- Monday
- March 9th, 2026
ಬಿಜೆಪಿ ಕೊಡಿಯಾಲ ಶಕ್ತಿ ಕೇಂದ್ರದಲ್ಲಿ ವಿಕಸಿತ್ ಭಾರತ ಕಾರ್ಯಕ್ರಮ "ಸಂಕಲ್ಪದಿಂದ ಸಾಧನೆಗೆ" ಮೋದಿಜಿಯವರ ಆಡಳಿತದ ಹನ್ನೊಂದನೇ ವರ್ಷಾಚರಣೆ ಅಭಿಯಾನದ ಅಂಗವಾಗಿ ಗುರುಪೂರ್ಣಿಮೆ ವಿಶೇಷ ಸಂಧರ್ಭದಲ್ಲಿ ಇಂದು ಕೊಡಿಯಾಲ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಅಭಿಯಾನದ ಜಿಲ್ಲಾ ಸಂಚಾಲಕರಾದ ಹರೀಶ್ ಕಂಜಿಪಿಲಿ, ಸುಳ್ಯ...
ಜೆಸಿಐ ವಲಯ 15ರ ವ್ಯವಹಾರ ವಿಭಾಗದ ಮಾಸಿಕ ಹಬ್ಬದ ಅಂಗವಾಗಿ ವ್ಯವಹಾರ ಸಂಸ್ಥೆ ಅಥವಾ ಅಂಗಡಿಗಳಲ್ಲಿ ಜೆ.ಸಿ ವಾಣಿಯನ್ನು ಪ್ರದರ್ಶಿಸಲು ಪ್ರೆರೇಪಿಸುವ “ಮನೆ-ಮನಗಳಲ್ಲಿ ಜೆಸಿವಾಣಿ” ಕಾರ್ಯಕ್ರಮ ಬೆಳ್ಳಾರೆ ಜೆ.ಸಿ.ಐ ವತಿಯಿಂದ ನಡೆಯಿತು. ಬೆಳ್ಳಾರೆಯ ಕಿರಣ್ ಪ್ರಿಂಟರ್ಸ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಜೆ.ಸಿ.ಐ ನ ಸ್ಥಾಪಕ ಕಾರ್ಯದರ್ಶಿ ಕೃಷ್ಣಪ್ಪ ಮೂಲ್ಯ ಅವರು ಕಿರಣ್ ಪ್ರಿಂಟರ್ಸ್...
(ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)ಬೆಳ್ಳಾರೆ ಗ್ರಾಮ ಪಂಚಾಯಿತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಅಧ್ಯಕ್ಷೆ ನಮಿತಾ.ಎಲ್ ರೈಯವರ ಅಧ್ಯಕ್ಷತೆಯಲ್ಲಿ ಜು.9ರಂದು ಬೆಳ್ಳಾರೆಯ ರಾಜೀವ್ ಗಾಂಧಿ ಸೇವಾ ಕಟ್ಟಡದಲ್ಲಿ ನಾಡಗೀತೆಯೊಂದಿಗೆ ಆರಂಭವಾಯಿತು.ಬೆಳ್ಳಾರೆಯ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ ಯವರು ಸ್ವಾಗತಿಸಿ, ವರದಿ ವಾಚಿಸಿದರು. ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಬಿ.ಐ.ಆರ್.ಟಿ.ಬಿ.ಆರ್.ಸಿ ಕಛೇರಿ...
ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂ ನಲ್ಲಿ ನೂತನ ಚಿನ್ನಾಭರಣಗಳ ಮಳಿಗೆ “ಸ್ವರ್ಣಂ ಜ್ಯುವೆಲ್ಸ್” ಜು.07 ರಂದು ಶುಭಾರಂಭಗೊಂಡಿತು. ಮುಳಿಯ ಗೋಲ್ಡ್ & ಡೈಮಂಡ್ಸ್ ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಅವರು ಮಳಿಗೆಯನ್ನು ಉದ್ಘಾಟಿಸಿದರು. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್...
ಅರಂತೋಡು ಗ್ರಾಮ ಪಂಚಾಯತ್ ನ ಘನತ್ಯಾಜ್ಯ ಘಟಕಕ್ಕೆ ಬೆಂಕಿ ತಗುಲಿದ್ದು, ಘಟಕ ಸಂಪೂರ್ಣ ಹೊತ್ತಿ ಉರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ. ತ್ಯಾಜ್ಯ ಎಲ್ಲವೂ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.
