Ad Widget

ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಮಂಗಳೂರಿನಲ್ಲಿ ಇಂದು (ಸೆ.16) ಬೃಹತ್‌ ಪ್ರತಿಭಟನಾ ಧರಣಿ : ಸಂಸದ ಕ್ಯಾ. ಚೌಟ

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಡವರ ಮನೆ ಕಟ್ಟುವ ಕನಸು ನುಚ್ಚು ನೂರಾಗಿದೆ. ಕಟ್ಟಡ ಕಾರ್ಮಿಕರು, ಗುತ್ತಿಗೆದಾರು ಕೆಲಸವಿಲ್ಲದ ನಿರುದ್ಯೋಗಿದ್ದಾರೆ. ಈ ಗಂಭೀರ ಸಮಸ್ಯೆಗೆ ಇನ್ನು...

ಸುಳ್ಯ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ “ಮಹಿಳಾ ಸಬಲೀಕರಣ ಅರಿವು” ಕಾರ್ಯಕ್ರಮ

ಮಿಷನ್ ಶಕ್ತಿ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ, ಮಂಗಳೂರು ಮತ್ತು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ “ಮಹಿಳಾ ಸಬಲೀಕರಣ ಅರಿವು” ಕಾರ್ಯಕ್ರಮವು ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ.ಕೆ...
Ad Widget

ಅಯ್ಯನಕಟ್ಟೆ ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ - ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044,  99800 85616 ತೆಂಗಿನಕಾಯಿ ತೆಗೆಯುತ್ತಿದ್ದಾಗ ವಿದ್ಯುತ್ ಲೈನ್ ಗೆ ದೋಟಿ ತಾಗಿ  ವ್ಯಕ್ತಿ ಮೃತಪಟ್ಟ ಘಟನೆ ಇಂದು ಸಂಜೆ ಅಯ್ಯನಕಟ್ಟೆಯಿಂದ ವರದಿಯಾಗಿದೆ. ಮೃತ...

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ – ವಾರ್ಷಿಕ 453 ಕೋಟಿ ರೂ. ವ್ಯವಹಾರ ; 1.56 ಕೋಟಿ ರೂ. ಲಾಭಾಂಶ – ಶೇ.15.5 ಡಿವಿಡೆಂಡ್ ವಿತರಣೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದು ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಡ್ಯಾನಿ ಯಳದಾಳು, ರೇಗನ್ ಶೆಟ್ಟಿಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ...

ಮಂಡೆಕೋಲು ದ್ವಾರಕಾನಗರ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ರಚನೆ – ಅಧ್ಯಕ್ಷರಾಗಿ ಮುಕುಂದ ದೇವರಗುಂಡ, ಉಪಾಧ್ಯಕ್ಷರಾಗಿ ವಿಶ್ವನಾಥ ಮುರೂರು, ಕಾರ್ಯದರ್ಶಿಯಾಗಿ ನವೀನ್ ಮುರೂರು

ಮಂಡೆಕೋಲು ಗ್ರಾಮದ ಮುರೂರು - ದೇವರಗುಂಡ ದ್ವಾರಕಾನಗರದ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಸೆ. 14ರಂದು ನಡೆಯಿತು. ಅಧ್ಯಕ್ಷರಾಗಿ ಮುಕುಂದ ದೇವರಗುಂಡ, ಉಪಾಧ್ಯಕ್ಷರಾಗಿ ವಿಶ್ವನಾಥ ಮುರೂರು, ಕಾರ್ಯದರ್ಶಿ ಯಾಗಿ ನವೀನ್ ಮುರೂರು, ಖಜಾಂಜಿ ನವೀನ್ ಡಿ ಆರ್, ಜೊತೆ ಕಾರ್ಯದರ್ಶಿ ಯಾಗಿ ಶಿವಪ್ರಸಾದ್ ಕೊಳಂಬೆ, ಸದಸ್ಯರುಗಳಾಗಿ ಶ್ರವಣ್, ಗೋಪಿನಾಥ್ ನಾಯರ್, ಹರ್ಷಲ್...

ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಕು.ಸುಶ್ಮಿತಾ ಅವರಿಗೆ ಅಭಿನಂದನೆ

ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಘಟಕದ ವತಿಯಿಂದ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು. ಸುಶ್ಮಿತಾ ಬೆದ್ರುಪಣೆ ಅವರಿಗೆ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಅರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ಶಾಲು ಹೊದಿಸಿ ಹಣ್ಣು ಹಂಪಲು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು, ವೇದಿಕೆಯ ಪ್ರ.ಕಾರ್ಯದರ್ಶಿ. ತಾ.ಕಾರ್ಯದರ್ಶಿ, ತಾಲೂಕು ಮಾಜಿ ಕಾರ್ಯದರ್ಶಿಯವರು ಉಪಸ್ಥಿತರಿದ್ದರು....

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ – ವಾರ್ಷಿಕ 118 ಕೋಟಿ ರೂ. ವ್ಯವಹಾರ ; 40,02,524 ರೂ. ಲಾಭಾಂಶ – ಶೇ.09 ಡಿವಿಡೆಂಡ್ ವಿತರಣೆ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಎಲ್ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ರವರು ವಾರ್ಷಿಕ ವರದಿ ವಾಚಿಸುತ್ತಾ “ಸಂಘವು ವಾರ್ಷಿಕ 118 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 40,02,524 ರೂಪಾಯಿ...

ಫ್ರೆಂಡ್ಸ್ ಸಮಾಹಾದಿ ಆಶ್ರಯದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಬಿಡುಗಡೆ

ಫ್ರೆಂಡ್ಸ್ ಸಮಾಹಾದಿ ಮುರುಳ್ಯ ಇದರ ಆಶ್ರಯದಲ್ಲಿ ಸೆ.21ರಂದು ನಡೆಯುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಶಾಸಕಿ ಕುಮಾರಿ  ಭಾಗೀರಥಿ ಮುರುಳ್ಯ ಅವರಿಗೆ ನೀಡುವ ಮೂಲಕ  ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಸಮಾಹಾದಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ “ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ”

ಕರ್ನಾಟಕ ಭಾವೈಕ್ಯ ಪರಿಷತ್ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜೊತೆಯಾಗಿ ಸೆ-14 ರಂದು ಮಂಗಳೂರಿನ ದೇರಳಕಟ್ಟೆಯ ನವಾಝ್ ಬಿಲ್ಡಿಂಗ್ನ ಸಭಾಂಗಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಅರ್ಥಗರ್ಭಿತ ಮೂರು ಚುಟುಕುಗಳನ್ನು ವಾಚಿಸಿದ ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಣ್ಯ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೈಸೂರಿನ ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್ ತಂಡದಿಂದ ಮಂಡೆಕೋಲು ಅರಿವು ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮೈಸೂರಿನ ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್ ತಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್ ನ ಗ್ರಂಥಾಲಯದ ಯಕ್ಷಗಾನ ತಂಡದ ಎಲ್ಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಈ ತಂಡದ ಸದಸ್ಯರಾದ ಪ್ರೋಪಸರ್ ಪುರುಷೋತ್ತಮ್ ಅಗ್ನಿ, ಚಿನ್ನೂ ಪಿಚ್ಚರ್ಸ್ ತಂಡದ ನಿರ್ದೇಶಕರಾದ ರಾಘುನಾಯಕ್ , ತಂಡದ ಸದಸ್ಯರಾದ ಶ್ರೀವತ್ಸಾ, ಡಾ ಸ್ವಾತಿ, ಡಾ ತನ್ಮಯಿಯವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.  ತಂಡದ...
Loading posts...

All posts loaded

No more posts

error: Content is protected !!