Ad Widget

ಪಂಜ ನಾಡಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಾನ್ಯ ಉಪ ತಹಶೀಲ್ದಾರರವರ ಅಧ್ಯಕ್ಷತೆಯಲ್ಲಿ ಪಂಜ ನಾಡಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು . ಸ್ಥಳದಲ್ಲಿ ಪಂಜ ಹೋಬಳಿ ಕಂದಾಯ ನಿರೀಕ್ಷಕರು ಮತ್ತು ಐವತ್ತೊಕ್ಲು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಂಜ ನಾಡ ಕಛೇರಿ ಯ ಗ್ರಾಮ ಸಹಾಯಕರು ಮತ್ತು ಐವತ್ತೊಕ್ಲು ಗ್ರಾಮ ಸಹಾಯಕರು ಮತ್ತು ದೇವಚಳ್ಳ ಗ್ರಾಮ ಸಹಾಯಕರು ಮತ್ತು ಪಂಜ ನಾಡಕಛೇರಿಯ ಡಾಟಾ ಎಂಟ್ರಿ...

ಗುತ್ತಿಗಾರು ಸಹಕಾರಿ ಸಂಘದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ – ನೂತನ ಧ್ವಜಸ್ತಂಭ ಉದ್ಘಾಟನೆ – ಸನ್ಮಾನ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಿದರು. ನೂತನವಾಗಿ ನಿರ್ಮಾಣಗೊಂಡ ಧ್ವಜಸ್ತಂಭ ವನ್ನು ಮೊಗ್ರದ ಹಿರಿಯ ಭೂತರಾಧಕ ದುಗ್ಗಣ್ಣ ಅಜಿಲ ಉದ್ಘಾಟಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ 615 ಅಂಕ ಪಡೆದಿರುವ ಸಾಗರಿಕ ಪೂಜಾರಿಕೋಡಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ...
Ad Widget

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಟೌನ್ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಟೌನ್ ಶಾಖೆ ವತಿಯಿಂದ 74 ನೇ ಸ್ವತಂತ್ರೊತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ರೋಟರಿ ಮಾಜಿ ಅಧ್ಯಕ್ಷರಾದ ಬಾಪು ಸಾಹಿಬ್ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ವಹಿಸಿದರು. ಉನೈಸ್ ಮುಸ್ಲಿಯಾರ್ ದುವಾದೊಂದಿಗೆ ಧನ್ಯಗೊಳಿಸಿದರು.ಮುಖ್ಯ...

ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ದ್ವಾಜಾರೋಹಣವನ್ನು ಅಬ್ದುಲ್ ಮಜೀದ್ ಕೆಬಿ ಮತ್ತು ನಿವೃತ್ತ ಫಾರೆಸ್ಟರ್ ಕುಶಾಲಪ್ಪ ಗೌಡರವರು ನೆರವೇರಿಸಿ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಶೋಭಾರವರು ಎಲ್ಲರನ್ನು ಸ್ವಾಗತಿಸಿದರು .ಗಾಂಧಿನಗರ ಶಾಲಾ ವಿದ್ಯಾರ್ಥಿನಿಗಳು ರಾಷ್ಟ್ರಗೀತೆ ಹಾಡಿದರು.

ಬೆಳ್ಳಾರೆ ಪಾಪ್ಯುಲರ್ ಫ್ರಂಟ್ ವತಿಯಿಂದ ಸ್ವಾತಂತ್ರ್ಯೋತ್ಸವ

ಬೆಳ್ಳಾರೆ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ಳಾರೆ ವಿಭಾಗ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಬೆಳ್ಳಾರೆ ವಿಭಾಗ ಅಧ್ಯಕ್ಷ ಶಹೀದ್ ಎಂ ಧ್ವಜಾರೋಹಣ ನೆರವೇರಿಸಿದರು. ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಬೆಳ್ಳಾರೆ ವಲಯ ಅಧ್ಯಕ್ಷ ಸಿದ್ದೀಖ್ , ಉಪಾಧ್ಯಕ್ಷ...

ಐವರ್ನಾಡು ಗ್ರಾಮ ಪಂಚಾಯತ್ 74 ನೇ ಸ್ವಾತಂತ್ರೋತ್ಸವ ಆಚರಣೆ

ಐವರ್ನಾಡು ಗ್ರಾಮ ಪಂಚಾಯತ್ ಆವರಣದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಯು.ಡಿ ಶೇಖರ್ ಧ್ವಜಾರೋಹಣ ಮಾಡುವುದರ ಮೂಲಕ 74 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಿಕ್ಷಾ ಹಾಗೂ ವಾಹನ ಚಾಲಕ ಮಾಲಕರು, ಸಂಘ ಸಂಸ್ಥೆಯ ಸದಸ್ಯರು , ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯರು ,ಅಂಗಡಿ ಮಾಲಕರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂಧಿ...

ದಬ್ಬಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಹಣ್ಣಿನ ಗಿಡ ನಾಟಿ

ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಸಂಪಾಜೆ ವಲಯ ದಬ್ಬಡ್ಕ ಅರಣ್ಯ ಉಪವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಬ್ಬಡ್ಕ ಇಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದಬ್ಬಡ್ಕ ಉಪ ವಲಯದ ಅರಣ್ಯ ಸಿಬ್ಬಂದಿಗಳು ಮತ್ತು ಶಾಲಾ ಎಸ್.ಡಿ. ಯಂ. ಸಿ ಸದಸ್ಯರು ಹಾಜರಿದ್ದರು.

ಗೂನಡ್ಕ ಅಲ್ ಅಮೀನ್ ವತಿಯಿಂದ ಸಂತಾಪ ಮತ್ತು ಪ್ರಾರ್ಥನೆ

ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ಇದರ ಸಮಿತಿ ಸದಸ್ಯರಾಗಿ, ಸಕ್ರೀಯ ಕಾರ್ಯಕರ್ತರಾಗಿ, ಉತ್ತಮ ಒಡನಾಟ ಹೊಂದಿ ನಮ್ಮನ್ನಗಲಿದ ಮಹಮೂದ್ ದೊಡ್ಡಡ್ಕ ಅವರಿಗೆ ಸಂತಾಪ ಸೂಚನೆ ಹಾಗೂ ಪ್ರಾರ್ಥನೆ ಅಲ್ ಅಮೀನ್ ವತಿಯಿಂದ ಸಮಿತಿಯ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬ್ ಮುಹಮ್ಮದಲೀ ಸಖಾಫಿ ನೇತೃತ್ವ ವಹಿಸಿ, ಜಮಾಅತ್...

ಮಂಡೆಕೋಲು ಜುಮಾ ಮಸ್ಜಿದ್ ನಲ್ಲಿ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರ ದಿನಾಚರಣೆ

ಮಂಡೆಕೋಲು ಜುಮ್ಮಾ ಮಸ್ಜಿದ್ ಆವರಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಅನ್ವರ್ ದಾರಿಮಿ ಅಜ್ಜಾವರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಮಾತ್ ಅಧ್ಯಕ್ಷ ನಾಸಿರ್ ಸಾಲೆಕರ್, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಎಸ್ಕೆಎಸ್ಸೆಸ್ಸೆಫ್ ಮಂಡೆಕೋಲು ಶಾಖಾ ಕೋಶಾಧಿಕಾರಿ ಸಮದ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಸಂಪಾಜೆ ವಲಯ ಅರಣ್ಯ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಯಲ್ಲಿ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ವಲಯ ಅರಣ್ಯ ಅಧಿಕಾರಿ ಯಾದ ಮಧುಸೂದನ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Loading posts...

All posts loaded

No more posts

error: Content is protected !!