ಹರಿಹರ ಪಳ್ಳತ್ತಡ್ಕ : ನಾಳೆ(ಮೇ.25) ಶ್ರೀ ಹರಿಹರೇಶ್ವರ ದೇವಸ್ಥಾನದ ದೈವಗಳ ಚಾವಡಿಯಲ್ಲಿ “ಪತ್ತನಾಜೆ ತಂಬಿಲ”

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ದೈವಗಳ ಚಾವಡಿಯಲ್ಲಿ ನಾಳೆ(ಮೇ.25) “ಪತ್ತನಾಜೆ ತಂಬಿಲ” ನಡೆಯಲಿದ್ದು, ಕೂಡುಗಟ್ಟಿನ ಹಾಗೂ ಊರ-ಪರವೂರ ಭಕ್ತಾದಿಗಳು ಆಗಮಿಸಿ ಉಪಸ್ಥಿತರಿದ್ದು ಶ್ರೀ ದೈವದ ಗಂಧ-ಪ್ರಸಾದವನ್ನು ಸ್ವೀಕರಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಪೆರಾಜೆಯಲ್ಲಿ ಬೈಕ್ ಗಳ ಮುಖಾಮುಖಿ – ಓರ್ವ ಸವಾರ ಮೃತ್ಯು – ಇನ್ನಿಬ್ಬರು ಗಂಭೀರ

ಪೆರಾಜೆ ಸಮೀಪ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಒರ್ವ ಸವಾರ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ‌. ಗಾಯಾಳುಗಳನ್ನು ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯನ್ನು ಕೇರಳ ಪಯ್ಯನ್ನೂರಿನ ಪ್ರದೀಪನ್ ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್ ನಲ್ಲಿದ್ದ ಸಂಪಾಜೆ ರವಿಕುಮಾರ್ ಚಡಾವು ಮತ್ತುಸುಮನ್ ಆಲಡ್ಕ  ಗಂಭೀರವಾಗಿ ಗಾಯಗೊಂಡಿದ್ದಾರೆ,
Ad Widget

ಸವಣೂರಿನಲ್ಲಿ ಅದ್ದೂರಿಯಾಗಿ ನಡೆದ ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮ ;  ಸೀತಾರಾಮ ರೈ ಅವರ 50 ನೇ ವಿವಾಹ ವಾರ್ಷಿಕೋತ್ಸವ ಕಣ್ತುಂಬಿಕೊಂಡ ಸಾವಿರಾರು ಅಭಿಮಾನಿಗಳು ;  ಯುವ ಪೀಳಿಗೆಗೆ ಸೀತಾರಾಮ ರೈಗಳು ಮಾದರಿ – ಗಣ್ಯರ ಅಭಿಮತ

ಸವಣೂರು ಶಿಲ್ಪಿ ಸಹಕಾರಿ ರತ್ನ ಕೆ. ಸೀತಾರಾಮ ರೈ ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್. ರೈ ಯವರ ಮದುವೆಯ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಅವರ ರಶ್ಮಿ ನಿವಾಸದಲ್ಲಿ ಅದ್ದೂರಿಯಾಗಿ ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮ ಮೇ.22 ಮತ್ತು 23ರಂದು ನಡೆಯಿತು. ಮೇ. 23 ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ...

ಸುಳ್ಯ : ಬಸ್ ನಿಲ್ದಾಣದ ಸೀಟ್ ಗಳನ್ನು ಬುಕ್ಕಿಂಗ್ ಮಾಡಿದ ಕುಡುಕರು – ಪ್ರಯಾಣಿಕರಿಗೆ ಕಿರಿಕಿರಿ

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕುಡುಕರು, ಬಿಕ್ಷುಕರ ಹಾವಳಿ ಹೆಚ್ಚಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಪ್ರಯಾಣಿಕರಿಗೆ ನಿರ್ಮಿಸಿದ ಸೀಟ್ ಗಳಲ್ಲಿ ಕುಡುಕರು ಮಲಗಿ ನಿದ್ರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಕೂಡಲೇ ಇಲಾಖೆ ಗಮನ ಹರಿಸಬೇಕಿದೆ.

