Ad Widget

ನಾಳೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸುಳ್ಯಕ್ಕೆ

ನಾಳೆ (ಆ. 16) ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯಕ್ಕೆ ಆಗಮಿಸಲಿದ್ದಾರೆ.ಬೆಳಗ್ಗೆ 11 ಕ್ಕೆ ತಾ.ಪಂ.ಸಭಾಂಗಣದಲ್ಲಿ ಮರಳು, ಆನೆ ಕಂದಕ ಮತ್ತಿತರ ವಿಷಯದ ಬಗ್ಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ ಎಂದು ತಹಶಿಲ್ದಾರ್ ಅನಂತ ಶಂಕರ ತಿಳಿಸಿದ್ದಾರೆ.

ಕೊಡಗಿನಲ್ಲಿ ಬೆಳಕು ನೀಡಲು ನಿರಂತರ ಶ್ರಮಿಸುತ್ತಿರುವ ಸುಳ್ಯ ಆನಂದ ಇಲೆಕ್ಟ್ರೀಕಲ್ ತಂಡ

ವ್ಯಾಪಕವಾಗಿ ಕೊಡಗಿನಲ್ಲಿ ಸುರಿದ ಮಳೆಗೆ ನೂರಾರು ವಿದ್ಯುತ್ ಕಂಬಗಳು ಹಾನಿಯಾಗಿ ಜನ ಕತ್ತಲೆಯಲಿದ್ದರು. ಕಳೆದ ಬಾರಿ ಕೂಡ ಕೊಡಗಿನಲ್ಲಿ ವ್ಯಾಪಕವಾಗಿ ಹಾನಿಯಾಗಿದ್ದ ವಿದ್ಯುತ್ ಲೈನ್ ಅನ್ನು ಸುಳ್ಯದ ತಂಡ ದುರಸ್ತಿಪಡಿಸಿತ್ತು. ಈ ಬಾರಿ ಹಾನಿಯಾದ ವಿದ್ಯುತ್ ಲೈನ್,ಕಂಬ ಅಳವಡಿಕೆಯಲ್ಲಿ ಸುಳ್ಯದ ಆನಂದ ಇಲೆಕ್ಟ್ರೀಕಲ್ ತಂಡ ಕಳೆದ 10 ದಿನಗಳಿಂದ ನಿರಂತರ ಸೇವೆ ಒದಗಿಸಿದೆ. ಆ ಮೂಲಕ...
Ad Widget

ಕೋಟೆಮುಂಡುಗಾರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸ.ಹಿ.ಪ್ರಾ. ಶಾಲೆ ಕೋಟೆಮುಂಡುಗಾರು ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ ಧ್ವಜಾರೋಹಣ ನೆರವೇರಿಸಿದರು. ಕಳಂಜ ಗ್ರಾ.ಪಂ.ಮಾಜಿ ಸದಸ್ಯ ಲಕ್ಷ್ಮೀಶ ಕಜೆಮೂಲೆ ಸ್ವಾತಂತ್ರ್ಯೋತ್ಸವ ಭಾಷಣಗೈದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೋಹನಿ, ಅಧ್ಯಾಪಕ ವೃಂದ , ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಬರಡ್ಕ ಅಮೈಮಡಿಯಾರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಉಬರಡ್ಕ ಅಮೈಮಡಿಯಾರು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮಾಧವ ಗೌಡ ಮದಕ ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ.ಸಿ ಅಧ್ಯಕ್ಷ ಲೋಕೇಶ್ ಕೊಟ್ಯಾನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಮುಖ್ಯ ಶಿಕ್ಷಕ ಪದ್ಮನಾಭ ಅತ್ಯಾಡಿ, ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ , ಎಸ್ ಡಿ ಎಂ...

ಮಿತ್ರ ಯುವಕ ಮಂಡಲ (ರಿ) ಕೂಯಿಕುಳಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ

ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯುವಕ ಮಂಡಲ ಕಟ್ಟಡದ ಆವರಣದಲ್ಲಿ ನಡೆಯಿತು. ಕೊರೋನ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ದುಗ್ಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ದುಗ್ಗಲಡ್ಕ ಕಿರಿಯ ಆರೋಗ್ಯ ಸಹಾಯಕಿ ಶಶಿಕಲಾ ಭಾಗವಹಿಸಿದ್ದರು. ಯುವಕ...

ಮೂವಪ್ಪೆ: ಶಾಲೆಯಲ್ಲಿ‌ ಸ್ವಾತಂತ್ರ್ಯೋತ್ಸವ

ಸರಕಾರಿ ಕಿರಿಯ ಪ್ರಾಥಮಿಕ ಮೂವಪ್ಪೆ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ವಿಠಲ ಗೌಡ, ವಿದ್ಯಾಭಿಮಾನಿ ಶಿವರಾಮ ಉಪಾದ್ಯಾಯ, ನಾಮ ನಿರ್ದೇಶಿತ ಸದಸ್ಯಗಣೇಶ್ ಪೆರ್ಲೊಡಿ, ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ನಿರ್ಮಲ ಕೆ ಎಂ, ಹಾಗೂ ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಧ್ವಜಾರೋಹಣವನ್ನು ಶಿವರಾಮ ಉಪಾಧ್ಯಾಯ...

ಮಿತ್ರ ಯುವಕ ಮಂಡಲ ಕೂಯಿಕುಳಿ 74 ನೇ ಸ್ವಾತಂತ್ರೋತ್ಸವ ಆಚರಣೆ

ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯುವಕ ಮಂಡಲ ಕಟ್ಟಡದ ಆವರಣದಲ್ಲಿ ನಡೆಯಿತು. ಕೊರೋನ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ದುಗ್ಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ದುಗ್ಗಲಡ್ಕ ಕಿರಿಯ ಆರೋಗ್ಯ ಸಹಾಯಕಿ ಶಶಿಕಲಾ ಭಾಗವಹಿಸಿದ್ದರು. ಯುವಕ...

ಕೆ.ಪಿ.ಎಸ್.ಬೆಳ್ಳಾರೆ : ಸ್ವಾತಂತ್ರ್ಯೋತ್ಸವ

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಟ್ಟಿತು. ಸಂಸ್ಥೆಯ ಪ್ರಾಂಶುಪಾಲರಾದರು ಹಸೀನಾ ಬಾನು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಉಮಾಕುಮಾರಿ, ಉಪನ್ಯಾಸಕರು, ಶಿಕ್ಷಕ ವೃಂದ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೇದಿನಡ್ಕ: ಸ್ವಾತಂತ್ರ್ಯ ದಿನಾಚರಣೆ‌

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕದಲಿ 74 ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಯಾಳನ್ ಧ್ವಜಾರೋಹಣ ನೆರವೇರಿಸಿದರು. ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಶೇಖರ ಉಪಸ್ಥಿತರಿದ್ದರು. ಹಾಗೂ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಮೇದಿನಡ್ಕ ಯುವಕರು ಹಾಗೂ ಮೇದಿನಡ್ಕ ಸಾರ್ವಜನಿಕರು ಉಪಸ್ಥಿತರಿದ್ದರು. ಸತೀಶ ಮೇದಿನಡ್ಕ ಹಾಗೂ...

ಅಯ್ಯನಕಟ್ಟೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ.ಉ.ಹಿ.ಪ್ರಾ.ಶಾಲೆ ಅಯ್ಯನಕಟ್ಟೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಾಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ ಸತೀಶ್ಚಂದ್ರ ಪಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶೀಲಾವತಿ, ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!