Ad Widget

ನಕಲಿಯಾಗಿ ಸಹಾಯಕ ಸಂಚಾರ ನಿರೀಕ್ಷಕರ ಸಮವಸ್ತ್ರವನ್ನು ಧರಿಸಿ ಬಸ್ಸುಗಳ ಪರಿವೀಕ್ಷಣೆ – ಆರೋಪಿ ಖುಲಾಸೆ

ದಿನಾಂಕ 10-12-2012 ರಂದು ವಂಚಿಸಿ ಹಣಗಳಿಸುವ ಉದ್ದೇಶದಿಂದ ಕ.ರಾ.ರ.ಸಾ.ನಿ ಸಂಸ್ಥೆಯ ಸಹಾಯಕ ಸಂಚಾರ ನಿರೀಕ್ಷಕರ ನಕಲಿ ಸಮವಸ್ತ್ರವನ್ನು ಧರಿಸಿ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಕ.ರಾ.ರ.ಸಾ.ನಿ ಸಂಸ್ಥೆಯ ಸುಮಾರು 20 ಬಸ್ಸುಗಳನ್ನು ಕಾನೂನು ಬಾಹಿರವಾಗಿ ಚೆಕ್ ಮಾಡಿ ಕೆಲವು ನಿರ್ವಾಹಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪವನ್ನು ಎದುರಿಸುತ್ತಿದ್ದ ಆರೋಪಿ ರವಿಕುಮಾರ್ ಎಂಬಾತನನ್ನು ಸುಳ್ಯದ ಪ್ರಧಾನ...

ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಕೆ ಕಳ್ಳತನ ಆರೋಪಿಗಳ ಖುಲಾಸೆ

ಸುಳ್ಯ ತಾಲೂಕು ಕಳಂಜ ಗ್ರಾಮದ ಮುಂಡುಗಾರು ಎಂಬಲ್ಲಿನ ನಿವಾಸಿಗಳಾದ ಹರಿಯಪ್ಪ ಗೌಡ, ರಾಘವ ಮತ್ತು ಲೋಕೇಶ್ವರಿ ಎಂಬುವರು ದಿನಾಂಕ 30-12-2021 ರಂದು ಎಂ.ಸುಬ್ರಹ್ಮಣ್ಯ ಎಂಬುವವರ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆಯನ್ನು ಕದ್ದು ತೆಗೆದು ಕೊಂಡು ಹೋಗಿರುತ್ತಾರೆ ಎಂದು ಆರೋಪಿಸಿ ಎಂ.ಸುಬ್ರಮಣ್ಯ ರವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ...
Ad Widget

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ರಂಜಿತಾ ರವರ ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವಿನ ಹಸ್ತ

“ಬದುಕಿನ ಆಸರೆಗಾಗಿ ಸಂತೆ ವ್ಯಾಪಾರ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವ ಹೊತ್ತಿನಲ್ಲೇ ಬರಸಿಡಿಲಿನಂತೆ ಎರಗಿದ ಆರೋಗ್ಯ ಸಮಸ್ಯೆ ಇದೀಗ ಇಡೀ ಕುಟುಂಬವನ್ನೇ ನರಕದ ಕೂಪಕ್ಕೆ ತಳ್ಳಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಕೆನ್ನಾರು ಎಂಬಲ್ಲಿ 5 ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆಯನ್ನು ಹೊಂದಿದ್ದು, 2 ಪುಟ್ಟ ಮಕ್ಕಳೊಂದಿಗೆ ಕಷ್ಟದ ಬದುಕು ಸಾಗಿಸುತ್ತಿದ್ದ ರಾಘವೇಂದ್ರರ...

ಮಾವಿನಕಟ್ಟೆ : ಒತ್ತೆಕೋಲ ಮಹೋತ್ಸವದ ಆಮಂತ್ರಣ ಬಿಡುಗಡೆ

ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.18 ಮತ್ರು 19 ರಂದು ನಡೆಯಲಿರುವ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ಚಂದ್ರಶೇಖರ ಭಟ್ ತಳೂರು, ಕೃಷ್ಣಯ್ಯ ಮೂಲೆತೋಟ, ಕೋಶಾಧಿಕಾರಿ ಗೋಪಿನಾಥ್ ಮೆತ್ತಡ್ಕ, ವೆಂಕಟ್ರಮಣ ಮೆದು, ನಿತ್ಯಾನಂದ ಪಾರೆಪ್ಪಾಡಿ, ಲೋಕೇಶ್ ಪೂಜಾರಿ ತಳೂರು...

