Ad Widget

ಕಂದ್ರಪ್ಪಾಡಿ : ಮೋದಿ ಜನ್ಮದಿನಾಚರಣೆ – ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ

ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಇದರ ಆಶ್ರಯದಲ್ಲಿ ಮೋದಿ ಜನ್ಮದಿನಾಚರಣೆ ಹಾಗೂ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ ಸೆ. 17 ರಂದುಕಂದ್ರಪ್ಪಾಡಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಮಹಾಬಲೇಶ್ವರ ಮುಂಡೋಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ವಹಿಸಿದ್ದರು. ದೊಡ್ಡಣ್ಣ ಕಾಜಿಮಡ್ಕ ಮುಖ್ಯ ಅತಿಥಿಯಾಗಿದ್ದರು. ಯುವಕ...

ಬಾಳಿಲ : ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರ

ಕಳಂಜ - ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತಿ ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇದರ ಜಂಟಿ ಆಶ್ರಯದಲ್ಲಿ ಸೆ.20 ರಂದು ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರವು ಬಾಳಿಲ ಸೊಸೈಟಿಯ ಮಿನಿ ಸಭಾಂಗಣದಲ್ಲಿ ಜರುಗಲಿದೆ. ಶಿಬಿರವು ಬೆಳಗ್ಗೆ 9.30ರಿಂದ ಆರಂಭಗೊಳ್ಳಲಿದ್ದು, ಕಾರ್ಡ್ ಮಾಡಿಸುವವರು ಆಧಾರ್ ಕಾರ್ಡ್...
Ad Widget

ಬಾಳಿಲ : ರೋಜ್ ಗಾರ್ ದಿನಾಚರಣೆ ಮತ್ತು ಅಣಬೆ ಕೃಷಿ ತರಬೇತಿ

ಸುಮಂಗಲ ಸ್ವಸಹಾಯ ಸಂಘ ಬಾಳಿಲ ಮತ್ತು ದ.ಕ.ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ರೋಜ್ ಗಾರ್ ದಿನಾಚರಣೆ ಮತ್ತು ಅಣಬೆ ಕೃಷಿ ತರಬೇತಿಯು ಸೆ.16 ರಂದು ಬಾಳಿಲ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಣಬೆ ಕೃಷಿಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ತೀರ್ಥಾನಂದ ಕೊಡೆಂಕಿರಿಯವರು ತರಬೇತಿ ನೀಡಿದರು. ಪುತ್ತೂರಿನ ನಿತ್ಯ ಫುಡ್ ಪ್ರಾಡಕ್ಟ್ಸ್...

ಗುತ್ತಿಗಾರು: ಅಟೋ ಚಾಲಕ ಸಂಘದಿಂದ ಮೋದಿ ಹುಟ್ಟುಹಬ್ಬದ ಆಚರಣೆ

ಬಿ.ಎಂ.ಎಸ್ ಗುತ್ತಿಗಾರು ವಲಯದ ವತಿಯಿಂದ ಗುತ್ತಿಗಾರು ಅಟೋ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಗುತ್ತಿಗಾರು ಪ್ರಾ.ಕೃ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಪಿ.ಎ.ಸಿ ಬ್ಯಾಂಕ್ ನಿರ್ದೇಶಕ ಬಿ.ಕೆ ಬೆಳ್ಯಪ್ಪ ಗೌಡ, ಕಿಶೋರ್ ಕುಮಾರ್ ಪೈಕ, ರಿಕ್ಷಾ ಚಾಲಕ ಮಾಲಕ‌...

ಚೆಂಬು : ಹರಿಪ್ರಸಾದ್ ಮೇಲೆಮನೆ ಹೃದಯಾಘಾತದಿಂದ ನಿಧನ

ಚೆಂಬು ಗ್ರಾಮದ ಊರುಬೈಲು ಮೇಲೆಮನೆ ಹರಿಪ್ರಸಾದ್ ಸೆ.16 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ , ತಾಯಿ, ಸಹೋದರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಉಡುಪಿಯಲ್ಲಿ ನಡೆದ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿ ಸಮಿತಿ ಸಭೆಗೆ ರಾಜ್ಯ ಉಪಾಧ್ಯಕ್ಷ ಎ.ವಿ ತೀರ್ಥರಾಮ ಭೇಟಿ

ಉಡುಪಿಯಲ್ಲಿ ಸೆ.15 ರಂದು ನಡೆದ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಈ ಸಭೆಗೆ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರು ಹಾಗೂ ಮಂಗಳೂರು ವಿಭಾಗದ ಪ್ರಭಾರಿಗಳು ಆಗಿರುವ ಎ.ವಿ ತೀರ್ಥರಾಮ ಭೇಟಿ ಮಾಡಿದರು. ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಮ್ಮಿಕೊಂಡ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ರೈತ...

ಮೋದಿ ಎಂದರೆ ಸಾಧನೆಯ ಹಾದಿ: ಜನ್ಮದಿನದಂದು ನರೇಂದ್ರ ಬದುಕಿನ ಸಿಂಹಾವಲೋಕನ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು 70ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ದೇಶವಲ್ಲದೆ ಆಚೆಗೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು. ಇವರ ಆಡಳಿತ ವೈಖರಿ, ಮಾತಿನ ಶೈಲಿ ಯುವಪೀಳಿಗೆಯನ್ನು ಹುಚ್ಚೆಬ್ಬಿಸುತ್ತಿದೆ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಛಾತಿಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಇಂದು (ಸೆ.17) ಅವರ 70ನೇ ಜನ್ಮದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಾಮೋದರ...

70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಗಣ್ಯರಿಂದ ಶುಭಾಶಯ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೋದಿಗೆ ಕೇಂದ್ರ ಸಚಿವರು, ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ಮುಖಂಡರು ಸೇರಿದಂತೆ ಹಲವು ಗಣ್ಯರು ಹಾಗೂ ದೇಶದ ಮೂಲೆ-ಮೂಲೆಗಳಲ್ಲಿರುವ ಅಭಿಮಾನಿಗಳು ವಿಶ್‌ ಮಾಡಿದ್ದಾರೆ. ಕೊರೊನಾ ಸೋಂಕಿನ ಅಬ್ಬರ ಇರುವುದರಿಂದ ಈ ಬಾರಿ ಮೋದಿ ಜನ್ಮದಿನದ ಅದ್ಧೂರಿ ಆಚರಣೆ ಇಲ್ಲ. ಬದಲಿಗೆ ಈ ದಿನವನ್ನು...

ಸೆ. 24, 25 – ಮರ್ಕಂಜ ಸೊಸೈಟಿ ವತಿಯಿಂದ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ

ಆಯುಷ್ಮಾನ್ ಭಾರತ್ ಕಾರ್ಡ್ ನೋದಾವಣಾ ಶಿಬಿರಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ಕಾರ್ಡ್ ವಿತರಣಾ ಶಿಬಿರ ಸೆ.24 ಮತ್ತು ಸೆ.25 ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಮಹಾಬಲ ಕಟ್ಟಕೋಡಿ ತಿಳಿಸಿದ್ದಾರೆ.

ಕನಕಮಜಲು : ಸೆ.22 ಮತ್ತು 23 ರಂದು ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸೆ.22 ಮತ್ತು 23 ರಂದು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಅಭಿಯಾನ ಸಹಕಾರಿ ಸಂಘದ ರೈತ ಭವನದಲ್ಲಿ ನಡೆಯಲಿದೆ. ಗ್ರಾಮಸ್ಥರು ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು ಅಧ್ಯಕ್ಷರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!