Ad Widget

ಸುಳ್ಯ : ಸೈಂಟ್ ಜೋಸೆಫ್ ಶಾಲೆಗೆ ಸುಳ್ಯ ಹೋಬಳಿ ಮಟ್ಟದ ಸಮಗ್ರ ಪ್ರಶಸ್ತಿ

ಅಕ್ಟೋಬರ್ 24 ಹಾಗೂ 25 ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ   ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಹಾಗೂ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಗಳು ಸುಳ್ಯದ  ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಮಲ್ನಾಡು ವಿದ್ಯಾ ಸಂಸ್ಥೆ ಕೊಡಿಯಾಲಬೈಲ್ ನಲ್ಲಿ ನಡೆದ ಸುಳ್ಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ   17ರ ವಯೋಮಾನದ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಶಾಲಾ ಸಮಗ್ರ...

ಕಂದ್ರಪ್ಪಾಡಿ : ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಅನುದಾನದಲ್ಲಿ  ನಿರ್ಮಾಣವಾಗಲಿರುವ ಶಾಲಾ ಆವರಣ ಗೋಡೆಗೆ ಗುದ್ದಲಿ ಪೂಜೆ

ಕಂದ್ರಪ್ಪಾಡಿ ಸ.ಹಿ‌.ಪ್ರಾ.ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರ ಅನುದಾನದಲ್ಲಿ ರೂ.03 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ಆವರಣ ಗೋಡೆಯ ಗುದ್ದಲಿ ಪೂಜೆ ಕಾರ್ಯಕ್ರಮ ಅ.27ರಂದು ನಡೆಯಿತು.ಈ ಗುದ್ದಲಿ ಪೂಜೆಯನ್ನು ಶಾಲಾ ಎಸ್.ಡಿ.ಎಂ.ಸಿ‌. ಅಧ್ಯಕ್ಷರಾದ ವೀಣಾ ಎಂ.ವಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ನಿತ್ಯಾನಂದ...
Ad Widget

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಗೆ “ಅತ್ಯುತ್ತಮ ಲಿಜನ್ ಪ್ರಾಂತೀಯ ಪ್ರಶಸ್ತಿ”

ಸುಬ್ರಹ್ಮಣ್ಯ ಅಕ್ಟೋಬರ್  27 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯ ಎಫ್ ನ ಪ್ರಾಂತೀಯ ಸಮ್ಮೇಳನ ಬೆಂಗಳೂರಿನ ದೇವನಹಳ್ಳಿಯಲ್ಲಿ ರವಿವಾರ ನಡೆದು ಪ್ರಾಂತೀಯ ಎಲ್ಲಾ ಲಿಜನ್ ಗಳಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್  ಅತ್ಯುತ್ತಮ ಲೀಜನ್ ಆಗಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗಿಪ್ರಶಸ್ತಿಯನ್ನು ಪಡೆದಿರುತ್ತದೆ. 2025-26ನೇ ಸಾಲಿನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್...

ಚಪ್ಪಲಿಯೊಳಗೆ ಅವಿತಿದ್ದ ಹಾವು ಕಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

ಚಪ್ಪಲಿಯೊಳಗೆ ಅವಿತಿದ್ದ ಹಾವೊಂದು ಮಹಿಳೆಗೆ ಕಚ್ಚಿದ ಘಟನೆ ಆಲೆಟ್ಟಿಯಲ್ಲಿ ನಡೆದಿದೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ವಿನುತಾ ಎಂಬವರು ಆಸ್ಪತ್ರೆಗೆ ದಾಖಲಾದ ಮಹಿಳೆ. ಅವರು ಮುಂಜಾನೆ ಮನೆಯ ಹೊರ ಭಾಗದಲ್ಲಿ ಇರಿಸಿದ್ದ ಚಪ್ಪಲಿ ಹಾಕಲು ಹೋದಾಗ ಚಪ್ಪಲಿನ ಒಳಗಡೆ ಸೇರಿಕೊಂಡಿದ್ದ ಹಾವು ಇವರ ಕಾಲಿಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ಕೂಡಲೇ  ಅವರನ್ನು  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ...

ಮಂಡೆಕೋಲು: ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗಣೇಶ್ ಮಾವಂಜಿ, ಕಾರ್ಯದರ್ಶಿಯಾಗಿ ಮುರಳೀಧರ ರೈ ಪೇರಾಲು ಆಯ್ಕೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಗ್ರಾಮದ ಅರಿವು ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಮಾವಂಜಿ ಹಾಗೂ ಕಾರ್ಯದರ್ಶಿಗಳಾಗಿ ಮುರಳೀಧರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ ಉಪಾಧ್ಯಕ್ಷರಾಗಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಶಶಿಧರ ಮಾವಜಿ, ಕೋಶಾಧಿಕಾರಿಯಾಗಿ ಭಾರತಿ ಉಗ್ರಾಣಿಮನೆ ಆಯ್ಕೆಯಾದರು....