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:24-05-2026 ಭಾನುವಾರ*01,🐏ಮೇಷ ರಾಶಿ🐏*📃,ಕೈಗೊಂಡ ಕೆಲಸಗಳಲ್ಲಿ ಸಮಸ್ಯೆಗಳು, ಎದುರಾಗುತ್ತವೆ, ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ, ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ,ಗಮನಿಸಿ:- ಇಂದು ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ,ಪರಿಹಾರ:- ನಿಮ್ಮ ತಂದೆಯ ಆಶೀರ್ವಾದ ಪಡೆಯಿರಿ,*02,🐂ವೃಷಭ ರಾಶಿ🐂*📃,ಕುಟುಂಬ ಸದಸ್ಯರಿಂದ ಆರ್ಥಿಕ ನೆರವು ದೊರೆಯುತ್ತದೆ,...

ಸುಳ್ಯ : ಮನೆ ಬಾಡಿಗೆಗೆ ಇದೆ

https://epaper.amarasuddi.com/index.php?date=2026-05-22 ಸುಳ್ಯ ನಗರದ ಓಡಬಾಯಿ, ವಿನು ನಗರದಲ್ಲಿರುವ ಭಗವತಿ ನಿಲಯ ದಲ್ಲಿ ಎಲ್ಲಾ ಸೌಕರ್ಯ ಗಳಿರುವ ಸಿಂಗಲ್ ಬೆಡ್ ರೂಮ್ ಮನೆ ಕುಟುಂಬ ವಾಸಕ್ಕೆ ಬಾಡಿಗೆಗೆ ಲಭ್ಯವಿದೆಸಂಪರ್ಕಿಸಿ : 9448710625, 9482597194

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಂಜುನಾಥ್ ಮಡ್ತಿಲರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್

ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಸಾಮಾನ್ಯ ಸಭೆಯು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ ಮೇ 23ರಂದು ಜೇಸಿ ಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತಿಲ್ಲದೆ ನಿರಂತರವಾಗಿ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಮಂಜುನಾಥ್ ಮಡ್ತಿಲ ಇವರನ್ನು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಈ ಗೌರವಿಸಲಾಯಿತು.ಸಮಾರಂಭದಲ್ಲಿ...

ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

ಜೀರ್ಣೋದ್ಧಾರಗೊಳ್ಳುತ್ತಿರುವ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿಯವರು ಮೇ 23ರಂದು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಈ ವೇಳೆ ಮಂದಿರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯ ನೀಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಭಜನಾ ಮಂದಿರದ ಸಂಚಾಲಕ ಸತ್ಯಶಾಂತಿ...

“ಸಹಕಾರ ರತ್ನ” ಸವಣೂರು ಸೀತಾರಾಮ ರೈ ಹಾಗೂ ಕಸ್ತೂರಿಕಲಾ.ಎಸ್ ರೈ ಅವರ ವೈವಾಹಿಕ ಜೀವನದ 50ನೇ ವರ್ಷದ ಸಂಭ್ರಮಾಚರಣೆ

“ಸಹಕಾರ ರತ್ನ” ಸವಣೂರು ಸೀತಾರಾಮ ರೈ- ಕಸ್ತೂರಿಕಲಾ.ಎಸ್ ರೈ ಯವರ ವೈವಾಹಿಕ ಜೀವನದ 50ರ ಸಂಭ್ರಮ ಆಚರಣೆಯ ಪ್ರಯುಕ್ತ ಮೇ.22ರಂದು ಪೂರ್ವಾಹ್ನ ಮಾಲೆಂಗಲ್ಲು ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ, ಶಿವಕುಮಾರ್ ಭಟ್ ಎಡಮಂಗಲ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸವಣೂರು 'ರತ್ನ ನಿಲಯ'ದಲ್ಲಿ ನಡೆಯಿತು. ವೇದಮೂರ್ತಿ ಶ್ರೀವತ್ಸ ಕೆದಿಲಾಯ ಮತ್ತು ವೆಂಕಟೇಶ ಶಾಸ್ತ್ರಿ(ಕಂಚಿ ಕಾಮಕೋಟಿ ವೇದ...

ಇಂದಿನ(ಮೇ 23) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ದರದಲ್ಲಿ ಮುಂದುವರಿದ ಕುಸಿತ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 23 ಮೇ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 23) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 415 ರಿಂದ...
Loading posts...

All posts loaded

No more posts

error: Content is protected !!