Ad Widget

ಆನ್ಲೈನ್ ನಲ್ಲಿ ಕಲಿಕೆಗೆ ನೆರವಾಗಲೂ ವಿದ್ಯಾರ್ಥಿನಿಗೆ ಮೊಬೈಲ್ ಕೊಡುಗೆ

ಭಾರತ ಲಾಕ್ ಡೌನ್ ಗೊಂಡ ಹಿನ್ನೆಲೆಯಲ್ಲಿ ಶೈಕ್ಷಣಿಕ ಕೇಂದ್ರಗಳು ಮುಚ್ಚಲ್ಪಟ್ಟಿದೆ. ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಗಳು ನಿಗದಿ ಗೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಹಾಯವಾಗುವಂತೆ ಆನ್ಲೈನ್ ತರಬೇತಿಗಳು ಆರಂಭಗೊಂಡಿದೆ.ಈ ನಿಟ್ಟಿನಲ್ಲಿ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆಯಾದ ಬಡ ವಿದ್ಯಾರ್ಥಿನಿಗೆ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಬಿ ಫೌಂಡೇಶನ್...

ಉಡುಪಿ ಯಲ್ಲಿ ಆರ್ಭಟಿಸಿದ ಕೊರೊನಾ – 210 ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ಇತ್ತೀಚೆಗೆ ಪ್ರತಿದಿನ ಶತಕ ಬಾರಿಸುತ್ತಲೇ ಬರುತ್ತಿದೆ. ಯಾವಾಗ ಹೊರರಾಜ್ಯ, ದೇಶಗಳಿಂದ ಕರ್ನಾಟಕಕ್ಕೆ ಜನ ಬಂದರೋ ಅಗಲೇ ಕೊರೊನ ರುದ್ರ ನರ್ತನ ಆರಂಭಿಸಿದೆ. ಇಂದು ಕೃಷ್ಣ ನಗರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 210 ಪ್ರಕರಣಗಳು ಪತ್ತೆಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ . ಇದರಿಂದ ಉಡುಪಿ ಸೇರಿದಂತೆ...
Ad Widget

ಕೆಪಿಸಿಸಿ ವೀಕ್ಷಕ ಧನಂಜಯ ಅಡ್ಪಂಗಾಯ ಬೇಲೂರು ಫೀಲ್ಡ್ ಆರಂಭ

ಹಾಸನ ಜಿಲ್ಲೆಯ ಬೇಲೂರು ಬ್ಲಾಕ್ ಕಾಂಗ್ರೆಸ್ ಕೆ.ಪಿ.ಸಿ.ಸಿ ವೀಕ್ಷಕರಾದ ಧನಂಜಯ ಅಡ್ಪಂಗಾಯ ಜೂ ೨ ರಂದು ಬೇಲೂರು ಕಾಂಗ್ರೇಸ್ ಕಛೇರಿಗೆ ಭೇಟಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಸ್ ಪೂರ್ಣೇಶ್ ಹಾರ ಹಾಕಿ ಸ್ವಾಗತಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧನಂಜಯ ಅಡ್ಪಂಗಾಯ ರವರು ಕೆ ಪಿ ಸಿ ಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್...

ವಿಕಲಚೇತನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಂತ್ರಸ್ತರಿಂದ ದೂರು- ಟ್ರಸ್ಟ್ ಸಂಚಾಲಕರಿಂದ ಸ್ಪಷ್ಟನೆ

ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ ಸುಳ್ಯ ಈ ಸಂಸ್ಥೆಯ ಹೆಸರಿನಲ್ಲಿ ವಿಕಲಚೇತನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅಜ್ಜಾವರ ಮತ್ತು ಮರ್ಕಂಜ ಗ್ರಾಮಗಳಿಂದ ಕೆಲವು ಸಂತ್ರಸ್ತರು ಸುಳ್ಯ ಅಧಿಕಾರಿಗಳಿಗೆ ದೂರು ನೀಡಿರುವ ಘಟನೆ ಇಂದು ನಡೆದಿದೆ.ದೂರಿನಲ್ಲಿ ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ ಎಂಬ ಹೆಸರಿನಲ್ಲಿ ತಾಲೂಕಿನಾದ್ಯಂತ ಅದೇ ರೀತಿ ಮರ್ಕಂಜ ಗ್ರಾಮದಲ್ಲಿ ವಿಕಲಚೇತನರಿಂದ ಎಂಬ ಹೆಸರಿನಲ್ಲಿ...

ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆಶಿ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಎನ್ ಎಸ್ ಯು ಐ ಕಾರ್ಯಕರ್ತರ ಸಭೆ

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪದಗ್ರಹಣದ ಕಾರ್ಯಕ್ರಮದ ಕುರಿತು ಎನ್ ಎಸ್ ಯು ಐ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸುವ ಬಗ್ಗೆ ಸಭೆ ಜೂ ೧ ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಹಾಗೂ ಕೋವಿಡ್-19 ನಿಂದ ವಿದ್ಯಾರ್ಥಿಗಳಿಗೆ ಆದಂತಹ ಸಮಸ್ಯೆಗಳ ಬಗ್ಗೆ ಸುಳ್ಯದ ಯುವ ಕಾಂಗ್ರೆಸ್...

ಕೆವಿಜಿ ಐಪಿಎಸ್‌ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್

ಸುಳ್ಯದ ಪ್ರತಿಷ್ಠಿತ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್ ಎಸ್ . ಅಧಿಕಾರ ವಹಿಸಿಕೊಂಡರು . ಇಂಗ್ಲಿಷ್ ಎಂ.ಎ. , ಬಿ.ಎಡ್ ಪದವೀಧರರಾಗಿರುವ ಅವರು ಕರ್ನಾಟಕ , ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಮೈಸೂರಿನ ಪ್ರತಿಷ್ಠಿತ ಕೈಸ್ಟ್ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ ....

ಡಿಕೆಶಿ ಪದಗ್ರಹಣ ಮುಂದೂಡಿಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಜೂ .07 ರಂದು ನಿಗದಿಪಡಿಸಲಾಗಿತ್ತು . ಲಾಕ್‌ಡೌನ್ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸಿರುವ ಕೆಲವು ನಿರ್ಬಂಧಗಳ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಲಾಕ್ ಡೌನ್ ಸಡಿಲಿಕೆ ಬಳಿಕ ದಿನ ನಿಗದಿ ಆಗಲಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ .

ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ರಾಜ್ಯ ಸರಕಾರಕ್ಕೆ ಕಾಂಗ್ರೆಸ್ ಆಗ್ರಹ

ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ಮಾಡಿಕೊಂಡು ಬರುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಕೆಲಸದಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ,ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು...

ಬಿಳಿಯಾರು ಬಳಿ ಪಾದಚಾರಿಗೆ ಕಾರು ಡಿಕ್ಕಿ ಆಸ್ಪತ್ರೆ ಸಾಗಿಸುವ ಮಧ್ಯೆ ಪಾದಾಚಾರಿ ಮೃತ್ಯು

ವರ್ಷದ ಪ್ರಥಮ ಮಳೆಯ ಆರಂಭದಲ್ಲಿ ಅನಾಹುತ ಸಂಭವಿಸಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಅರಂತೋಡು ಬಳಿ ಬಿಳಿಯಾರುನಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯ ಬರುತ್ತಿದ್ದ ಕಾರು ಅರಂತೋಡಿನ ಬಿಳಿಯಾರು ಎಂಬಲ್ಲಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಸಂಭವಿಸಿದೆ.ಅಡ್ಕಾರ್ ನ ವ್ಯಕ್ತಿಯೊಬ್ಬರ ಕಾರು ಇದಾಗಿದ್ದು ಬಿಳಿಯಾರು ಬಳಿ ಬರುತ್ತಿದ್ದಂತೆ ಪಾದಚಾರಿ ರಸ್ತೆ ದಾಟುವಾಗ, ಮಳೆಯ ಕಾರಣದಿಂದಬ್ರೇಕ್ ಸಿಗದೇ ಕಾರು ಪಾದಚಾರಿಗೆ ಗುದ್ದಿ...

ಮಡಪ್ಪಾಡಿ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ

ಮಡಪ್ಪಾಡಿ ಗ್ರಾ.ಪಂ ವತಿಯಿಂದ ಯುವಕ ಮಂಡಲ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಿಡಿಒ ಸಿಬ್ಬಂದಿ ವರ್ಗದವರು ಯುವಕ ಮಂಡಲ ಸದಸ್ಯರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಭಾಗವಹಿಸಿದರು ಶಾಲಾ ಆವರಣ,ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು
Loading posts...

All posts loaded

No more posts

error: Content is protected !!