- Monday
- April 7th, 2025

ನವಚೇತನ ಯುವಕ ಮಂಡಲ ಮತ್ತು ಜಾಲ್ಸುರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೊಳುಬೈಲು, ಬೈತಡ್ಕ, ಕೋನಡ್ಕಪದವು, ವಿನೋಬನಗರ, ಮಾವಿನಕಟ್ಟೆ, ಅಡ್ಕಾರು, ಜಾಲ್ಸುರು, ಸೋಣoಗೇರಿ, ಪೈಚಾರು ಬಸ್ಸು ಪ್ರಯಾಣಿಕರ ತಂಗುದಾಣ ಮತ್ತು ರಸ್ತೆ ಸೂಚನಾ ಫಲಕಗಳ ಸ್ವಚ್ಛತೆ ನಡೆಸಿ ಸ್ಯಾನಿಟೈಸ್ ಮಾಡಿ ಸುತ್ತಮುತ್ತ ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತೆ ನಡೆಸಲಾಯಿತು....

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ತಿಂಗಳ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ ಪ್ರಾರಂಭಗೊಂಡಿದ್ದು ಸೆ.2 ರ ತನಕ ಪೂಜೆ ನಡೆಯಲಿದೆ.ಸೇವೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಛೇರಿಯಲ್ಲಿ (ಮೊಬೈಲ್: 9902050424) ವಿಚಾರಿಸಬೇಕಾಗಿದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.

ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನ ಕಾರ್ಯಕ್ರಮವು ಜು.24 ರಂದು ನಡೆಯಿತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಮಾತನಾಡಿ, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿಯಾಗಿದ್ದರೆ ಮಾತ್ರ ಸರಕಾರದ ಸವಲತ್ತು ಪಡೆಯಲು ಸಾಧ್ಯವಿದೆ. ಈ...

ಸುಳ್ಯ ತಾಲೂಕಿನಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು 42 ಪಾಸಿಟಿವ್ ಬಂದಿದೆ. ಮರ್ಕಂಜ ಗ್ರಾಮದ ದಾಸರಬೈಲಿನಲ್ಲಿ 7 ಪ್ರಕರಣ ಕಂಡುಬಂದಿದೆ. ತಾಲೂಕಿನಲ್ಲಿ ಒಟ್ಟು 199 ಸಕ್ರೀಯ ಸೋಂಕಿತ ಪ್ರಕರಣಗಳಿವೆ.

ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಕೆ.ಅನುಷಾ ಪ್ರಭು ರವರು 600 ರಲ್ಲಿ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಇವರು ಸುಳ್ಯದ ಉದ್ಯಮಿ ಪ್ರಗತಿಪರ ಕೃಷಿಕ ಅಶೋಕ ಪ್ರಭು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರಭು ದಂಪತಿಯ ಪುತ್ರಿ.

ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆಯು ಸುಳ್ಯದ ಅಂಬಟೆಡ್ಕದ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಇಂದು ಜರುಗಿತು.ವಿಶೇಷ ಕಾರ್ಯಕಾರಿಣಿ ಸಭೆಯನ್ನು ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಪೂಜಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮೂರು ತಿಂಗಳಿಗೊಮ್ಮೆ ನಡೆಯುವ ವಿಶೇಷ...
ಮುಕ್ಕೂರು : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಕಾಪು ಕೃಷಿ ಕ್ಷೇತ್ರದ ಆಶ್ರಯದಲ್ಲಿ ರೈತರೇ ಮೊಬೈಲ್ ಆಧರಿಸಿ ಬೆಳೆ ಸಮೀಕ್ಷೆ ನಡೆಸುವ ಕುರಿತ ಅಭಿಯಾನವು ಜು.24 ರಂದು ಬೆಳಗ್ಗೆ 10 ಕ್ಕೆ ಕಾಪು ಕೃಷಿ ತೋಟದಲ್ಲಿ ನಡೆಯಲಿದೆ. ಕೃಷಿ ಕ್ಷೇತ್ರದ ಸಂತೋಷ್ ಕುಮಾರ್ ರೈ ಕಾಪು ಉದ್ಘಾಟಿಸಲಿದ್ದಾರೆ. ಪೆರುವಾಜೆ...
ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 40 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮರ್ಕಂಜದಲ್ಲಿ 1, ಅಮರಮುಡ್ನೂರುನಲ್ಲಿ 1, ಬೆಳ್ಳಾರೆಯಲ್ಲಿ 2, ಸುಳ್ಯದಲ್ಲಿ 15, ಉಬರಡ್ಕ ಮಿತ್ತೂರುನಲ್ಲಿ 2, ಕನಕಮಜಲಿನಲ್ಲಿ 2, ಆಲೆಟ್ಟಿನಲ್ಲಿ 1, ಪಂಜದಲ್ಲಿ 1, ಎಡಮಂಗಲದಲ್ಲಿ 2, ಮಂಡೆಕೋಲಿನಲ್ಲಿ 1, ದುಗ್ಗಲಡ್ಕದಲ್ಲಿ 1, ಜಾಲ್ಸೂರಿನಲ್ಲಿ 2, ಅಜ್ಜಾವರದಲ್ಲಿ 2, ಗುತ್ತಿಗಾರಿನಲ್ಲಿ 1,...

ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 2021-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ಕೂರಿನಲ್ಲಿ ಜು.20 ರಂದು ನಡೆಯಿತು. ಗೌರವಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷರಾಗಿ ಜಯಂತ ಕುಂಡಡ್ಕ, ಕಾರ್ಯದರ್ಶಿಯಾಗಿ ಶಶಿಕುಮಾರ್ ಬಿ.ಎನ್., ಕೋಶಾಧಿಕಾರಿಯಾಗಿ ಜೀವನ್ ಕೊಂಡೆಪ್ಪಾಡಿ ಆಯ್ಕೆಯಾದರು. ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,...

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಸನ್ಮಾನ ಹಾಗೂ ಉಪನ್ಯಾಸ ಜುಲೈ 21 ರಂದು ಪೂ ಪೂ.ಗಂಟೆ 10ಕ್ಕೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಲಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಕಣಕಾರರು ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ...

All posts loaded
No more posts