Ad Widget

ಪೇರಡ್ಕ ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ ಸಾಮೂಹಿಕ ಪ್ರಾರ್ಥನೆ

ಗೂನಡ್ಕ ಪೇರಡ್ಕ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರಿದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು. ಸ್ಥಳೀಯ ಮಸೀದಿ ಖತೀಬರಾದ ಸುಹೇಲ್ ದಾರಿಮಿ ನೇತೃತ್ವವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜಮಾಹತ್ ಸದಸ್ಯರು,ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊರೋನವೈರಸ್ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಂಗಮದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು.

ಎಡಮಂಗಲ : ಶಿಕ್ಷಕಿ ತಾರಾವತಿ ನಿವೃತ್ತಿ

ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ತಾರಾವತಿ ಎ ಜು .31 ರಂದು ಸೇವೆಯಿಂದ ನಿವೃತ್ತರಾದರು. ಎಡಮಂಗಲ ಗ್ರಾಮದ ದೇವಸ್ಯ ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ತಿಮ್ಮಪ್ಪ ಗೌಡ ದೇವಸ್ಯ ಇವರ ಪತ್ನಿಯಾದ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ . ಇವರು ಗುತ್ತಿಗಾರು ಗ್ರಾಮದ ಆರ್ನೋಜಿ...
Ad Widget

ಕೇರ್ಪಳ ಪಯಸ್ವಿನಿ ಯುವಕ ಮಂಡಲದಿಂದ ಶ್ರಮದಾನ – ರಸ್ತೆ ದುರಸ್ತಿ

ಪಯಸ್ವಿನಿ ಯುವಕ ಮಂಡಲ ಕೇರ್ಪಳದ ಸದಸ್ಯರಿಂದ ಕೋರ್ಟ್ ಸಮೀಪದಿಂದ ಕುರುಂಜಿಗುಡ್ಡೆಗೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ಜುಲೈ 26 ರಂದು ದುರಸ್ತಿಗೊಳಿಸಿದರು. ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ, ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ ನೇತೃತ್ವ ವಹಿಸಿದ್ದರು. ಈ ಕಾರ್ಯದಲ್ಲಿ ದಯಾನಂದ್ ಕೇರ್ಪಳ, ವಿನ್ಯಾಸ ಕುರುಂಜಿ,ಮನೋಜ್, ಸುಧೀರ್, ದಯಾನಂದ ಕೇರ್ಪಳ, ಮೋಹನ ಕೇರ್ಪಳ, ಗೋಪಾಲ ನಡುಬೈಲು, ಲಕ್ಷ್ಮೀಶ...

ಗೂನಡ್ಕ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ವತಿಯಿಂದ ರೋಗಗಳ ಬಗ್ಗೆ ಜಾಗೃತಿ ಕರ ಪತ್ರ ಬಿಡುಗಡೆ

ಡೆಂಗ್ಯೂ, ಮಲೇರಿಯಾ, ಮತ್ತು ಕೊರೋಣ ರೋಗಗಳ ಉಲ್ಬಣ, ಹರಡುವಿಕೆ ಮತ್ತು ತಡೆಗಟ್ಟುವಿಕೆ ಬಗ್ಗೆ ಜನ ಜಾಗೃತಿ ಮೂಡಿಸಲು ಮತ್ತು ಪರಿಸರ ಶುಚಿತ್ವದ ಪ್ರಾಮುಖ್ಯತೆ ತಿಳಿಯಪಡಿಸಲು ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ರಿಲೀಫ್ ಸರ್ವಿಸ್ ಗೂನಡ್ಕ ವತಿಯಿಂದ ಪವಿತ್ರ ಈದುಲ್ ಅಝ್ಹಾ ದಿನದಂದು ಕರ ಪತ್ರ ಬಿಡುಗಡೆ ಗೊಳಿಸಲಾಯಿತು.ಸ್ಥಳೀಯ ಜಮಾಅತ್ ಉಪಾಧ್ಯಕ್ಷ ಅಶ್ರಫ್...

ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ಈದ್ ಆಚರಣೆ

ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಸ್ಥಳೀಯ ಜಮಾ ಅತರು ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ನಿರ್ವಹಿಸಿದರು. ನಮಾಜಿನ ನಂತರ ಮಹಾಮಾರಿ ಕರೋನವೈರಸ್ ನಿರ್ಮೂಲನಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಮಾಜಿನಲ್ಲಿ ಸಾಮಾಜಿಕ ಅಂತರವನ್ನು ಬಳಸಿಕೊಂಡು ಮೂರು ಹಂತವಾಗಿ ನಮಾಜ್ ನಿರ್ವಹಿಸಿದರು.