ರಾಯಚೂರು ಬೆಳಕು ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ಆಯ್ಕೆ

ಬೆಳಕು ಸಾಹಿತ್ಯ, ಶೈಕ್ಷಣಿಕ,ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ಇದರ ಬೆಳಕು ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ರವರು ಆಯ್ಕೆಗೊಂಡಿದ್ದಾರೆ. ಗಾಯಕರಾಗಿರುವ ವಿಜಯಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಉದ್ಯೋಗಿ ಮತ್ತು ಕಸಾಪ ಸುಳ್ಯ ಹೋಬಳಿ ಘಟಕದ ನಿರ್ದೇಶಕರಾಗಿದ್ದಾರೆ.

ನಿಂತಿಕಲ್ಲು ಸೋಲಾರ್ ಪಾಯಿಂಟ್ ವತಿಯಿಂದ ಲಕ್ಕಿ ಡ್ರಾ ಸೀಸನ್ 07 ; 9 ತಿಂಗಳಲ್ಲಿ 18 ಬಂಪರ್ ಡ್ರಾ 54 ಲಕ್ಕಿ ಡ್ರಾ

ನಿಂತಿಕಲ್ಲು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್ & ಫರ್ನೀಚರ್ & ಪೈಂಟ್ಸ್ ಸಂಸ್ಥೆಯ ವತಿಯಿಂದ “ಲಕ್ಕಿ ಡ್ರಾ ಸೀಸನ್ 07” ಕಾರ್ಯಕ್ರಮವು ಅಕ್ಟೋಬರ್ 31 ರಿಂದ ಪ್ರಾರಂಭಗೊಳ್ಳಲಿದ್ದು, ಈ ಲಕ್ಕಿ ಡ್ರಾದಲ್ಲಿ ಬೈಕ್, ಡೈನಿಂಗ್ ಟೇಬಲ್, ಸೋಲಾರ್, ಇನ್ವಾರ್ಟರ್, ಟಿ.ವಿ, ಫರ್ನೀಚರ್, ಬ್ಯಾಟರಿ ಹಾಗೂ ಪೈಂಟ್ಸ್ ಸೇರಿದಂತೆ...

ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ

ಚಂದನ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾದ ಸಂಧ್ಯಾ(ಸಾನು) ಉಬರಡ್ಕ ಅವರ ನೇತೃತ್ವದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ "ದೀಪಾವಳಿ ಕವಿಗೋಷ್ಠಿ-2025" ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಅ.26ರಂದು  ಜರುಗಿತು. ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಗೌರವಾಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರು...

ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಬಂಧ ಹಾಗೂ ಕಥಾ ಸ್ಪರ್ಧೆಗಳಿಗೆ ಆಹ್ವಾನ

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 16ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ವಠಾರದಲ್ಲಿ ನಡೆಯಲಿದೆ. ಈ ಸಮ್ಮೇಳನದ ಸಲುವಾಗಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಹಾಗೂ ಸಾರ್ವಜನಿಕ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು " ನಾನು ಓದಿದ ಪುಸ್ತಕ" ಎಂಬ...

ಗುತ್ತಿಗಾರಿನಲ್ಲಿ‌ ಆರಂಭಗೊಳ್ಳಲಿರುವ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸ್ಸ್ ನ ನಾಮಫಲಕ ಆರಿಕೋಡಿ ಸನ್ನಿಧಿಯಲ್ಲಿ ಅನಾವರಣ

ಗುತ್ತಿಗಾರಿನಲ್ಲಿ‌ ನೂತನವಾಗಿ ಆರಂಭಗೊಳ್ಳಲಿರುವ ಆಸರೆ ಎಂಟರ್ಪ್ರೈಸಸ್ ಇದರ ಸಹ ಸಂಸ್ಥೆ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸ್ಸ್ ಇದರ ನಾಮಫಲಕ ಅನಾವರಣ ಕಾರ್ಯಕ್ರಮ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಧರ್ಮದರ್ಶಿಗಳ ಮೂಲಕ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುಧಾರರಾದ ಲೋಹಿತ್ ಮಾವಿನಗೊಡ್ಲು, ಜಯಂತ ತಳೂರು, ಮೋಹನ ಪೊಯ್ಯಮಜಲು ಉಪಸ್ಥಿತರಿದ್ದರು..
Loading posts...

All posts loaded

No more posts

error: Content is protected !!