Ad Widget

ಅಂಗಡಿ ಲೈಸೆನ್ಸ್ ನವೀಕರಣ, ತ್ಯಾಜ್ಯ ಶುಲ್ಕ ಸಂಗ್ರಹಣೆ ನ್ಯಾಯಯುತವಲ್ಲ : ವಿನಯಕುಮಾರ್ ಕಂದಡ್ಕ

ಸುಳ್ಯದ ಎಲ್ಲಾ ವರ್ತಕರು ಕಳೆದ ಎರಡು ತಿಂಗಳಿಂದ ವ್ಯವಹಾರ ಸ್ಥಗಿತ ಗೊಳಿಸಿ ಸಂಕಷ್ಟದಲ್ಲಿರುವಾಗ ಸರಕಾರದ ಆದೇಶದ ಹೆಸರಿನಲ್ಲಿ ವಿಪರೀತ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ವಸೂಲು ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ನಗರ ಬಿಜೆಪಿ ಅಭಿಪ್ರಾಯ ಪಟ್ಟಿದೆ.ಈ ಬಾರಿಯ ಅಂಗಡಿ ಲೈಸೆನ್ಸ್ ನವೀಕರಣಕ್ಕೆ ವರ್ತಕರು ನೀಡಿದ ಸಂದರ್ಭದಲ್ಲಿ ವಿವಿಧ ರೀತಿಯ ವ್ಯವಹಾರಗಳಿಗೆ 600ರೂ ನಿಂದ...

ಸುಳ್ಯ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಎಸ್ ಅಂಗಾರ

ಸುಳ್ಯ ತಾಲೂಕಿನ ಹಲವು ವರ್ಷಗಳ ಕನಸಾಗಿರುವ 110 ಕೆವಿ ವಿದ್ಯುತ್ ವಿತರಣಾ ಸಬ್ ಸ್ಟೆಷನ್ ಕಾಮಗಾರಿಯ ಬಗ್ಗೆ ಕೊರೋನ ವೈರಸ್ ಸಮಸ್ಯೆ ಮುಗಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವುದಾಗಿ ಶಾಸಕ ಅಂಗಾರ ಹೇಳಿದರು.ಮೇ 17ರಂದು ಸುಳ್ಯ ಐ ಬಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಕಾಮಗಾರಿಗೆ ಅರಣ್ಯ ಭೂಮಿ ಮಂಜೂರಾತಿ...
Ad Widget

ಕನಕಮಜಲು: ನಾಡಿಗೆ ಬಂದ ಕಾಳಿಂಗ ಸರ್ಪ ಮರಳಿ ಕಾಡಿಗೆ

ಕನಕಮಜಲ ಗ್ರಾಮದ ಪಂಜಿಗುಂಡಿ ಕಾಲನಿ ಬಳಿ ಮೇ ೧೬ ರಂದು ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ ವಾಗಿತ್ತು. ಸ್ಥಳೀಯ ನಿವಾಸಿಗಳು ಉರಗ ಪ್ರೇಮಿ ಜಾಲ್ಸೂರಿನ ಶ್ಯಾಮ್ ಭಟ್ ಅವರಿಗೆ ತಿಳಿಸಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ಶ್ಯಾಮ್ ಭಟ್ ಕಾಳಿಂಗ ಸರ್ಪವನ್ನು ಮೇ.೧೭ ರಂದು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕ : ಸುಳ್ಯದಲ್ಲಿ ಅಸ್ವಸ್ಥಗೊಂಡಾಗ ಉಪಚರಿಸಿದ ಸ್ಥಳೀಯರು

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಮೇ ೧೭ ನಡೆದಿದೆ. ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ...

ಸಂತೋಷ್ ಡಿಸೋಜ ನಾಯರ್ ಕೆರೆ ನಿಧನ

ಕೂತ್ಕುಂಜ ಗ್ರಾಮದ ನಾಯರ್ ಕೆರೆ ಪಂಜ ಖಾಸಗಿ ಬಸ್ ನಿಲ್ದಾಣದಲ್ಲಿ ಅಮರ ಸುದ್ದಿ ಪತ್ರಿಕೆ ಏಜೆಂಟರಾಗಿದ್ದ ಜೆರಾಲ್ಡ್ ಡಿಸೋಜ ರ ಏಕೈಕ ಪುತ್ರ ಸಂತೋಷ್ ಡಿಸೋಜ (20) ಅಸೌಖ್ಯದಿಂದ ಮೇ.೧೭ ರಂದು ನಿಧನರಾದರು. ಅನಾರೋಗ್ಯಕ್ಕೊಳಗಾಗಿದ್ದ ಸಂತೋಷ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ. ತಂದೆ, ತಾಯಿ ಫಿಲೋಮಿನಾ ರನ್ನುಅಗಲಿದ್ದಾರೆ.