ಕ್ಯಾಂಪ್ಕೋ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(31.07.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

*ಪೈಂಬೆಚ್ಚಾಲು ಸರಳ ಸಂಭ್ರಮದ ಬಕ್ರೀದ್ ಆಚರಣೆ* *ಸಮಸ್ಯೆಗಳು ಎದುರಾದಾಗ ಎದೆಗುಂದದೆ, ಆತ್ಮಸ್ಥೈರ್ಯ ದಿಂದ ಎದುರಿಸಿ; ಅಬ್ದುನ್ನಾಸಿರ್ ಸುಖೈಫಿ.*

ಪೈಂಬೆಚ್ಚಾಲು; ತ್ಯಾಗ ಬಲಿದಾನಗಳ ಮಹಾ ಸಂಕೇತವಾದ ಬಕ್ರೀದ್ ಹಬ್ಬವನ್ನು , ಪೈಂಬೆಚ್ಚಾಲಿನಲ್ಲಿ ಸರ್ಕಾರದ ನಿಯಮಗಳನ್ನೂ, ಉಲಮಾಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಹಳ ಸರಳ ಸಂಭ್ರಮದಿಂದ ಆಚರಿಸಲಾಯಿತು.   ಪೆರ್ನಾಳ್ ನಮಾಝ್ ಹಾಗು ಖುತುಬ ಕ್ಕೆ  ಖತೀಬ್ ಉಸ್ತಾದ್ ಬಹು ಅಬ್ದುನ್ನಾಸಿರ್ ಸುಖೈಫಿ ನೇತೃತ್ವ ನೀಡಿದರು.    ಪೆರ್ನಾಳ್ ಸಂದೇಶ ಭಾಷಣ ಮಾಡಿದ ಅವರು ಸಮಸ್ಯೆಗಳು, ಸಂಕಷ್ಟಗಳು  ಸದಾ ಮನುಷ್ಯರನ್ನು...

*ಸುಳ್ಯ ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ*

ಮುಸಲ್ಮಾನ ಬಾಂಧವರ ಪವಿತ್ರ ಹಬ್ಬಗಳಲ್ಲಿ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಬಕ್ರೀದ್ ಹಬ್ಬವು ಇಂದು ತಾಲೂಕಿನಾದ್ಯಂತ ಸಂಭ್ರಮದ ಕಳೆಯನ್ನು ಕಂಡಿತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಮಸೀದಿಗಳ ದ್ವಾರಗಳು ಇಂದು ತೆರೆಯಲ್ಪಟ್ಟವು.  ಈ ಬಾರಿಯ ಹಬ್ಬದ ನಮಾಜಿನಲ್ಲಿ ಮಸೀದಿಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರಕಾರವು ಈಗಾಗಲೇ ಆದೇಶವನ್ನು ನೀಡಿದ್ದು, ತಾಲೂಕಿನ ಎಲ್ಲಾ ಮಸೀದಿಗಳ ಆಡಳಿತ...

ಚೆನ್ನಾವರ ಎಸ್ ವೈಎಸ್ ಎಸ್ಸೆಸ್ಸೆಫ್ ವತಿಯಿಂದ ಈದ್ ಕಿಟ್ ವಿತರಣೆ

ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಈದುಲ್ ಅಝ್ಹಾ ಪ್ರಯುಕ್ತ 50 ಕುಟುಂಬಗಳಿಗೆ ಈದ್ ಆಚರಿಸಲು ಬೇಕಾದ ತುಪ್ಪಕ್ಕಿ,ತುಪ್ಪ , ಸಕ್ಕರೆ ಪಾನೀಯಪದಾರ್ಥ, ತರಕಾರಿ, ಮಸಾಲ ಪದಾರ್ಥಗಳನ್ನೊಳಗೊಂಡ ಕಿಟ್ ವಿತರಿಸಲಾಯ್ತು.ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ.ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ...

ಪಂಜ ಕೋವಿಡ್ ಕಾರ್ಯಪಡೆ ಸಭೆ

ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯ ಪಡೆಯ ಸಭೆಯು ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು . ಪಂಚಾಯತ್ ಆಡಳಿತಾಧಿಕಾರಿ ಡಾ . ದೇವಿಪ್ರಸಾದ್ ಕಾನತ್ತೂರ್ , ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಮಂಜುನಾಥ್ , ಪಿಡಿಒ ಮಣಿಯಾನ ಪುರುಷೋತ್ತಮ , ಕಾರ್ಯದರ್ಶಿ ಪದ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು .
Loading posts...

All posts loaded

No more posts

error: Content is protected !!