Ad Widget

ಬೆಳ್ಳಾರೆ :ಯುವರಕ್ತ ನಿಧಿ ಬೆಳ್ಳಾರೆ ಉದ್ಘಾಟನೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ; “ಯುವ ಸಮುದಾಯ ರಕ್ತದಾನದಲ್ಲಿ ಪಾಲ್ಗೊಂಡಾಗ ಜಾಗೃತ ಸಮಾಜ ನಿರ್ಮಾಣ ಸಾಧ್ಯ” : ಭಾಸ್ಕರ್ ರಾವ್

ಯುವರಕ್ತ ನಿಧಿ ಬೆಳ್ಳಾರೆ ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವು ಬೆಳ್ಳಾರೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಜ.11ರಂದು ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಐ.ಪಿ.ಎಸ್ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಇದರ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಇಂತಹ ಒಂದು ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ರಕ್ತ...

ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಟಿ.ಶ್ಯಾಮ್ ಭಟ್ ಅವರಿಗೆ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸನ್ಮಾನ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ವಿಶ್ರಾಂತ ಐ.ಎ.ಎಸ್ ಅಧಿಕಾರಿ ಡಾ. ಟಿ.ಶ್ಯಾಮ್ ಭಟ್ ಅವರಿಗೆ ಪ್ರತಿಷ್ಠಿತ ಮೈಸೂರು ವಿ.ವಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದ ಪ್ರಯುಕ್ತ ಅವರ ಸ್ವಗೃಹದಲ್ಲಿ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ದೇವಸ್ಥಾನದ ಮೊಕ್ತೇಸರರು ಹಾಗೂ ಸಮಿತಿಯ ಅಧ್ಯಕ್ಷರಾದ ಎಂ.ಬಿ ಸದಾಶಿವ ರವರು ಸನ್ಮಾನಿತರ...
Ad Widget

ರಂಗಮನೆಯಲ್ಲಿ ನಲಿದಾಡಿದ ವಿಶೇಷ ಚೇತನ ಮಕ್ಕಳು

ಸುಳ್ಯ ಹಳೆಗೇಟಿನಲ್ಲಿರುವ  ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರಕ್ಕೆ ಸುಳ್ಯ ತಾಲೂಕಿನ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷ ಅಗತ್ಯವುಳ್ಳ ಸುಮಾರು 40 ಮಕ್ಕಳು ತಮ್ಮ ಹೆತ್ತವರೊಂದಿಗೆ ಭೇಟಿ ನೀಡಿದರು.    ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯು ಹಮ್ಮಿಕೊಂಡ ವಿಶೇಷ ಅಗತ್ಯವುಳ್ಳ ಮಕ್ಕಳ  ಕ್ಷೇತ್ರ ಭೇಟಿಯ ಅಂಗವಾಗಿ ರಂಗಮನೆಗೆ ಬಂದ ಮಕ್ಕಳು ಅಲ್ಲಿನ ಕಲಾತ್ಮಕ ಶಿಲ್ಪಗಳನ್ನು ಮುಗ್ಧರಾಗಿ ವೀಕ್ಷಿಸಿದರು. ಮನೆಯೊಳಗೆ...

ಸುಳ್ಯ : ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ

ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಇದರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ವಿವೇಕಾನಂದ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಜ.12ರಂದು ನಡೆಯಿತು.ಸುಳ್ಯದ ಹಿರಿಯ ದಂತ ವೈದ್ಯರಾದ ಡಾ.ಎಂ.ವಿ.ಆಚಾರ್ ರವರು ವಿವೇಕಾನಂದರ ಪುತ್ಥಳಿಗೆ ಹಾರಾರ್ಪಣೆಗೈದರು. ಸುಳ್ಯ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಎಂ.ಬಿ.ಸದಾಶಿವ, ಸುಳ್ಯ ಸೇವಾ ಭಾರತಿ ಹೆಲ್ಫ್ ಲೈನ್ ಅಧ್ಯಕ್ಷ ಡಾ.ಮನೋಜ್...

ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿ ರಾಶಿ ; ಸ್ವಚ್ಛತಾ ಕಾರ್ಯ ಕೈಗೊಂಡ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್

ಸುಬ್ರಹ್ಮಣ್ಯ ಜನವರಿ 11 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ದೂರದ ರಾಜ್ಯಗಳಿಂದ ಹಾಗೂ ಊರುಗಳಿಂದ ಅತ್ಯಧಿಕ ಭಕ್ತರು ಬಂದು ದೇವರ ದರ್ಶನ, ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದಾರೆ. ಆದರೆ ಅಷ್ಟೇ ಕಸದ ರಾಶಿ ರಾಶಿಗಳು ಸುಬ್ರಹ್ಮಣ್ಯ ಪಾರ್ಕಿಂಗ್...