ಮಾವಿನಕಟ್ಟೆ- ಅಚ್ರಪ್ಪಾಡಿ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ ಗೆ ಊರವರ ಸಾಥ್

ಮಾವಿನಕಟ್ಟೆ ಅಚ್ರಪ್ಪಾಡಿ ಹೆಚ್ ಟಿ ವಿದ್ಯುತ್ ಲೈನ್ ಗೆ ತಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಇಲಾಖೆಯ ಜತೆ ಊರವರು ಟ್ರೀಕಟ್ಟಿಂಗ್ ಗೆ ಸಾಥ್ ನೀಡಿದರು. ಇಂತಹ ಕಾರ್ಯ ಎಲ್ಲೇಡೆ ಆದ್ರೆ ನಿರಂತರ ವಿದ್ಯುತ್ ನೀಡಲು ಇಲಾಖೆಗೆ ಸಹಕಾರಿಯಾಗಲಿದೆ . ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಂತಹ ಸಂಕಷ್ಟದಲ್ಲಿಯಾದರೂ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ – ಎಂ ವೆಂಕಪ್ಪ ಗೌಡ ಒತ್ತಾಯ

ದೇಶದ ಜನ ಕೊರೊನ ಹೆಮ್ಮಾರಿಯಿಂದ ಸಂಪೂರ್ಣ ಹೈರಣಾಗಿ ಹೋಗಿದ್ದಾರೆ. ಈ ಕಾಲದಲ್ಲಿ ಜನ ಸಾಮಾನ್ಯನಿಗೆ ಸಹಾಯ ಮಾಡಬೇಕಾದ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕಿತ್ತು. ಆದರೆ ಇವತ್ತು ನಮ್ಮ ದೇಶದಲ್ಲಿ ಏನಾಗಿದೆಯೆಂದರೇ ಲಾಕ್ ಡೌನ್ ಮೊದಲು ಒಂದು ಡಾಲರ್ ಕ್ರೂಡ್ ಆಯಿಲ್ ಗೆ 31.02 ಡಾಲರ್ ಇತ್ತು ಆಗ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ...

ಅಟೋ-ಟ್ಯಾಕ್ಸಿ ಚಾಲಕರ ಗಮನಕ್ಕೆ : 5 ಸಾವಿರ ರೂ. ಸಹಾಯಧನ ಪಡೆಯಲು ಈ ಷರತ್ತುಗಳು ಅನ್ವಯ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಪರಿಹಾರ ಪ್ಯಾಕೇಜ್ ಆಗಿ ರೂ.5000 ಘೋಷಣೆ ಮಾಡಿದ್ದರು. ಇಂತಹ ಪರಿಹಾರದ ಹಣವನ್ನು ಹೇಗೆ ಪಡೆಯಬೇಕು ಎಂಬುದೇ ರಾಜ್ಯದ ಅನೇಕ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆ, ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ...

ವಿವಾಹ ಬಂಧನಕ್ಕೂ ಬಂತು ಹತ್ತಾರು ಬಂಧನ ಮದುವೆಗೆ ತಯಾರಾದವರು ಕಡ್ಡಾಯವಾಗಿ ಏನೆಲ್ಲಾ ಪಾಲಿಸಲೇಬೇಕು ?

 ಕೊರೊನಾ ವೈರಸ್ ಹೋಗಲಾಡಿಸಲು ವಿಧಿಸಿದ್ದ ಲಾಕ್‍ಡೌನ್ ಅನ್ನು ಸರಕಾರ ಕೆಲ ನಿಯಮವನ್ನು ಜಾರಿಗೆ ತರುವ ಮೂಲಕ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಇದರ ಭಾಗವಾಗಿ ಮದುವೆ ಸಮಾರಂಭಗಳಿಗೂ ಕೆಲ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ವೈರಸ್ ತಡೆಗಟ್ಟುವ ಸಲುವಾಗಿ ಮುಂಜಾಗೃತಾ ಕ್ರಮಕ್ಕಾಗಿ ಸರ್ಕಾರ...

ಬೆಳ್ಳಾರೆ ಅಕ್ರಮ ಕಸಾಯಿಖಾನೆಗೆ ಪೋಲಿಸ್ ದಾಳಿ, ಮೂವರ ಬಂಧನ, ಇಬ್ಬರು ಪರಾರಿ

ಬೆಳ್ಳಾರೆಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳದಲ್ಲಿ ದನದ ಮಾಂಸ ಮಾಡುತ್ತಿದ್ದಲ್ಲಿಗೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ದನದ ಮಾಂಸ ವಶಪಡಿಸಿಕೊಂಡು ಹಾಗೂ ಮೂವರನ್ನು ಬಂಧಿಸಿದ ಘಟನೆ ಮೇ ೧೫ ರಂದು ನಡೆದಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ ದೊರೆತ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ಸುಮಾರು 40 ಕೆ.ಜಿ.ದನದ ಮಾಂಸ...
Loading posts...

All posts loaded

No more posts

error: Content is protected !!