Ad Widget

ರಾಜ್ಯಮಟ್ಟದ ಪ್ರತಿಭೆ ಅನುಷ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ಕಟೀಲ್ ಅಭಿನಂದನೆ

ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸಂಜೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ, ಗ್ರಾಮೀಣ ಪ್ರತಿಭೆ ಅನುಷ್ ಎ.ಎಲ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.ಈ ವೇಳೆ ಕಟೀಲ್ ರೊಂದಿಗೆ ಶಾಸಕ ಎಸ್.ಅಂಗಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ತಾಲೂಕು ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಸಹಕಾರಿ...

ಚೈತನ್ಯ ಸಂಪ್ಯಾಡಿ ಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 583 ಅಂಕ

ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಸ್ಕೂಲ್ ನೆಲ್ಲಿತೀರ್ಥ ಮಂಗಳೂರು ಇಲ್ಲಿನ ವಿದ್ಯಾರ್ಥಿ ಚೈತನ್ಯ ಎಸ್ ಕೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 583 ಅಂಕ ಪಡೆದು, (93.28%) ತೇರ್ಗಡೆ ಹೊಂದಿರುತ್ತಾಳೆ. ಇವಳು ಹಾಲೆಮಜಲು ಸಂಪ್ಯಾಡಿ ಕವಿತಾ ಕರುಣಾಕರ ಇವರ ಪುತ್ರಿ.
Ad Widget

ಅಮರ ಸುದ್ದಿ ವರದಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು – ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಬಿಸಿನೀರಿಗಾಗಿ ನಾಳೆಯೇ ಗೀಸರ್ ಅಳವಡಿಕೆಗೆ ಸೂಚನೆ

ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿರುವ ಪೇಷೆಂಟ್‌ಗಳಿಗೆ ಸ್ನಾನಕ್ಕೆ ಬಿಸಿನೀರು ಸಿಗದಿರುವ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿದ ಬೆನ್ನಲ್ಲೇ ಸಚಿವರು ಆರೋಗ್ಯಾಧಿಕಾರಿಗಳಿಗೆ ನಾಳೆಯೇ ಗೀಸರ್ ಅಳವಡಿಸಲು ಸೂಚಿಸಿದ್ದಾರೆ. ಇಂದು ಕಾರ್ಯನಿಮಿತ್ತ ಸುಳ್ಯಕ್ಕೆ ಬಂದಾಗ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಳೆಯೇ ಸಮಸ್ಯೆ ನಿವಾರಿಸುವುದಾಗಿ ಹೇಳಿದರಲ್ಲದೆ ತಾಲೂಕು ವೈದ್ಯಾಧಿಕಾರಿಯವರನ್ನು...

ರಾಮನ ಆದರ್ಶ ಕೃಷ್ಣನ ಸಂದೇಶದ ಪಾಲನೆ ಯುವಕರ ಆದ್ಯತೆಯಾಗಬೇಕು -ಆಂಜನೇಯ ರೆಡ್ಡಿ

ಸಾಮಾಜಿಕ ವ್ಯವಸ್ಥೆಯು ಹಳಿ ತಪ್ಪದಿರಲು ಯುವಜನತೆ ರಾಮನ ಆದರ್ಶ ಕೃಷ್ಣನ ಸಂದೇಶಗಳನ್ನು ಪಾಲಿಸುವಲ್ಲಿ ಯುವಕರು ಮುಂದಡಿಯಿಡಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸದ್ಗುಣಗಳನ್ನು ಮೈಗೂಡಿಸಿಕೊಂಡ ಯುವಕರ ದಂಡು ಕಾರ್ಯಪ್ರವೃತ್ತರಾಗಬೇಕಿದೆ. ಆ ನಿಟ್ಟಿನಲ್ಲಿ ಭಾವೈಕ್ಯ ಯುವಕ ಮಂಡಲವು ಒಂದು ಹೆಜ್ಜೆ ಮುಂದೆ ಇಟ್ಟಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಬೆಳ್ಳಾರೆ ಪೋಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು...

ಅರಂತೋಡು ವಲಯ ಕಾಂಗ್ರೆಸ್ ಸಭೆ

ಅರಂತೋಡು ವಲಯ ಕಾಂಗ್ರೆಸ್ ಸಭೆಯು ವಲಯ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ಅಡ್ಕಬಳೆ ಅಧ್ಯಕ್ಷತೆಯಲ್ಲಿ ಆ.16 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್, ದಿನೇಶ್ ಗುತ್ತಿಗಾರ್, ಅರಂತೋಡು ಗ್ರಾಮ ಪಂಚಾಯಿತ್ ಮಾಜಿ ಸದಸ್ಯ ಇದ್ದೀನ್ ಕುಂಞ,ಸುಳ್ಯ ವಿಧಾನ ಸಭಾ...