2026-27ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ(ಮೊರಾರ್ಜಿ ದೇಸಾಯಿ ಹಾಗೂ ಇತರೆ ವಸತಿ ಶಾಲೆಗಳ) 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಅಹ್ವಾನ

ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ನೆಲ್ಲಿತೀರ್ಥ, ಗುರುಪುರ, ಮೂಲ್ಕಿ ತಾಲೂಕಿನ ಕಮ್ಮಾಜೆ, ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಮಚ್ಚಿನ, ಹೊಸಂಗಡಿ, ಬಂಟ್ವಾಳ ತಾಲೂಕಿನ ವಗ್ಗ, ಪುಂಜಾಲಕಟ್ಟೆ, ಪುತ್ತೂರು ತಾಲೂಕಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ...

“ಸಹಕಾರಿ ಕ್ಷೇತ್ರದಲ್ಲಿ ಸೀತಾರಾಮ ರೈಗಳು ನಕ್ಷತ್ರವಾಗಿ ಮಿನುಗುತ್ತಿದ್ದಾರೆ” – ಈಶ್ವರಮಂಗಲದಲ್ಲಿ ಆದರ್ಶ ಸೊಸೈಟಿಯ ಶಾಖೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಕಟೀಲ್

“ಹೃದಯ ಶ್ರೀಮಂತಿಕೆಯ ಮನಸ್ಸುಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಾಗಾಗಿಯೇ ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಇಂದು ಉನ್ನತ ಮಟ್ಟಕ್ಕೆ ತಲುಪಿದೆ. ಸಹಕಾರಿ ಕ್ಷೇತ್ರದಲ್ಲಿ ಸವಣೂರು ಸೀತಾರಾಮ ರೈ ಅವರು ಒಂದು 'ನಕ್ಷತ್ರ' ವಾಗಿ ಮಿನುಗುತ್ತಿದ್ದಾರೆ” ಎಂದು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.ಅವರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯನ್ನು...

ಸಂಪಾಜೆ : ರೈತರಿಗೆ ಜೇನುಪೆಟ್ಟಿಗೆ ವಿತರಣೆ

ಎನ್.ಬಿ.ಪಿ.ಜಿ.ಆರ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಸಂಜೀವಿನಿ ಎನ್.ಆರ. ಎಲ್.ಎಂ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಸಂಪಾಜೆ,  ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟ ಸಂಪಾಜೆ ಸಹಯೋಗದಲ್ಲಿ  ಗ್ರಾಮದ ಪರಿಶಿಷ್ಟ ಜಾತಿಯ ರೈತ ಬಾಂಧವರಿಗೆ ಸಂಸಾರ ಸಮೇತ ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಹನೀಫ್...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ‌.ಜಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಬೆಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಪಲ್ಲವಿ.ಜಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ ಮಾಡಿ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಇವರನ್ನು ದೇವಳದ ವತಿಯಿಂದ ವಿಶೇಷವಾಗಿ ಶಾಲು ಹೊದಸಿ ಪ್ರಸಾದ ನೀಡಿ ಗೌರವಿಸಲಾಯಿತು. ಹಾಗೂ ಸ್ಥಳೀಯ ಮಲೆ ಕುಡಿಯ ಸಮುಧಾಯದ ವತಿಯಿಂದ ವಿಶೇಷವಾಗಿ...

ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿ ಸಮಾಲೋಚನಾ ಸಭೆ ; “ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುತ್ತಿಗಾರು ಸರ್ಕಾರಿ ಆರೋಗ್ಯ ಕೇಂದ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನವನ್ನು ವಿರೋಧಿಸುತ್ತೇವೆ” : ಗ್ರಾಮಸ್ಥರು ; ಈ ಕುರಿತು ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರುಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ತೀರ್ಮಾನ

ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಳ್ಳತ್ತಡ್ಕ ಹಾಗೂ ಬಾಳುಗೋಡು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಗೆ ಸಹಕಾರಿಯಾಗುವಂತೆ ಕೊಲ್ಲಮೊಗ್ರದಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳಿದ್ದರೂ ಕೂಡ ಅಲ್ಲಿ ಖಾಯಂ ಅಥವಾ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಾರ್ವಜನಿಕರು ನಿರಂತರ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲದೀಪ್.ಎಂ.ಡಿ ರವರು...
Loading posts...

All posts loaded

No more posts

error: Content is protected !!