Ad Widget

ಬೆಳ್ಳಾರೆ 49ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ (ರಿ)ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವ ಜರುಗಿತು. ಭಕ್ತಿ ಶ್ರದ್ಧೆಯ ಆಚರಣೆಯಿಂದ ಕೂಡಿದ ಗಣೇಶೋತ್ಸವವು ಸರ್ಕಾರದ ನಿಯಾಮಾವಳಿಯನುಸಾರ ಜರುಗಿತು.

ಮುಕ್ಕೂರು ‌: 11 ನೇ ವರ್ಷದ ಗಣೇಶೋತ್ಸವ ಆಚರಣೆ, ವಿಘ್ನ ವಿನಾಯಕನ ಸ್ಮರಣೆಯಿಂದ ಒಳಿತು‌ ಪ್ರಾಪ್ತಿ – ಗೋಪಾಲಕೃಷ್ಣ ಭಟ್ ಮನವಳಿಕೆ

ಮುಕ್ಕೂರು : ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 11 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಮುಕ್ಕೂರು ಶಾಲಾ ವಠಾರದಲ್ಲಿ ಆ.22 ರಂದು ನಡೆಯಿತು.ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ, ಸೀಮಿತ ಸದಸ್ಯರ ಉಪಸ್ಥಿತಿಯಲ್ಲಿ ಗಣಪತಿಯ ಭಾವಚಿತ್ರಕ್ಕೆ ಹೂ, ಫಲ ಪುಷ್ಪ ಗಳಿಂದ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಗತಿಪರ ಕೃಷಿಕ...
Ad Widget

ಎಡಮಂಗಲ ದೇವಸ್ಥಾನದಲ್ಲಿ ಗಣೇಶೋತ್ಸವ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಿಘ್ನ ವಿನಾಯಕ ಪ್ರತಿಷ್ಠಾಪನೆ ನಡೆದು ಮಹಾಪೂಜೆ ನೆರವೇರಿತು.ಸಂಜೆ ವಿಸರ್ಜನೆ ನಡೆಯಲಿದೆ. ಆರ್ಚಕರು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

ಎಣ್ಮೂರು ಶ್ರೀದೇವಿ ಟ್ರೇಡರ್ಸ್ ಶುಭಾರಂಭ

ನಿಂತಿಕಲ್ಲು ಸಮೀಪದ ಎಣ್ಮೂರಿನ ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ಶ್ರೀದೇವಿ ಟ್ರೇಡರ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಅಡಿಕೆ, ತೆಂಗು, ಬಾಳೆ,ಕಾಳುಮೆಣಸು, ರಬ್ಬರ್ ಹಾಗೂ ಕಾಡುತ್ಪತ್ತಿಗಳನ್ನು ಖರೀದಿಸಲಾಗುವುದೆಂದು ಮಾಲಕ ಉದಯ್ ಕುಮಾರ್ ರೈ ಎಣ್ಮೂರುಗುತ್ತು ತಿಳಿಸಿದ್ದಾರೆ.

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಕದಿರು ಪೂಜೆ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಇಂದು ಕದಿರು ಪೂಜೆ ನಡೆಯಿತು

ಎಣ್ಮೂರು : ಜನ್ಯ ಎಂಟರ್ ಪ್ರೈಸಸ್ ಶುಭಾರಂಭ

ಎಣ್ಮೂರಿನ ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ಕಿರಣ್ ಕುಮಾರ್ ಭೀಮಗುಳಿ ಮಾಲಕತ್ವದ ಜನ್ಯ ಎಂಟರ್ ಪ್ರೈಸಸ್ ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ವಿಧದ ಕೃಷಿ ಉಪಕರಣಗಳ ಮಾರಾಟ ಮತ್ತು ಸರ್ವೀಸ್ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಕೋಟೆಮುಂಡುಗಾರು : 29ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ 29ನೇ ವರ್ಷದ ಶ್ರೀಗಣೇಶೋತ್ಸವವನ್ನು ಆಚರಿಸಲಾಯಿತು. ಸರಳ ಹಾಗೂ ಸಾಂಕೇತಿಕ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ   ಆಚರಣೆ ನಡೆಯುತ್ತಿದ್ದು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸೀಮಿತ ಶ್ರದ್ಧಾಳುಗಳು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ 50ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಸುಬ್ರಹ್ಮಣ್ಯ ವತಿಯಿಂದ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ವಿಘ್ನವಿನಾಯಕನ ಭವ್ಯ ವಿಗ್ರಹ ಪ್ರತಿಷ್ಟಾಪನೆ ನಡೆಯಿತು.

ಕೊಲ್ಲಮೊಗ್ರ ಗಣೇಶೋತ್ಸವ, ಸರಳವಾಗಿ ಆಚರಣೆ

ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರ ಇದರ ಆಶ್ರಯದಲ್ಲಿ ಗಣೇಶೋತ್ಸವ ಆಚರಣೆ ಇಂದು ನಡೆಯಿತು. ಬೆಳಿಗ್ಗೆ ಗಣಪತಿ ಪ್ರತಿಷ್ಟೆ ನಡೆದಿದ್ದು ಮಧ್ಯಾಹ್ನ ಮಹಾಪೂಜೆಯ ನಂತರ ವಿಸರ್ಜನೆ ನಡೆಯಿತು.ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಹಾಜರಿದ್ದರು.

ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪಯಸ್ವಿನಿ ನದಿಗೆ ಬಾಗಿನ ಅರ್ಪಣೆ

ಸುಳ್ಯ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಕಲ್ಯಾಣಕ್ಕಾಗಿ ಸುಳ್ಯ ದ ಜೀವ ನದಿ ಪಯಸ್ವಿನಿ ನದಿಗೆ ಬಾಗಿನ ಅರ್ಪಣೆ ಮಾಡಲಾಯಿತು. ನಾಗಪಟ್ಟಣ ಸೇತುವೆ ಬಳಿ ನಡೆದ ಸರಳ ಕಾರ್ಯಕ್ರಮ ದಲ್ಲಿ ನಾಗಪಟ್ಟಣ ಸದಾಶಿವ ದೇವಸ್ಥಾನ ದ ಅರ್ಚಕರು ಪಯಸ್ವಿನಿ ಗೆ ಪೂಜೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಗೋಕುಲ್ ದಾಸ್, ಧರ್ಮ ಪಾಲ...
Loading posts...

All posts loaded

No more posts

error: Content is protected !!