ಅಡ್ತಲೆ : ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕರ್ನಾಟಕ ಹಾಲು ಒಕ್ಕೂಟದ ಸಹಯೋಗದಲ್ಲಿ ಅಡ್ತಲೆಯಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಕುರಿತು ಮಾಹಿತಿ ಕಾರ್ಯಾಗಾರವು ಸಂಘದ ಅಧ್ಯಕ್ಷರಾದ ಮೋಹನ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಮನಮೋಹನ ಮೇಲಡ್ತಲೆ ಇವರ ಮನೆಯಲ್ಲಿ ನಡೆಯಿತು. ಅರಂತೋಡು ಹಾಲು ಉತ್ಪಾದಕರ ಸಂಘದ ನೇತೃತ್ವದಲ್ಲಿ...

ಕಿರ್ಲಾಯ : ಮನೆಗೆ ತೆಂಗಿನ ಮರ ಬಿದ್ದು ಹಾನಿ

ಫೆ.25 ರಂದು ಸುರಿದ ಗಾಳಿ ಮಳೆಗೆ ಆರಂತೋಡು ಕೃಷ್ಣಪ್ಪ ಗೌಡ ಕಿರ್ಲಾಯ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು, ಹಂಚುಗಳು ಪುಡಿ ಪುಡಿಯಾಗಿದ್ದು, ಸಂಪೂರ್ಣ ಮನೆಗೆ ಕೂಡ ಹಾನಿಯಾಗಿ ನಷ್ಟ ಸಂಭವಿಸಿದೆ.

“ರಕ್ತದಾನ ಜೀವ ಉಳಿಸುವ ಶ್ರೇಷ್ಠದಾನ” : ಡಾl ರಾಮಕೃಷ್ಣರಾವ್ ; ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸುಬ್ರಹ್ಮಣ್ಯ ಫೆಬ್ರವರಿ 26 : “ಅನ್ನದಾನ, ವಸ್ತ್ರದಾನ, ನೇತ್ರದಾನ, ಭೂದಾನ, ಗೋದಾನ, ವಿದ್ಯಾದಾನ ಇವೆಲ್ಲವುಗಳಲ್ಲಿ ಶ್ರೇಷ್ಠವಾದಂತಹ ಹಾಗೂ ಮನುಷ್ಯರ ಜೀವ ಉಳಿಸುವ ದಾನ ರಕ್ತದಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗದಿರುವುದರಿಂದ ಮನುಷ್ಯರ ದೇಹದಿಂದಲೇ ತೆಗೆದು ಇನ್ನೊಬ್ಬ ರೋಗಿಗೆ ನೀಡಬೇಕಾಗುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಹೊಸ ಚೈತನ್ಯ ಕೂಡ ಮೂಡುತ್ತದೆ. ಆದುದರಿಂದ ರಕ್ತದ...

ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಜಾನ್ ಕಿಟ್ ವಿತರಣೆ

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಅರ್ಹ ಫಲಾನುಭವಿ 100 ಕುಟುಂಬಗಳಿಗೆ ದಿನ ನಿತ್ಯ ಉಪಯೋಗದ ರೂ.2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಗಾಂಧಿನಗರ ಸಂಸ್ಥೆ ಯ ಕಚೇರಿ ವಠಾರದಲ್ಲಿ ವಿತರಿಸಲಾಯಿತು.  ಅಧ್ಯಕ್ಷತೆಯನ್ನು ಜಮೀ...

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು ಸುಳ್ಯ ಯೋಜನ ಕಚೇರಿ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ...

ಕೊಲ್ಲಮೊಗ್ರು : ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನಿರ್ಮಾಣವಾದ ನೂತನ ಆಂಗನವಾಡಿಯನ್ನು ಇಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಮೊಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಸೊಸೈಟಿ ಅಧ್ಯಕ್ಷ ಡಾ.ಸೋಮಶೇಖರ ಕಟ್ಟೆಮನೆ, ಅಂಗನವಾಡಿ ಸ್ಥಳದಾನಿಗಳು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ವಿಧ್ಯಾರ್ಥಿಗಳು, ಪೋಷಕರು ,ಶಿಕ್ಷಕರು ಹಾಗೂ ಊರವರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!