Ad Widget

ಆ‌. 29 ರಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಮಹಾಸಭೆ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ)ಇದರ ಮಹಾಸಭೆ ಆ.29 ರಂದು ಶನಿವಾರ ಅಪರಾಹ್ನ 2-30ಕ್ಕೆ ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸಂಘದ ಎಲ್ಲಾ ಗೌರವಾನ್ವಿತ ಸದಸ್ಯರು ಮಾಸ್ಕ್ ಧರಿಸಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಘಟಕರು ತಿಳಿಸಿದ್ದಾರೆ.

ಕಡಬ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರಿ ಪ್ರೌಢಶಾಲೆ ಕಡಬದಲ್ಲಿ ಆಚರಿಸಲಾಯಿತು. ಸರಳವಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ ಕಡಬ ತಾ.ಪಂ.ಕ್ಷೇತ್ರದ ಮಾಜಿ ಸದಸ್ಯರಾದ ಫಝಲ್ ಕೋಡಿಂಬಾಳ ಧ್ವಜಾರೋಹಣಗೈದರು. ಸಂಸ್ಥೆಯ ಸಹಶಿಕ್ಷಕರಾದ ಅಬ್ದುಲ್ ಖಾದರ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ವೇದಾವತಿ ಮತ್ತು ಶಿಕ್ಷಕವೃಂದದವರು ಉಪಸ್ಥಿತರಿದ್ದರು.
Ad Widget

ಕೆನರಾ ಬ್ಯಾಂಕ್ ಸಂಪಾಜೆ ಮತ್ತು ಕಲ್ಲುಗುಂಡಿ ಸೈಬರ್ ಸ್ಪಾಟ್ ಜನಸೇವಾ ಕೇಂದ್ರದ ವತಿಯಿಂದ ಸ್ವಾತಂತ್ರ ದಿನಾಚರಣೆ

ಕೆನರಾ ಬ್ಯಾಂಕ್ ಸಂಪಾಜೆ ಮತ್ತು ಸೈಬರ್ ಸ್ಪಾಟ್ ಜನಸೇವಾ ಕೇಂದ್ರ ಕಲ್ಲುಗುಂಡಿಯಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಯನ್ನು ಆಚರಿಸಲಾಯಿತು. ಭಾರತೀಯ ಭೂಸೇನೆ ಯ ಹವಾಲ್ದಾರ್ ನಿತಿನ್ ಎನ್ ಡಿ ರವರು ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕಿನ ಮೆನೇಜರ್ ಶ್ರೀಮತಿ ರಾಜೀವಿ, ಸೈಬರ್ ಸ್ಪಾಟ್ ನ ನಿರ್ದೇಶಕರಾದ ಕಿಶೋರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮಂಜುನಾಥ್ ಕ್ಲಿನಿಕ್...

ದರ್ಖಾಸ್ತು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಜಾತಾ ನೆರವೇರಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ನಟರಾಜ್ ಸ್ವತಂತ್ರ ದಿನೋತ್ಸವ ಭಾಷಣಗೈದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಪಲ್ಲವಿ ಪಿ ಸ್ವಾಗತಿಸಿ, ಸಹಶಿಕ್ಷಕಿ ಪ್ರೇಮಾ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು...

ಸುಳ್ಯದಲ್ಲಿ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ – ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಲು ಸಿದ್ದರಾದ 243 ಜನ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.), ಸಹಕಾರ ಭಾರತಿ ದ.ಕ., ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆದ  ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಸಮಾರೋಪ ಆ.15 ರಂದು ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್ ಅಂಗಾರ ವಹಿಸಿದ್ದರು. ಮುಖ್ಯ ಅತಿಥಿಯಾಗಿ...

ಹರಿಹರ ಪಲ್ಲತ್ತಡ್ಕ ಸಹಕಾರಿ ಸಂಘದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಹರಿಹರವ ಪಲ್ಲತ್ತಡ್ಕ ಕೊಲ್ಲಮೊಗ್ರ ಪ್ರಾ.ಕೃ.ಪ.ಸ.ಸಂಘದ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನೂಪ್ ಮಲ್ಲಾರ ಮತ್ತು ಉಪಾಧ್ಯಕ್ಷರಾದ ಮಣಿಕಂಠ ಕೊಳಗೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ಸಿಬ್ಬಂದಿ ವರ್ಗ ಮತ್ತು ಸಂಸ್ಥೆಯ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.

ಮಡಪ್ಪಾಡಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗೇಶ್ ಕುಚ್ಚಾಲ ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ,ಶಿಕ್ಷಕರು, ಗ್ರಾ.ಪಂ.ಸಿಬ್ಬಂದಿಗಳು,ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ, ವಂದಿಸಿದರು.

ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸಿ.ಜಿಜಿ ರೋಸ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು "ಸ್ವಾತಂತ್ರ್ಯ ದಿನಾಚರಣೆ ಎಲ್ಲಾ ಭಾರತೀಯರ ಹಬ್ಬವಾಗಿದೆ. ಸ್ವಾತಂತ್ರಕ್ಕಾಗಿ ಅನೇಕ ವ್ಯಕ್ತಿಗಳ ಹೋರಾಟದ ಫಲವಾಗಿ ನಾವು ಇಂದು ಸ್ವಚಂದವಾಗಿ, ಸ್ವತಂತ್ರವಾಗಿ ಬದುಕುತ್ತಿದ್ದೇವೆ.ಇಂತಹ ಮಹಾನ್ ಹೋರಾಟಗಾರರನ್ನು ಸದಾ...

ದರ್ಖಾಸ್ತು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಜಾತಾ ನೆರವೇರಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ನಟರಾಜ್ ಸ್ವತಂತ್ರ ದಿನೋತ್ಸವ ಭಾಷಣಗೈದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಪಲ್ಲವಿ ಪಿ ಸ್ವಾಗತಿಸಿ, ಸಹಶಿಕ್ಷಕಿ ಪ್ರೇಮಾ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು...

ಸಂಪಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ

ಸಂಪಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬದರುಲ್ ಹುದಾ ಸ್ವಲಾತ್ ಕಮಿಟಿ ಅಧ್ಯಕ್ಷರಾದ ಬೊಂಬಾಯಿ ಖಾದರ್ ದ್ವಜಾ ರೋಹಣ ನೆರವೇರಿಸಿದರು. ಖತೀಬ್ ಉಸ್ತಾದ್ ಜಮಾಲ್ ಅಮಾನಿ , ಜಮಾಯತ್ ಕಮಿಟಿ, ಸ್ವಲಾತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!