ನಡೆಸುತ್ತಿದ್ದ ಮೂವರನ್ನು ಹಿಡಿದು ಪೋಲಿಸರು ಒಪ್ಪಿಸಿದ್ದಾರೆ.ಕಳ್ಳತನ ನಡೆಸುತ್ತಿದ್ದಾರೆ ಎಂಬ ಶಂಕೆಯಿಂದ ಸ್ಥಳೀಯರು ಕಾದು ಕುಳಿತು ಕಳ್ಳರನ್ನು ಹಿಡಿದಿದ್ದಾರೆ. ಕಳ್ಳತನ ನಡೆಸಿದ ಸತೀಶ್ ತಳೂರು, ಶಿವ ಅಡ್ಟನಪಾರೆ ಹಾಗೂ ಸರೋಜ ಎಂಬುವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ದಿನಾಂಕ:12-02-2026ಗುರುವಾರ*01,🐏ಮೇಷರಾಶಿ🐏*📖,ನಿಮ್ಮ ಕೋಪವೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು. ಗಂಡ ಹೆಂಡತಿಯರ ಮಧ್ಯದಲ್ಲಿ ಅಥವಾ ಬಂಧುಮಿತ್ರರೊಂದಿಗೆ ಜಗಳಗಳಾಗುವ ಸಂಭವವಿದೆ, ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಬಹಳಷ್ಟು ಪ್ರಯತ್ನ ಪಡಬೇಕಾಗಬಹುದು. ಉದ್ಯೋಗದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ಕೆಲಸ ಮಾಡುವುದು ಒಳ್ಳೆಯದು. ನಿಮ್ಮ ಮುಂದಿನ ಹೊಸ ಕಾರ್ಯಾ ಆರಂಭದ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ,ಪರಿಹಾರ:-ಶ್ರೀ ಕೃಷ್ಣನನ್ನು ಆರಾಧಿಸಿ ಉತ್ತಮ...
ಬೆಳ್ಳಾರೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನಘಟಕದ ಟ್ಯಾಂಕ್ ಇಂದು ಸ್ಪೋಟಗೊಂಡಿದೆ.ತಾಂತ್ರಿಕ ಅಡಚಣೆಗಳಿಂದ ಘಟಕದ ಅನಿಲ ಸಂಪರ್ಕದ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಇಲ್ಲಿ ಗಾಜುಗಳು ಪುಡಿ ಪುಡಿಯಾಗಿದೆ.ಹಲವು ವರುಷಗಳಿಂದ ಕಾರ್ಯ ನಿರ್ವಹಿಸುತ್ತಾ ಇದ್ದ ಈ ಟ್ಯಾಂಕ್ ಸ್ಪೋಟದ ಬಗ್ಗೆ ಸುಳ್ಯ ತಾಲೂಕು ಪಂಚಾಯತ್ ಇಒ ರವರು ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.ಈ...
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಹರಿಹರ ಪಳ್ಳತ್ತಡ್ಕ ಹಾಗೂ ತೋಟಗಾರಿಕಾ ಇಲಾಖೆ ಸುಳ್ಯ ಇದರ ಸಹಯೋಗದೊಂದಿಗೆ “ಕಾಫಿ ಬೆಳೆ ಹಾಗೂ ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ”ವು ಸಂಘದ ಪ್ರಧಾನ ಕಛೇರಿಯಲ್ಲಿ ಫೆ.11 ರಂದು ನಡೆಯಿತು.ಸಂಘದ ಅಧ್ಯಕ್ಷರಾದ ಡಾ.ಸೋಮಶೇಖರ್ ಕಟ್ಟೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಗತಿಪರ ಕೃಷಿಕರಾದ ಚಂದ್ರಶೇಖರ ಕಜ್ಜೋಡಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ...
Loading posts...
All posts loaded
No more posts
