- Thursday
- April 10th, 2025

ಸುಳ್ಯದಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಂಗಡಿ ಗಳಲ್ಲಿ ಕೆಲವು ಮಾತ್ರ ತೆರೆದಿದೆ. ಕಟ್ಟೆಕಾರ್ ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಹಾಕಿದ್ದು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಅನಗತ್ಯ ಓಡಾಟ ನಡೆಸುವವರಿಗೆ...

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಮತ್ತು ಅಧೀನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಹಾಗೂ ಎಸ್ ವೈ ಎಸ್ ಗೂನಡ್ಕ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ನೇತ್ರತ್ವದಲ್ಲಿ ರಂಝಾನ್ ತಿಂಗಳ ಪೂರ್ತಿ ಆನ್ ಲೈನ್ ಮುಖಾಂತರ ನಡೆದ ವಿವಿಧ ವಿಷಯಗಳ ತರಗತಿ ಗಳ ಸಮಾರೋಪ ಸಮಾರಂಭ ಇಂದು...

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ 34 ಲಕ್ಷದ 15 ನೇ ಹಣಕಾಸು ಕ್ರಿಯಾ ಯೋಜನೆ, 10 ಲಕ್ಷ ಸ್ವಂತ ನಿಧಿಯ ಕ್ರಿಯಾ ಯೋಜನೆ ಮಾಡಲಾಯಿತು ಗ್ರಾಮದ ಪ್ರಮುಖ ರಸ್ತೆಗಳಿಗೆ ಅನುದಾನ ವಿಂಗಡಿಸಲಾಯಿತು. ಚಟ್ಟೆಕಲ್ಲು ರಸ್ತೆ ,ಗ್ರಾಮ ಪಂಚಯತ್ ರಸ್ತೆ,...

ಗುತ್ತಿಗಾರು ಗ್ರಾಮದ ಚಿಕ್ಮುಳಿ ಕೆಂಚಮ್ಮ (೭೮) ಮೇ. ೨೩ ರಂದು ನಿಧನರಾದರು. ಮೃತರು ಪುತ್ರರಾದ ಕೋಮಲಾಂಗ, ಗೋಪಾಲಕೃಷ್ಣ, ನಾಗೇಶ , ಪುತ್ರಿಯರಾದ ದೇವಿ, ರೋಹಿಣಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗೌರವಾನ್ವಿತ ಕೇಂದ್ರ ಮಂತ್ರಿಯವರಾದ ಡಿ.ವಿ. ಸದಾನಂದ ಗೌಡರ ಹೆಸರನ್ನು ಬರೆದು ಅವರ ಹೆಸರಿನ ಜೊತೆ ಇರುವ ಗೌಡ ಜಾತಿಯನ್ನು ಕೀಳು ಮಟ್ಟದ ಅವಹೇಳನಕಾರಿಯಾದ ಪದವನ್ನು ಬಳಸಿ ನಿಂದಿಸಿರುವ ಜೊತೆಗೆ ಗೌಡ ಸಮುದಾಯಕ್ಕೆ ಅವಮಾನ ಮಾಡಿರುವ ಮುಕ್ಕಾಟಿರ ಅಯ್ಯಪ್ಪ ಎಂಬ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಂಗಳೂರು ಕಮಿಷನರಿಗೆ ದೂರು...

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಜನಾರ್ದನ ಗೌಡರವರು ಅಸೌಖ್ಯದಿಂದ ಮೇ ೨೩ ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ರಾಜೇಶ್, ಗಾಯಕ ಮತ್ತು ಅಧ್ಯಾಪಕ ಶಶಿಧರ, ಜಯಂತ, ಅಶೋಕ ಹಾಗೂ ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಜ್ಯೋತಿ,ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.ಜನಾರ್ಧನ ಗೌಡರವರು ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಅವರು ಯಕ್ಷಗಾನ ಕಲಾವಿದರಾಗಿಯೂ ಜಯಪ್ರಿಯರಾಗಿದ್ದದರು....

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೇ. ೨೩ ರಂದು ನಡೆಯಿತು . ಸುಳ್ಯ ಬ್ಲಾಕ್ ಕಾಂಗ್ರೆಸ್ ಪರವಾಗಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆಯವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಅರಂಬೂರು ಬಳಿ ಟಿವಿಎಸ್ ಅಪಾಚಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಗೊಂಡ ಅರುಣ, ಕಿರಣ ಇಬ್ಬರು ಸಹೋದರರಾಗಿದ್ದು ಪೆರಾಜೆ ಪದ್ಮಯ್ಯ ಅವರ ಪುತ್ರರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇವರು ಸುಳ್ಯಕ್ಕೆ ಸಾಮಾಗ್ರಿ ಖರೀದಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಆಯುಷ್ ಕ್ವಾಥ್ ಶನಿವಾರ ಮಂಗಳೂರಿನಲ್ಲಿ ಜನರ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.ಮಂಗಳೂರಿನ ಕೊಡಿಯಾಲ್ ಬೈಲ್ ಸಮೀಪದ ಅಟಲ್ ಸೇವಾ ಕೇಂದ್ರದಲ್ಲಿ ಸಂಸದರೂ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಆಯುಷ್ ಕ್ವಾಥ್ ಬಿಡುಗಡೆಗೊಳಿಸಿ ಮಾತನಾಡಿದರು. ಕೇಂದ್ರ...

All posts loaded
No more posts