Ad Widget

ದೇವಚಳ್ಳ : ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ

ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುತ್ತಿಗಾರು, ಗ್ರಾಮಪಂಚಾಯತ್ ದೇವಚಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.17 ರಂದು ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿಶ್ವ ಜನಸಂಖ್ಯಾ...

ಸೇವಾ ಭಾರತಿ ವತಿಯಿಂದ ಸರಕಾರಿ ಆಸ್ಪತ್ರೆಯ ಆವರಣ ಸ್ವಚ್ಚತೆ

ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸೇವಾ ಭಾರತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಸುಮಾರು 25 ಜನ ಕಾರ್ಯಕರ್ತರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕಾಡು ಕಡಿಯುವುದು, ಕಸ ಹೆಕ್ಕುವುದು, ಬ್ಲೀಚಿಂಗ್ ಹಾಗೂ ಇತರ ಎಲ್ಲಾ ರೀತಿಯ ಕೆಲಸಗಳ ಮೂಲಕ ಪೂರ್ಣ ಪ್ರಮಾಣದ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಟ್ಟರು.ಸೇವಾ ಭಾರತಿ ಪ್ರಮುಖರಾದ...
Ad Widget

ಕೊಡಗು ಸಂಪಾಜೆ ಶಾಲೆಯಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ

ಕೊಡಗು ಸಂಪಾಜೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜು. 17 ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಭರತ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ಶ್ರೀಮತಿ...

ಸುಬ್ರಹ್ಮಣ್ಯ : ಮಕ್ಕಳ ಆರೋಗ್ಯ ತಪಾಸಣೆ, ಪ್ರೋಟೀನ್‌ ಪೌಡರ್ ವಿತರಣೆ

ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಭಯ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಾ.ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪ್ರೋಟೀನ್ ವಿತರಣಾ ಕಾರ್ಯಕ್ರಮವನ್ನು ಅಭಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ...

ಸೇವಾಜೆ ರಸ್ತೆ ಬಂದ್ : ಮರ್ಕಂಜ ಪಂಚಾಯತ್ ವತಿಯಿಂದ ಸೂಚನ ಫಲಕ ಅಳವಡಿಕೆ

ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಬೆಂಕಿಗೆ ಹಾಕಿದಂತಾಯಿತು ಸೇವಾಜೆ ಸೇತುವೆ ಕಥೆ. ಸೇವಾಜೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಹಳೆ ಸೇತುವೆ ಕೆಡವಲಾಗಿತ್ತು. ಆದರೆ ನೂತನ ಸೇತುವೆ ನಿರ್ಮಾಣ ಆಗದೇ ಹಳೆ ಸೇತುವೆಯೂ ಇಲ್ಲದೇ ಜನ ಪರದಾಟ ನಡೆಸುವಂತಾಗಿದೆ. ರಸ್ತೆ ಬಂದ್ ಆಗಿರುವ ಬಗ್ಗೆ ಸರಿಯಾದ ಸೂಚನಾ ಫಲಕ ಇಲಾಖೆ ಆಳವಡಿಸದೇ ಪ್ರವಾಸಿಗರು ತೊಂದರೆ...

ಸುಳ್ಯ : ಉತ್ಸವ ಕಂಪೆನಿಯ ಸಂಭ್ರಮ ಪೈಂಟ್ ತಯಾರಿಕಾ ಘಟಕ ಶುಭಾರಂಭ

ಸುಳ್ಯದ ಕುರುಂಜಿಭಾಗ್ ನಲ್ಲಿ ಉತ್ಸವ ಕಂಪೆನಿಯ ಸಂಭ್ರಮ ಪೈಂಟ್ ಉತ್ಪಾದನಾ ಘಟಕ ಜುಲೈ 15 ರಂದು ಶುಭಾರಂಭಗೊಂಡಿತು. ಸ್ವಾಗತ್ ಐಸ್ ಕ್ರೀಂನ ಪ್ರಮೋದ್ ಮಾಲಕತ್ವದ ನೂತನ ಪೈಂಟ್ ಉತ್ಪಾದನಾ ಘಟಕದ ಶುಭಾರಂಭ ಇಂದು ನಡೆಯಿತು. ಸಂಸ್ಥೆಯ ಮಾಲಕ ಕೆ.ಪ್ರಮೋದ್, ಸ್ವಾಗತ್ ಐಸ್ ಕ್ರೀಂ ಸಂಸ್ಥೆಯ ಮಾಲಕ ಪ್ರಭಾಕರನ್ ನಾಯರ್ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ : ಗ್ರಾಮ ಪಂಚಾಯತ್ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಾಗಾರ

ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಜು.15ರಂದು ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರ ಉದ್ಘಾಟಿಸಿದಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ್ ಪ್ರತೀ ಮನೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಅದರ ಯಶಸ್ವಿ ಅನುಷ್ಠಾನದಲ್ಲಿ ನೀರು...

ಚೊಕ್ಕಾಡಿ : ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ).ಸುಳ್ಯ ದೊಡ್ಡತೋಟ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ಚೊಕ್ಕಾಡಿ ಸೇವಾ ಕೇಂದ್ರದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿ ಮನೆ ಹಾಗೂ ಒಕ್ಕೂಟದ ಅಧ್ಯಕ್ಷ ಪ್ರಸಾದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಲಾಭಾಂಶ ಹಸ್ತಾಂತರ ಮಾಡಿದರು. ವಲಯದ ಮೇಲ್ವಿಚಾರಕರಾದ ನವೀನ್...

ದೊಡ್ಡತೋಟ : ಶ್ರೀ. ಕ್ಷೇ. ಗ್ರಾ.ಯೋಜನೆಯ ವಲಯ ಕಛೇರಿ ಉದ್ಘಾಟನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯದ ನೂತನ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರದ ಉದ್ಘಾಟನೆ ಜು.14 ರಂದು ಬಾಲಾಜಿ ಟ್ರೇಡರ್ಸ್ ಕಟ್ಟಡದಲ್ಲಿ ನೆರವೇರಿತು. ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲ, ಕಟ್ಟಡ ಮಾಲಕ ಕೃಷ್ಣಕುಮಾರ್ ಭಟ್, ವಲಯ ಅಧ್ಯಕ್ಷ ಭಾಸ್ಕರ್ ರಾವ್ ನೂತನ ಕಚೇರಿಯನ್ನು...

ಮಡಪ್ಪಾಡಿ : ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಳ್ಯ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಮಡಪ್ಪಾಡಿ ಗ್ರಾ . ಪಂ ನಲ್ಲಿ ಮ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ ” ಯೊಜನೆಯಡಿಯಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ನ.10 ರಂದು ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪಯಸ್ವಿನಿ ಸ್ತ್ರಿಶಕ್ತಿ ಸ್ವಸಹಾಯ ಬ್ಯಾಂಕ್‌ ನ ಅಧ್ಯಕ್ಷೆ ಶ್ರಿಮತಿ ಉ‍ಷಾ ಜಯರಾಂ...
Loading posts...

All posts loaded

No more posts

error: Content is protected !!