ಕೂತ್ಕುಂಜ, ಪಂಬೆತ್ತಾಡಿಯಲ್ಲಿ ಬೆಳೆ ಸಮೀಕ್ಷೆ ಗೆ ಆ್ಯಪ್ ಬಗ್ಗೆ ಮಾಹಿತಿ

ಕೂತ್ಕುಂಜ ಹಾಗೂ ಪಂಡೆತ್ತಾಡಿ ಗ್ರಾಮದಲ್ಲಿ ರೈತರ ತೋಟಗಳಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಮುಖಾಂತರ ಬೆಳೆಗಳ ವಿವರ ದಾಖಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆ. 24 ರ ಒಳಗೆ ರೈತರು ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ ಮಾಡಿ ಬೆಳೆಗಳ ವಿವರ ದಾಖಲಿಸುವಂತೆ ಸರಕಾರ ಸೂಚಿಸಿದೆ. ರೈತರಿಗೆ ಈ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ಮಾಡಿ ಕೂತ್ಕುಂಜ...

ರಾಜ್ಯಮಟ್ಟದಲ್ಲಿ ಮಿಂಚಿದ ಅನುಷ್ ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿನಂದನೆ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಿಗ್ಗೆ ಎಸ್‌ಎಸ್‌ಎಲ್‌ಸಿ ರಾಜ್ಯ ಟಾಪರ್ ಅನುಷ್ ಎ.ಎಲ್ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು.ಈ ವೇಳೆ ಅವರೊಂದಿಗೆ ಶಾಸಕ ಎಸ್.ಅಂಗಾರ, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ತಾಲೂಕು ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ...

ಎಣ್ಣೆಮಜಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ.ಕಿ.ಪ್ರಾ.ಶಾಲೆ ಎಣ್ಣೆಮಜಲು ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಚೊಕ್ಕಾಡಿ : ನೂತನ ಸಂಘ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ಳಾರೆ ವಲಯದ ಚೊಕ್ಕಾಡಿ ಒಕ್ಕೂಟದ ಪಾಡಾಜೆ ಎಂಬಲ್ಲಿ ನೂತನವಾಗಿ ಶ್ರೀ ಮಹಾಮಾಯಿ ಪ್ರಗತಿ ಬಂದು ಸಂಘ ರಚನೆಯಾಯಿತು. ಸಂಘದ ಉದ್ಘಾಟನೆಯನ್ನು ಚೊಕ್ಕಾಡಿ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಕೋಟೆಬನ ನೆರವೇರಿಸಿದರು. ವಲಯ ಮೇಲ್ವಿಚಾರಕ ಮುರಳೀಧರ ದಾಖಲಾತಿ ಹಸ್ತಾಂತರಿಸಿ, ಸಂಘದ ನಿಯಮಾವಳಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ...

ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ಶ್ರಮದಾನ

ಮಿತ್ರಬಳಗ (ರಿ.) ಕಾಯರ್ತೋಡಿ ಮತ್ತು ಊರ ದಾನಿಗಳ ಸಹಕಾರದೊಂದಿಗೆ ಇಂದು ಗಾಂಧಿನಗರ ಶಾಲೆ ಹಿಂಭಾಗದ ಕಾಂಕ್ರೀಟ್ ರಸ್ತೆ ಹಾಗೂ ಉಬರಡ್ಕ ರಸ್ತೆಯಿಂದ ಕಾಯರ್ತೋಡಿ ಬೈಲಿಗೆ ಬರುವ ಕಾಂಕ್ರೀಟ್ ರಸ್ತೆ ಜಾರುವ ಸ್ಥಿತಿಯಲ್ಲಿದ್ದ ಕಾರಣ ಬ್ಲೀಚಿಂಗ್ ಪೌಡರ್, ಸುಣ್ಣ ಹಾಗೂ ಮರಳು ಹಾಕಿ ಶುಚಿಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಿತ್ರ ಬಳಗದ ಅಧ್ಯಕ್ಷ ಮಹೇಶ್ ಕುದ್ಪಾಜೆ...
Loading posts...

All posts loaded

No more posts

error: Content is protected !!