ದೇವಚಳ್ಳ ಗ್ರಾಮದ ಕರಂಗಲ್ಲು ಎಂಬಲ್ಲಿ ಸೇತುವೆಯೊಂದು ಕುಸಿತಗೊಂಡಿದ್ದು, ಹರಿಹರ ಪಳ್ಳತ್ತಡ್ಕ-ಮುಳ್ಳುಬಾಗಿಲು-ಕರಂಗಲ್ಲು ಮೂಲಕವಾಗಿ ಕಂದ್ರಪ್ಪಾಡಿ ಸಂಪರ್ಕಿಸುವ ರಸ್ತೆಯಲ್ಲಿರುವ ಸೇತುವೆ ಇದಾಗಿದೆ. ಕರಂಗಲ್ಲು, ದೊಡ್ಡಕಜೆ, ಹೆರ್ಕಜೆ ಸೇರಿದಂತೆ ಆ ಭಾಗದಿಂದ ಜನರು ಹರಿಹರಕ್ಕೆ ಬರಬೇಕಿದ್ದರೆ ಈ ಸೇತುವೆಯ ಮೂಲಕವೇ ಬರಬೇಕಾಗಿದ್ದು, ಸ್ಥಳಕ್ಕೆ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ರವರು...
ಸುಬ್ರಹ್ಮಣ್ಯ : “ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಬದುಕಿನ ವಿದ್ಯೆ ಅತ್ಯವಶ್ಯಕ. ಜನಪದ ಹಾಡುಗಳೊಂದಿಗೆ ಜೀವನದ ಸಾರವನ್ನು ಯುವ ಜನಾಂಗಕ್ಕೆ ನೀಡುವುದರಿಂದ ಅವರಿಗೆ ಬದುಕಿನ ಅರ್ಥ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಜೀವನ ಕಟ್ಟಿಕೊಳ್ಳಲು ಬೇಕಾದ ವಿಚಾರಗಳನ್ನು ಹಾಡಿನ ಮೂಲಕ ತಿಳಿಸಿದಾಗ ವಿದ್ಯಾರ್ಥಿಗಳ ಮನಸಿನಲ್ಲಿ ಅವುಗಳು ಅಚ್ಚಳಿಯದೆ ನಿಲ್ಲುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ತಿರುವನ್ನು ಒದಗಿಸುತ್ತದೆ” ಎಂದು ಜಿಲ್ಲಾ ಧಾರ್ಮಿಕ...
ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಕಲ್ಲಪಣೆಯ ದಿವಾಕರ ಆಚಾರ್ಯ(45) ಎಂಬವರು ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಾಗಿ ಮೃತಪಟ್ಟ ಘಟನೆ ನಡೆದಿದ್ದು, ಅವರು ವೈರ್ ಅನ್ನು ಕೈಯಲ್ಲಿ ಹಿಡಿಕೊಂಡ ಸ್ಥಿತಿಯಲ್ಲಿದ್ದರು.ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್ ಅವರು ಜು.08 ರಂದು ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು.ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ. ಕೇವಲ ಹೇಳಿಕೆಯಾಗಿ ನಾನು ಈ ರೀತಿಯಾಗಿ ಹೇಳುತ್ತಿಲ್ಲ. ಇತ್ತೀಚೆಗೆ ನಡೆದ ಕಾನ್ಫರೆನ್ಸ್...
ಸುಳ್ಯ ಹಲವಾರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಜಯನಗರ ನಿವಾಸಿ ಸುರೇಶ್ ಕಾಮತ್ ಇವರ ಪತ್ನಿ ಶುಭಾಷಿನಿ ಕಾಮತ್ ಬೋಳುಗಲ್ಲು ಇಂದು ಮುಂಜಾನೆ ನಿಧನರಾದರು. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಇಂದು ಮುಂಜಾನೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಮಂಡೆಕೋಲು ಬೋಳುಗಲ್ಲು ಪದ್ಮಾವತಿ-ಶಶಿಧರ್ ನಾಯಕ್ ದಂಪತಿಗಳ ಪುತ್ರಿಯಾಗಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts
